More

    ದಾಂಪತ್ಯ ಜೀವನಕ್ಕೆ ಕಾಲಿಟ್ಟ 548 ಜೋಡಿ

    ಬೀದರ್: ಮಹಾ ಮಾನವ ಚಾರಿಟೇಬಲ್ ಟ್ರಸ್ಟ್​ನಿಂದ ರೇಕುಳಗಿ ಮೌಂಟ್ ಬುದ್ಧ ವಿಹಾರದಲ್ಲಿ ಸೋಮವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರಳ ಸಾಮೂಹಿಕ ವಿವಾಹೋತ್ಸವದಲ್ಲಿ 548 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

    ನವ ಜೋಡಿಗಳು ಪರಸ್ಪರ ಹಾರ ಬದಲಿಸಿಕೊಂಡು ಸತಿ-ಪತಿಗಳಾದರು. ಬೌದ್ಧ ಧರ್ಮ ಗುರುಗಳು, ಜನಪ್ರತಿನಿಧಿಗಳು, ಗಣ್ಯರು, ಸಂಘ-ಸಂಸ್ಥೆ ಪದಾಧಿಕಾರಿಗಳು, ಕುಟುಂಬ ಸದಸ್ಯರು ಸಮಾರಂಭಕ್ಕೆ ಸಾಕ್ಷಿಯಾದರು.

    ಕಾರ್ಯಕ್ರಮ ಉದ್ಘಾಟಿಸಿದ ಕೆಎಸ್ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಸರಳ ವಿವಾಹಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಲಿದೆ. ಇಂಥ ಕಾರ್ಯಕ್ರಮ ಪ್ರತಿವರ್ಷ ಆಯೋಜಿಸಬೇಕು ಎಂದು ಸಲಹೆ ನೀಡಿದರು.

    ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ, ಮಹಾ ಪ್ರಧಾನ ಕಾರ್ಯದಶರ್ಿ ಅನೀಲಕುಮಾರ ಬೆಲ್ದಾರ್, ಟ್ರಸ್ಟ್ ಅಧ್ಯಕ್ಷ ಅಶೋಕ ಮಾಳಗೆ ಮಾತನಾಡಿದರು.

    ಭಂತೆ ರೇವತ್, ಧಮ್ಮಪಾಲ ಸಾನ್ನಿಧ್ಯ, ಗ್ರಾಪಂ ಅಧ್ಯಕ್ಷ ಎಂ.ಡಿ. ಸಿ ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಮನ್ನಾಎಖೇಳ್ಳಿ ಪಿಎಸ್ಐ ಸುದರ್ಶನರಡ್ಡಿ, ಪಿಡಿಒ ಸುಜಾತಾ ನಂದಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಪ್ರಮುಖರಾದ ಸಂಗಮೇಶ ನಾಸಿಗಾರ, ಸುರೇಶ ಸಿಂಧೆ, ಬಾಬು ಸಂಗ್ರಾಮ, ಸುರೇಶ ಮಾಶೆಟ್ಟಿ, ರಾಜು ಸಿಂಧೆ ಇತರರಿದ್ದರು.

    ಟ್ರಸ್ಟ್ ಕಾರ್ಯದಶರ್ಿ ಬಾಬು ಆಣದೂರ ಸ್ವಾಗತಿಸಿದರು. ಅರುಣ ಪಟೇಲ್ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಡೋಳೆ ನಿರೂಪಣೆ ಮಾಡಿದರು. ಸುರೇಖಾ ವಂದಿಸಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

    ಜಿಲ್ಲೆಯ ವಿವಿಧೆಡೆಯಿಂದ 600 ಜೋಡಿ ನೋಂದಣಿ ಮಾಡಿಸಿದ್ದರು. ಅದರಲ್ಲಿ 548 ಜೋಡಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದರು.
    | ಅಶೋಕ ಮಾಳಗೆ, ಮಹಾ ಮಾನವ ಟ್ರಸ್ಟ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts