More

    ದೇಶದ್ರೋಹಿಗಳನ್ನು ಎನ್ಕೌಂಟರ್ ಮಾಡಿ

    ಕಲಬುರಗಿ: ಪಾಕಿಸ್ತಾನ ಪರ ಘೋಷಣೆ ಕೂಗಿದ ಹುಬ್ಬಳ್ಳಿ ಕೆಎಲ್ಇ ಕಾಲೇಜಿನ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಎನ್ಕೌಂಟರ್ ಮಾಡಬೇಕು ಮತ್ತು ಇವರನ್ನು ಬಿಡುಗಡೆ ಮಾಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರನ್ನು ಅಮಾನತುಗೊಳಿಸಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ.
    ದೇಶದ್ರೋಹಿ ಘೋಷಣೆ ಕೂಗಿದ ಮೂವರ ವಿರುದ್ಧ ನಾನ್ಬೇಲೆಬಲ್ ಪ್ರಕರಣ ದಾಖಲಿಸಬೇಕಾಗಿತ್ತು. ಮೊದಲು ಅವರನ್ನು ಬಂಧಿಸಿ ಒಂದೇ ದಿನದಲ್ಲಿ ಬಿಡುಗಡೆ ಮಾಡಿದ್ದರ ಹಿಂದಿನ ರಹಸ್ಯ ಬಯಲಾಗಬೇಕು. ಪೊಲೀಸ್ ಆಯುಕ್ತರನ್ನು ಅಮಾನತುಗೊಳಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
    ದೇಶ ದ್ರೋಹಿಗಳನ್ನು ಬಂಧಿಸುವಂತೆ ಪ್ರತಿಭಟನೆ ಮಾಡಬೇಕಾ? ಸಕರ್ಾರಕ್ಕಾಗಲಿ, ಪೊಲೀಸರಿಗಾಗಲಿ ದೇಶದ ಮೇಲೆ ಅಭಿಮಾನ ಇಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ ಮುತಾಲಿಕ್, ದೇಶದ್ರೋಹಿಗಳನ್ನು ರಕ್ಷಿಸುವ ಕೆಲಸ ಮಾಡುವವರು ಹೆತ್ತ ತಾಯಿಗೆ ದ್ರೋಹ ಬಗೆದಂತೆ ಎಂದರು.
    ನಿಷೇಧಾಜ್ಞೆ ಜಾರಿ ಇದ್ದಾಗಲೂ ಡಿಸೆಂಬರ್ನಲ್ಲಿ ಕಲಬುರಗಿಯಲ್ಲಿ ಸಿಎಎ ವಿರುದ್ಧ ಬೃಹತ್ ರ್ಯಾಲಿ ನಡೆಸುವ ಮೂಲಕ ಕಾನೂನು ಉಲ್ಲಂಘಿಸಲಾಗಿದೆ. ಸಂವಿಧಾನ ಬಗ್ಗೆ ಮಾತನಾಡುವವರೇ ಅದನ್ನು ಉಲ್ಲಂಘಿಸಿದ್ದಾರೆ ಎಂದು ಕಿಡಿಕಾರಿದರು.
    ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಖಾದಿ, ಎಂ.ಎಸ್. ಪಾಟೀಲ್ ನರಿಬೋಳ ಇದ್ದರು.

    ಕೇಂದ್ರ ಸರ್ಕಾದಿಂದ ಉಚಿತ ಸೀಟ್ ಪಡೆದ ಮೂವರು ವಿದ್ಯಾಥರ್ಿಗಳು ಭಾರತದ ವಿರುದ್ಧ ಮಾತನಾಡುತ್ತಾರೆ ಎಂದರೆ ನಾಯಿಗಿಂತ ಕಡೆ. ತುಣಕು ರೊಟ್ಟಿ ಹಾಕಿದರೆ ನಾಯಿ ಕೂಡ ನೀಯತ್ತಿನಿಂದ ಮನೆ ಕಾಯುತ್ತದೆ. ದೇಶದ ಅನ್ನ ತಿಂದು, ಸೌಲಭ್ಯ ಪಡೆದು ಪಾಕಿಸ್ತಾನ ಜಿಂದಾಬಾದ್ ಎನ್ನುವ ನಾಯಿಗಳನ್ನು ಓಡಾಡಿಸಿ ಹೊಡೆಯಬೇಕು.
    | ಶ್ರೀ ಸಿದ್ಧಲಿಂಗ ಸ್ವಾಮೀಜಿ
    ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts