More

    ತೆಲಂಗಾಣದಿಂದ ಪ್ರಕರಣ ವರ್ಗಾಯಿಸಿ

    ಚಿಕ್ಕಮಗಳೂರು: ತೆಲಂಗಾಣ ಶಾಸಕ ಟಿ.ರಾಜಾಸಿಂಹ ಅವರಿಗೆ ಅಲ್ಲಿನ ಸರ್ಕಾರದಿಂದ ನ್ಯಾಯ ಸಿಗುವ ಸಾಧ್ಯತೆ ಕಡಿಮೆ. ಹಾಗಾಗಿ ಅವರ ಎಲ್ಲ ಪ್ರಕರಣಗಳನ್ನು ಮಹಾರಾಷ್ಟ್ರ, ಕರ್ನಾಟಕ ಅಥವಾ ಗೋವಾ ಸೇರಿದಂತೆ ನೆರೆಯ ರಾಜ್ಯಕ್ಕೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿ ಹಿಂದು ಜನಜಾಗೃತಿ ಸಮಿತಿ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

    ಟಿ.ರಾಜಾಸಿಂಹ ಇರುವ ಕಾರಾಗೃಹದಲ್ಲಿ ಭಯೋತ್ಪಾದಕರು ಇರುವುದರಿಂದ ಅವರ ಪ್ರಾಣಕ್ಕೆ ಅಪಾಯವಿದೆ. ಹಾಗಾಗಿ ಅವರನ್ನು ಸುರಕ್ಷಿತ ಕಾರಾಗೃಹದಲ್ಲಿಡಬೇಕು. ಅವರಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

    ತೆಲಂಗಾಣದಲ್ಲಿ ಹಾಸ್ಯಕಲಾಕಾರ ಮುನ್ವರ ಫಾರೂಕಿ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದೆಂದು ಶಾಸಕ ಟಿ.ರಾಜಾಸಿಂಹ ಒತ್ತಾಯಿಸಿದ್ದರು. ಆದರೆ ಪೊಲೀಸ್ ಭದ್ರತೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ನಂತರ ಟಿ.ರಾಜಾಸಿಂಹ ಅವರು ವಿಡಿಯೋವನ್ನು ಪ್ರಸಾರ ಮಾಡಿದ್ದರು. ಹಾಗಾಗಿ ಅವರನ್ನು ಬಂಧಿಸದಿದ್ದರೆ ಶಾಸಕರ ಮನೆ ಮೇಲೆ ದಾಳಿ ನಡೆಸಲಾಗುವುದು. ಕಾನೂನು ಮತ್ತು ಸುವ್ಯವಸ್ಥೆ ಬಿಗಡಾಯಿಸಿದರೆ ಅದಕ್ಕೆ ನಾನು ಜವಾಬ್ದಾರನಲ್ಲ ಎಂದು ಕಾಂಗ್ರೆಸ್ ಕಾರ್ಯದರ್ಶಿ ರಶೀದ್ ಖಾನ್ ಎಂಬುವರು ಮುಸ್ಲಿಮರಿಗೆ ಕರೆ ನೀಡಿ ಬೆದರಿಕೆ ಹಾಕಿದ್ದರು. ಟಿ.ರಾಜಾಸಿಂಹರ ವಿರುದ್ಧ ಮತಾಂಧರು ನಡೆಸಿದ ಆಂದೋಲನದ ಸಮಯದಲ್ಲಿ ಅನೇಕ ಸ್ಥಳಗಳಲ್ಲಿ ಹಿಂಸಾಚಾರ ನಡೆದಿದ್ದು ಪೊಲೀಸರು ಹಲವು ಮತಾಂಧರನ್ನು ಬಂಧಿಸಿದ್ದರು. ನಂತರ ಅಲ್ಲಿನ ಸಂಸದ ಅಸಾದುದ್ದೀನ್ ಒವೈಸಿಯು ಪೊಲೀಸರ ಮೇಲೆ ಒತ್ತಡ ಹೇರಿ ಎಲ್ಲರನ್ನೂ ಬಿಡುಗಡೆಗೊಳಿಸಿದ್ದಾನೆ ಎಂದು ಆರೋಪಿಸಿದರು.

    ತೆಲಂಗಾಣದಲ್ಲಿ ಉದ್ರಿಕ್ತ ಸ್ಥಿತಿ ನಿರ್ವಣವಾಗಲು ಮಂತ್ರಿಗಳಾದ ಕೆ.ಟಿ.ರಾಮಾರಾವ್, ಮಹಮದ್​ಅಲಿ, ಸಂಸದ ಅಸಾದುದ್ದೀನ್ ಒವೈಸಿ ಕಾರಣ. ತೆಲಂಗಾಣದ ಪೊಲೀಸರು ಒವೈಸಿ ಕೈಗೊಂಬೆಗಳಾಗಿದ್ದಾರೆ. ಒವೈಸಿ ಬೆಂಬಲಿಗರು ಕಲ್ಲುತೂರಾಟ ನಡೆಸಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಅಲ್ಲಿನ ಸರ್ಕಾರ ಪಕ್ಷಪಾತ ಮಾಡುತ್ತಿದೆ. ರಾಜ್ಯದಲ್ಲಿ ಹಿಂಸಾಚಾರ ಮಾಡುವವರನ್ನು ಪೊಲೀಸರು ಬಿಡುವುದರಿಂದ ಕಾನೂನು ಮತ್ತು ಸುವ್ಯವಸೆ ್ಥ ಹಾಳಾಗಬಹುದು. ಹಾಗಾಗಿ ಕೇಂದ್ರ ಗೃಹ ಸಚಿವಾಲಯ ಮಧ್ಯಪ್ರವೇಶಿಸಿ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts