More

    ದಾವಣಗೆರೆಯಲ್ಲಿ ಐಎಎಸ್ ತರಬೇತಿ ಕೇಂದ್ರ – ಪರೀಕ್ಷಾ ಮಾರ್ಗದರ್ಶಿ ಕಾರ್ಯಕ್ರಮದಲ್ಲಿ ಜಿ.ಬಿ.ವಿನಯಕುಮಾರ್ ಆಶಯ –

    ದಾವಣಗೆರೆ: ಮುಂಬರುವ ದಿನಗಳಲ್ಲಿ ದಾವಣಗೆರೆಯಲ್ಲಿ ಐಎಎಸ್ ತರಬೇತಿ ಕೇಂದ್ರವನ್ನು ತೆರೆಯುವ ಆಲೋಚನೆ ಇದೆ ಎಂದು ಇನ್‌ಸೈಟ್ಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ.ಬಿ.ವಿನಯಕುಮಾರ್ ಹೇಳಿದರು.
    ಇನ್‌ಸೈಟ್ಸ್ ಸಂಸ್ಥೆ ಹಾಗೂ ಬಂಧುತ್ವ ಫೌಂಡೇಷನ್ ಸಹಯೋಗದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷಾ ಮಾರ್ಗದರ್ಶಿ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಭಾರತೀಯ ತಂತ್ರಜ್ಞಾನ ಸಂಸ್ಥೆ, ಭಾರತೀಯ ವಿಜ್ಞಾನ ಸಂಸ್ಥೆಯಂತಹ ದೊಡ್ಡ ಕೇಂದ್ರಗಳು ದಾವಣಗೆರೆಗೂ ಬರಬೇಕಿದೆ. ಸ್ಥಳೀಯ ವಿದ್ಯಾರ್ಥಿಗಳಿಗೂ ಅನುಕೂಲ ಆಗಲಿದೆ ಎಂದು ಹೇಳಿದರು.
    ಬಡವರು, ಹಿಂದುಳಿದವರ ಮಕ್ಕಳು ಪಾಲಕರ ವೃತ್ತಿಯನ್ನೇ ನೆಚ್ಚಿ ಕೂರಬೇಕಿಲ್ಲ. ಸರ್ಕಾರಿ ಹುದ್ದೆ ಅಥವಾ ಸ್ವ ಉದ್ಯಮ ಶುರು ಮಾಡುವ ಬಗ್ಗೆ ಕನಸು ಕಾಣಬೇಕು. ಸೋಲನ್ನು ಕೂಡ ಸ್ವೀಕರಿಸುವ ಮನೋಭಾವ ರೂಢಿಸಿಕೊಳ್ಳಬೇಕು. ಶಾಲಾ ಕಾಲೇಜು ಹಂತದಿಂದಲೇ ಇದನ್ನು ಹಿಮ್ಮೆಟ್ಟಿಸಬೇಕು. ಇದಕ್ಕಾಗಿ ವ್ಯಕ್ತಿತ್ವ ವಿಕಸನ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
    ನೋಬೆಲ್ ಪ್ರಶಸ್ತಿ ಪಡೆಯುಬೇಕೆಂಬ ಮಹತ್ವಾಕಾಂಕ್ಷೆ ನನಗಿತ್ತು. ಹೀಗಾಗಿ ನೋಬೆಲ್ ಪ್ರಶಸ್ತಿ ಪುರಸ್ಕೃತರು ನೀಡುವ ವಿಶೇಷ ಉಪನ್ಯಾಸಗಳಲ್ಲಿ ಭಾಗಿಯಾಗುತ್ತಿದ್ದೆ ಎಂದು ಹೇಳಿದ ವಿನಯ್‌ಕುಮಾರ್, ಯಾವುದೇ ವಿಚಾರಗೋಷ್ಠಿ, ಉಪನ್ಯಾಸ, ಕಲೆ-ವಿಜ್ಞಾನ ಮೇಳವೇ ಇರಲಿ ತಪ್ಪದೇ ಭಾಗಿಯಾಗಿ ಎಂದರು.
    ವಿದ್ಯಾರ್ಥಿಗಳು ಸಾಹಿತ್ಯ ಪುಸ್ತಕಗಳನ್ನು ಓದಿದರೆ ಹೊಸ ಯೋಚನಾ ಲಹರಿ ಬೆಳೆಯಲಿದೆ. ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆ ಬರೆಯುವ ಪದವೀಧರರಲ್ಲಿ ನಿರಂತರ ಅಧ್ಯಯನಶೀಲತೆ ಇರಬೇಕು. ಕೆಎಸ್‌ಇಆರ್‌ಟಿ ಪುಸ್ತಕಗಳನ್ನು ಓದಿ, ಪ್ರಸಕ್ತ ವಿದ್ಯಮಾನಗಳನ್ನು ಅರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ. ಇಂಗ್ಲಿಷ್ ಪತ್ರಿಕೆಗಳನ್ನು ಅಭ್ಯಾಸ ಮಾಡಬೇಕು. ಪ್ರಬಂಧ ಬರಹಗಳನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
    ಐಎಎಸ್, ಐಪಿಎಸ್ ತರಬೇತಿ ನೀಡುತ್ತಿರುವ ಇಸೈಟ್ಸ್ ಸಂಸ್ಥೆ ದೇಶದಲ್ಲಿ ಮೂರನೇ ಉತ್ತಮ ಸಂಸ್ಥೆಯಾಗಿದೆ. ಸಾವಿರಾರು ಜನರು ಇದಡಿ ತರಬೇತಿ ಪಡೆದು ಅಧಿಕಾರಿಗಳಾಗಿದ್ದಾರೆ. ಈ ಸಂಸ್ಥೆಯಿಂದ ಐಎಎಸ್ ಐಪಿಎಸ್ ಆಕಾಂಕ್ಷಿತ ಬಡ ಪ್ರತಿಭಾವಂತರಿಗೆ ನೆರವು ಕಲ್ಪಿಸಲಾಗುವುದು ಎಂದು ಹೇಳಿದರು.
    ಸಂಸದರಾಗುವವರು ವಿನಯವಂತರಾಗಿರಬೇಕು. ಕ್ಷೇತ್ರದ ದೂರದೃಷ್ಟಿ ಇರಬೇಕು. ನೊಂದವರಿಗೆ ದನಿಯಾಗಬೇಕು. ಅಭಿವೃದ್ಧಿ ಜತೆಗೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು. ವೈಯಕ್ತಿಕವಾಗಿ ಆಸ್ತಿ ವೃದ್ಧಿಸಿಕೊಳ್ಳಬಾರದು. ಉತ್ತಮರು ರಾಜಕೀಯಕ್ಕೆ ಬಂದರೆ ಬದಲವಣೆ ಮಾಡಬಹುದು. ಈ ನಂಬಿಕೆಯಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧಾಕಾಂಕ್ಷಿಯಾಗಿದ್ದೇನೆ ಎಂದು ತಿಳಿಸಿದರು.
    ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಯ ಪ್ರಿಲಿಮ್ಸ್, ಮೇನ್ಸ್ ಪರೀಕ್ಷೆ ಹಾಗೂ ಸಂದರ್ಶನ ವಿಚಾರವಾಗಿ ಕೆಲವು ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಬಂಧುತ್ವ ಫೌಂಡೇಷನ್ ಅಧ್ಯಕ್ಷ ರಾಘು ದೊಡ್ಮನಿ, ಇನ್‌ಸೈಟ್ಸ್ ಸಂಸ್ಥೆಯ ವ್ಯವಸ್ಥಾಪಕ ಶರತ್‌ಕುಮಾರ್, ಕಾಲೇಜಿನ ಪ್ರಾಧ್ಯಾಪಕರಾದ ಎನ್. ಶಿವರಾಜ್, ಪೂರ್ಣಿಮಾ, ಶೇಷಪ್ಪ,ಕರಿಯಪ್ಪ ಮಳಿಗೇರ್, ನ್ಯಾಯವಾದಿ ಪ್ರೇಮಾ ಜಾಧವ್ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts