More

    ತ್ರಿಶತಕ ದಾಟಿದ ಕರೊನಾ ಪಾಸಿಟಿವ್

    ಕಲಬುರಗಿ: ಜಿಲ್ಲೆಯಲ್ಲಿ ಕರೊನಾ ತ್ರಿಶತಕದ ಗಡಿ ದಾಟುವ ಮೂಲಕ ರಾಜ್ಯದಲ್ಲಿ ಎರಡನೇ ಸ್ಥಾನಕ್ಕೇರಿದೆ. ಮೊದಲ ಸ್ಥಾನ ಬೆಂಗಳೂರಿನದ್ದಾಗಿದೆ. ಸೋಮವಾರ ಮತ್ತೆ 25 ಹೊಸ ಪ್ರಕರಣ ದೃಢಪಟ್ಟಿದ್ದು, ಇದರಲ್ಲಿ ಜಗತ್ತನ್ನೇ ನೋಡದ ಒಂದು ಹಸುಗೂಸು ಮತ್ತು ಮೂವರು ಮಕ್ಕಳು ಸೇರಿವೆ. ಒಟ್ಟು ಸೋಂಕಿತರ ಸಂಖ್ಯೆ 306ಕ್ಕೇರಿದೆ.
    ದಾಖಲಾದ ಪ್ರಕರಣಗಳಲ್ಲಿ ನಾಲ್ಕು ತಿಂಗಳ ಗಂಡು ಮಗು, ಮೂರು ವರ್ಷದ ಹೆಣ್ಣು ಮಗು, ಏಳು ವರ್ಷದ ಬಾಲಕ, ಎಂಟು ವರ್ಷ, 12 ಮತ್ತು 15 ವರ್ಷದ ಬಾಲಕಿಯರಿದ್ದಾರೆ. 65 ವರ್ಷದ ವೃದ್ಧೆಗೂ ಸೋಂಕು ಅಂಟಿದೆ. ಇಂದಿನ ಪ್ರಕರಣಗಳಲ್ಲಿ ಏಳು ಮಹಿಳೆಯರು ಮತ್ತು 18 ಪುರುಷರು ಇದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
    ಈ ಎಲ್ಲ ಪ್ರಕರಣಗಳಿಗೆ ಮಹಾರಾಷ್ಟ್ರವೇ ಮೂಲ. ದುಡಿಯಲು ಅಲ್ಲಿಗೆ ತೆರಳಿ ವಾಪಸಾಗಿದ್ದ ಇವರೆಲ್ಲರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಇಡಲಾಗಿತ್ತು. ಅವರ ರಕ್ತ ಮತ್ತು ಗಂಟಲು ದ್ರವ ಪರೀಕ್ಷಿಸಿದಾಗ ಸೋಂಕು ಖಚಿತವಾಗಿದ್ದು, ಕೋವಿಡ್-19 ಆಸ್ಪತ್ರೆಗೆ ಸೇರಿಸಲಾಗಿದೆ.
    25 ಪ್ರಕರಣಗಳಲ್ಲಿ ಆಳಂದ-10, ಕಾಳಗಿ-04, ಚಿಂಚೋಳಿ-03, ಚಿತ್ತಾಪುರ-03, ಅಫಜಲಪುರ-02, ಸೇಡಂ-02 ಹಾಗೂ ಕಲಬುರಗಿ ನಗರಕ್ಕೆ ಸೇರಿದ್ದಾಗಿದೆ.
    ಕಲಬುರಗಿ ನಗರದ ಮೆಹಬೂಬ್ ಸುಬಾನಿ ಕಿಲ್ಲಾ ಬಳಿಯ ನ್ಯೂ ಬ್ಯಾಂಕ್ ಕಾಲನಿಯ 25 ವರ್ಷದ ಯುವಕನಿಗೆ ಸೋಂಕು ಕಾಣಿಸಿಕೊಂಡಿದೆ. ಈತನೂ ಮಹಾರಾಷ್ಟ್ರದಿಂದ ಬಂದವನಾಗಿದ್ದಾನೆ. 22, 35 ವರ್ಷದ ಮಹಿಳೆಯರು, 30 32, 34, 35, 44, 45, 54 ವರ್ಷದ ಪುರುಷರು, 16, 19, 20, 26, ತಲಾ 20 ವರ್ಷದ ಇಬ್ಬರು, ತಲಾ 25 ವರ್ಷದ ಇಬ್ಬರು ಯುವಕರು ಸೋಂಕಿತರಾಗಿದ್ದಾರೆ. ಒಟ್ಟು ಸೋಂಕಿತರಲ್ಲಿ ಏಳು ಜನ ಮೃತಪಟ್ಟರೆ, 128 ಜನ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ. 170 ಸಕ್ರಿಯ ಪ್ರಕರಣಗಳಿವೆ.
    ಮತ್ತೆರಡು ಪ್ರಕರಣಗಳು ಪಾಸಿಟಿವ್ ಸೇಡಂ: ತಾಲೂಕಿನಲ್ಲಿ ಸೋಮವಾರ ಎರಡು ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಎರಡೂ ಪ್ರಕರಣಗಳು ಸೇಡಂ ಪಟ್ಟಣದ ಮಿಸ್ಕಿನಪುರ ನಿವಾಸಿಗಳಾಗಿದ್ದಾರೆ. ಇವರಿಬ್ಬರೂ ಔರಂಗಾಬಾದಿನಲ್ಲಿ ಜರುಗಿದ ಜಮಾತ್ ಸಭೆಯಲ್ಲಿ ಪಾಲ್ಗೊಂಡು ಮರಳಿ ಬಂದಿದ್ದರು. ಇವರನ್ನು ಕಾಳಗಿ ಕ್ವಾರಂಟೈನ್ ಕೇಂದ್ರದಲ್ಲಿ 19 ದಿನ ಇರಿಸಲಾಗಿತ್ತು. ಮೇ 28ರಂದು ಮನೆಗೆ ಬಂದಿದ್ದರು. ಇದೀಗ ಅವರ ವರದಿಯೂ ಪಾಸಿಟಿವ್ ಬಂದಿದ್ದು, ಅವರನ್ನು ಕಲಬುರಗಿಯ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದ್ದು ಬಡಾವಣೆ ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts