More

    ದಂಡಾವತಿ ಯೋಜನೆ: 750 ಕೋಟಿ ರೂ. ವೆಚ್ಚದ 37ಬ್ಯಾರೇಜುಗಳಿಗೆ ತಿಂಗಳಾಂತ್ಯದಲ್ಲಿ ಸಿಎಂ ಶಂಕುಸ್ಥಾಪನೆ

    ಸೊರಬ: ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ದಂಡಾವತಿ ಯೋಜನೆಯಡಿ 750 ಕೋಟಿ ರೂ. ವೆಚ್ಚದಲ್ಲಿ 37 ಬ್ಯಾರೇಜ್‌ಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ತಿಳಿಸಿದರು.
    ಶುಕ್ರವಾರ ಸಂಜೆ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯ ಜಂಗಿನಕೊಪ್ಪ ಗ್ರಾಮದ 18-35 ಎಕರೆ ವಿಸ್ತೀರ್ಣದಲ್ಲಿ 49.68 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ಒಂದೇ ಸೂರಿನಡಿ ಆಡಳಿತ ಸೌಧ ನಿರ್ಮಾಣವಾಗಲಿದೆ. ವಿವಿಧ ಇಲಾಖೆಗಳ ಸರ್ಕಾರಿ ಕಟ್ಟಡಗಳನ್ನು ಒಂದೇ ಸೂರಿನಡಿ ತಂದು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ, ತಾಲೂಕಿನ ಸುಗಮ ಆಡಳಿತಕ್ಕೆ ಅನುಕೂಲ ಕಲ್ಪಿಸುವಲ್ಲಿ ವಿಸ್ತಾರ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಹೇಳಿದರು.
    ಬಿಜೆಪಿ ಸರ್ಕಾರದಿಂದ ಮಾತ್ರ ಜನಪರ ಯೋಜನೆಗಳು ಸಾಕಾರಗೊಳ್ಳುತ್ತದೆ. ವಿಸ್ತಾರ ಯೋಜನೆಯನ್ನು ಬಹಳ ಆಸಕ್ತಿ, ಕಾಳಜಿಯಿಂ ಶಾಸಕ ಕುಮಾರ್ ಬಂಗಾರಪ್ಪ ಜಾರಿಗೊಳಿಸಿದ್ದಾರೆ ಎಂದು ಹೇಳಿದರು.
    ನಮೋ ವೇದಿಕೆ ಹೇಳಿಕೆ ಖಂಡನೆ: ನಮೋ ವೇದಿಕೆ ಮುಖಂಡರು ಬಿಜೆಪಿ ವಿರುದ್ಧ ಪದೇಪದೆ ಹೇಳಿಕೆ ನೀಡುತ್ತಿರುವುದನ್ನು ಪಕ್ಷ ಖಂಡಿಸುತ್ತದೆ. ಜಿಲ್ಲಾಧ್ಯಕ್ಷರು ನಮೋ ವೇದಿಕೆಯ ಹಲವರನ್ನು ಈಗಾಗಲೇ ಪಕ್ಷದ ಜವಾಬ್ದಾರಿಯಿಂದ ಬಿಡುಗಡೆ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿ ಅಭ್ಯರ್ಥಿಯ ಆಯ್ಕೆ ಯಾರ ಹೇಳಿಕೆಯಿಂದಲೂ ಆಗುವುದಿಲ್ಲ. ಸೂಕ್ತ ಸಮಯದಲ್ಲಿ ಸಮಿತಿ, ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ ಅಭ್ಯರ್ಥಿಯ ಆಯ್ಕೆ ನಡೆಯುವುದು ಪಕ್ಷದ ತತ್ವ, ಸಿದ್ದಾಂತ ಎಂದು ಪ್ರಕಾಶ್ ತಲಕಾಲಕೊಪ್ಪ ಹೇಳಿದರು. ನಮೋ ವೇದಿಕೆಗೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲವೆಂದು ಹಲವು ಬಾರಿ ತಿಳಿಸಲಾಗಿದೆ. ನಮ್ಮ ಮುಖ್ಯ ಉದ್ದೇಶ ಪಕ್ಷ ಸಂಘಟನೆಯಾಗಿದ್ದು ಈ ಮೂಲಕ ಬಲವರ್ಧನೆಗೊಳಿಸಿ ಕಾರ್ಯಕರ್ತರನ್ನು ಹುರಿದುಂಬಿಸಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts