More

    ದುರ್ಗದಲ್ಲೂ ಗೋಬ್ಯಾಕ್ ಅಭಿಯಾನ

    ಚಿತ್ರದುರ್ಗ: ವಲಸೆ ರಾಜಕಾರಣಕ್ಕೆ ಮನ್ನಣೆ ನೀಡದೆ, ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಟಿಕೆಟ್ ಆಕಾಂಕ್ಷಿಯ ಬೆಂಬಲಿಗರು ಹಾಗೂ ಪಕ್ಷದ ಗುಂಪೊಂದು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿತು.
    ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಮೆರವಣಿಗೆ ಮೂಲಕ ಜಿಲ್ಲಾ ಬಿಜೆಪಿ ಕಚೇರಿಗೆ ತೆರಳಿ ಜಿಲ್ಲಾಧ್ಯಕ್ಷ ಎ.ಮುರಳಿ ಅವರಿಗೆ ಮನವಿ ಸಲ್ಲಿಸಲಾಯಿತು.
    ಈ ವೇಳೆ ಕೆಲವರು ಪಕ್ಷದ ಕಚೇರಿಗೆ ನುಗ್ಗುಲು ಪ್ರಯತ್ನಿಸಿದರು. ಇನ್ನೂ ಕೆಲವರು ಕಿಟಕಿ ಗಾಜುಗಳಿಗೆ ಹಾನಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
    ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹಾಗೂ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರ ವಿರುದ್ಧ ಗೋಬ್ಯಾಕ್ ಭಿತ್ತಿಪತ್ರ ಹಿಡಿದಿದ್ದ ಪ್ರತಿಭಟನಕಾರರು, ನಮಗೆ ಸ್ಥಳೀಯರು ಬೇಕು, ಹೊರಗಿನವರು ಬೇಕಿಲ್ಲ ಎಂದು ಘೋಷಣೆ ಕೂಗಿದರು.
    ಹೊರಗಿನವರಿಂದ ನಮ್ಮ ಜಿಲ್ಲೆಗೆ ಏನೂ ಕೊಡುಗೆ ಇಲ್ಲ. ಗೆದ್ದ ಬಳಿಕ ಜಿಲ್ಲೆ ಹಾಗೂ ಜನರನ್ನು ಕಡೆಗಣಿಸುತ್ತಾರೆ. ತೀವ್ರ ಬರಗಾಲವಿದೆ. ರೈತರು ಸಂಕಷ್ಟದಲ್ಲಿ ಇದ್ದಾರೆ. ಹಿಂದುಳಿದ ಈ ಜಿಲ್ಲೆಯಲ್ಲಿ ನಿರುದ್ಯೋಗ, ನೀರಾವರಿ ಮತ್ತಿತರ ಸಮಸ್ಯೆಗಳಿವೆ. ಹಲವು ವರ್ಷಗಳಿಂದ ಹೊರಗಿನವರು ಅಧಿಕಾರ ಅನುಭವಿಸಿರುವುದರಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ದೂರಿದರು.
    ಜಿಲ್ಲೆ ಅತ್ಯಂತ ಹಿಂದುಳಿದಿದೆ. ಜಿಲ್ಲೆಯ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವುಗಳಿಗೆ ಪರಿಹಾರ ಕಲ್ಪಿಸುವ ನಾಯಕರುಬೇಕು. ‘ಈ ನಮ್ಮ ಕೂಗು ನಮ್ಮ ಜಿಲ್ಲೆ ಉಳಿವಿಗಾಗಿ’ ಎಂದ ಪ್ರತಿಭಟನಾಕಾರರು, ಎಂ.ಸಿ.ರಘುಚಂದನ್‌ಗೆ ಟಿಕೆಟ್ ಕೊಟ್ಟರೆ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲಾಗುವುದು ಎಂದು ಹೇಳಿದರು.
    ಬಳಿಕ ಪಕ್ಷದ ರಾಜ್ಯ ಮತ್ತು ಕೇಂದ್ರ ನಾಯಕರಿಗೆ ಈ ಸಂದೇಶ ರವಾನಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಅವರಿಗೆ ಮನವಿ ಸಲ್ಲಿಸಿದರು.
    ಪುರಸಭೆ ಸದಸ್ಯರಾದ ಅಶೋಕ್, ಬಸವರಾಜ್, ಮುರುಗೇಶ್, ಮುಖಂಡರಾದ ಟಿ.ಮಹಾಂತೇಶ್, ಶಿವಕುಮಾರ್, ಪಿ.ಅಭಿಷೇಕ್, ಪ್ರವೀಣ್, ನಿತಿನ್, ಮೋಹನ್, ರಂಗಸ್ವಾಮಿ, ಅಂಕಳಪ್ಪ, ರಾಜಣ್ಣ, ಶಂಕರಪ್ಪ, ರೂಪಾ ಸುರೇಶ್, ರತ್ನಮ್ಮ, ಲೋಲಾಕ್ಷಮ್ಮ, ಉಮೇಶ್, ನಾಗರಾಜ್, ಸರಸ್ವತಿ, ರುದ್ರೇಗೌಡ್ರು, ಚಂದ್ರಣ್ಣ, ದುರ್ಗೆಶ್, ಉಮೇಶ್, ಮಂಜಣ್ಣ, ಎ.ಗಿರೀಶ್ ಮತ್ತಿತರರು ಇದ್ದರು.

    *ಕೋಟ್
    ಟಿಕೆಟ್ ಘೋಷಣೆ ಇನ್ನೂ ಆಗಿಲ್ಲ. ಪಕ್ಷದ ವರಿಷ್ಠರು ಎಲ್ಲ ರೀತಿಯ ಚಿಂತನೆ ನಡೆಸಿ ಟಿಕೆಟ್ ಕೊಡಲಿದ್ದಾರೆ. ನೀವು ಸಲ್ಲಿಸಿರುವ ಮನವಿಯನ್ನು ವರಿಷ್ಠರ ಗಮನಕ್ಕೆ ತಕ್ಷಣ ತರಲಾಗುವುದು.
    ಎ.ಮುರಳಿ, ಬಿಜೆಪಿ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts