More

    ತುಂಬಿ ಹರಿಯುತ್ತಿರುವ ವರದಾ, ಧರ್ಮಾ ನದಿ

    ಹಾನಗಲ್ಲ: ತಾಲೂಕಿನಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಗೆ ವರದಾ, ಧರ್ಮಾ ನದಿಗಳು ತುಂಬಿ ಹರಿಯುತ್ತಿದ್ದು, ಎಂಟಕ್ಕೂ ಅಧಿಕ ಮನೆಗಳು ಭಾಗಶಃ ಬಿದ್ದ ವರದಿಯಾಗಿದೆ.

    ತಾಲೂಕಿನಲ್ಲಿ ಆ. 1ರಿಂದ 5 ರವರೆಗೆ 110 ಮಿಮೀ ಮಳೆ ಸುರಿದಿದೆ. ಪಕ್ಕದ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗುತ್ತಿರುವುದರಿಂದ ನದಿಗಳಿಗೆ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ತಾಲೂಕಿನಲ್ಲಿ ಹರಿದಿರುವ ಧರ್ಮಾ ಹಾಗೂ ವರದಾ ನದಿಗಳು ತುಂಬಿ ರಭಸದಿಂದ ಹರಿಯುತ್ತಿವೆ. ಮಳೆ ಮತ್ತೆ ಮುಂದುವರಿದರೆ ಅಪಾಯದ ಮಟ್ಟ ತಲುಪುವ ಸಾಧ್ಯತೆಗಳಿವೆ.

    ಮುಂಗೋಡ ತಾಲೂಕಿನಲ್ಲಿರುವ ಧರ್ಮಾ ಜಲಾಶಯ ಪಾತ್ರದಲ್ಲಿ 25 ಅಡಿಗಳಷ್ಟು ನೀರು ತುಂಬಿದ್ದು, ಕೋಡಿ ಹರಿಯಲು ಇನ್ನು 4 ಅಡಿಗಳಷ್ಟೇ ಬಾಕಿಯಿವೆ. ನೀರಾವರಿ ಇಲಾಖೆ ಅಧಿಕಾರಿಗಳು ಜಲಾಶಯದ ಎಲ್ಲ ಗೇಟ್​ಗಳನ್ನು ಮುಚ್ಚಿದ್ದಾರೆ.

    ಆ. 1ರಿಂದ ಐದು ದಿನಗಳಲ್ಲಿ ತಾಲೂಕಿನ ಮಲಗುಂದ, ಹಾನಗಲ್ಲಿನಲ್ಲಿ 2, ಬೆಳಗಾಲಪೇಟೆ, ಬ್ಯಾಗವಾದಿ, ಡೊಮ್ಮನಾಳ, ತಿಳವಳ್ಳಿ ಗ್ರಾಮಗಳಲ್ಲಿ ತಲಾ ಒಂದೊಂದು ಮನೆಗಳು ಭಾಗಶಃ ಬಿದ್ದಿವೆ. ಸೋಮಸಾಗರ ಗ್ರಾಮದಲ್ಲಿ ಜಾನುವಾರುಗಳ ಕೊಟ್ಟಿಗೆ ಬಿದ್ದಿದೆ.

    ತಾಲೂಕಿನ ಶ್ಯಾಡಗುಪ್ಪಿ, ಸುರಳೇಶ್ವರ, ಹನುಮನಕೊಪ್ಪ, ಕಾಮನಹಳ್ಳಿ ಹಾಗೂ ಶೃಂಗೇರಿ ಗ್ರಾಮಗಳಲ್ಲಿ ಜೋರಾದ ಗಾಳಿಯ ಹೊಡೆತಕ್ಕೆ ಸಿಲುಕಿ ಬಾಳೆ ಗಿಡಗಳು ನೆಲಕ್ಕುರುಳಿ ಲಕ್ಷಾಂತರ ರೂ.ಗಳ ಹಾನಿ ಸಂಭವಿಸಿದೆ. ಘಟನಾ ಸ್ಥಳಗಳಿಗೆ ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts