More

    ತಾಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನ 16ರಂದು

    ಹಾನಗಲ್ಲ: ತಾಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನ ಫೆ. 16ರಂದು ಹುಬ್ಬಳ್ಳಿ ಮೂರು ಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಹಾಗೂ ಮಾತೋಶ್ರೀ ಲಲಿತಾದೇವಿ ಮುತ್ತಿನಕಂತಿಮಠ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ.

    ಪಟ್ಟಣದ ಹೊರಭಾಗದಲ್ಲಿರುವ ಮಲ್ಲಿಗಾರದ ಸಿದ್ಧರಾಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಆಯೋಜಿಸಿರುವ ಸಮ್ಮೇಳನವನ್ನು ಫೆ. 16ರಂದು ಬೆಳಗ್ಗೆ 10 ಗಂಟೆಗೆ ಬಮ್ಮನಹಳ್ಳಿ ವಿರಕ್ತಮಠದ ಶಿವಯೋಗೀಶ್ವರ ಮಹಾಸ್ವಾಮೀಜಿ ಉದ್ಘಾಟಿಸುವರು. ಅಕ್ಕಿಆಲೂರ ವಿರಕ್ತಮಠದ ಶಿವಬಸವ ಮಹಾಸ್ವಾಮೀಜಿ, ಮುತ್ತಿನಕಂತಿ ಮಠದ ಚಂದ್ರಶೇಖರ ಶಿವಾಚಾರ್ಯರು ಸಮ್ಮುಖ ವಹಿಸುವರು. ಸ್ವಾಗತ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಎಂ. ಪಾಟೀಲ, ಗಣ್ಯರಾದ ಎಚ್.ಎಚ್. ರವಿಕುಮಾರ, ಶಂಕ್ರಣ್ಣ ಹಾದಿಮನಿ, ಇಷ್ಟಲಿಂಗ ಸಾಲವಟಿಗಿ, ಬಿ. ಶಿವಬಸವೇಶ್ವರ ಅತಿಥಿಗಳಾಗಿ ಪಾಲ್ಗೊಳ್ಳುವರು. ನಿರಂಜನ ಗುಡಿ ಆಶಯ ನುಡಿಗಳನ್ನಾಡುವರು. ಪದಾಧಿಕಾರಿಗಳಾದ ಶಿವಗಂಗಕ್ಕ ಪಟ್ಟಣದ, ಸಿ. ಮಂಜುನಾಥ, ಅಕ್ಕಮ್ಮ ಕುಂಬಾರಿ, ಮಧುಮತಿ ಪೂಜಾರ, ರಾಘವೇಂದ್ರ ಮಾಡಳ್ಳಿ ಪಾಲ್ಗೊಳ್ಳುವರು.

    ಬೆಳಗ್ಗೆ 9 ಗಂಟೆಗೆ ಮಲ್ಲಿಗಾರ ಗ್ರಾಮದಲ್ಲಿ ನಡೆಯುವ ‘ಶರಣರ ನಡೆ’ ಮೆರವಣಿಗೆಯನ್ನು ಅಕ್ಕಿಆಲೂರ ವಿರಕ್ತಮಠದ ಶಿವಬಸವ ಮಹಾಸ್ವಾಮೀಜಿ ಉದ್ಘಾಟಿಸುವರು. ವೇ.ಮೂ. ಸಂಗಯ್ಯಶಾಸ್ತ್ರಿಗಳು ಅತಿಥಿಗಳಾಗಿ ಪಾಲ್ಗೊಳ್ಳುವರು.

    ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ ಶರಣಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಯಾಸಿರ ಅರಾಫತ್ ಮಕಾನದಾರ, ನಿರ್ಮಲಾ ಮೂರಮಟ್ಟಿ, ಪ್ರಹ್ಲಾದ ಸಾಂಬ್ರಾಣಿ ಉಪನ್ಯಾಸ ನೀಡುವರು. ದೀಪಾ ಗೋನಾಳ, ಸೋಮಶೇಖರ ಕೋತಂಬರಿ, ಶ್ರೀನಿವಾಸ ದಿಕ್ಷೀತ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಕದಳಿ ಘಟಕದ ಉಪಾಧ್ಯಕ್ಷೆ ಶಾಂತಕ್ಕ ಹೊಳಲದ ವಚನ ಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಡಾ. ವಿಶ್ವನಾಥ ಬೊಂದಾಡೆ ಉಪನ್ಯಾಸ ನೀಡುವರು. ಎಚ್.ಎಸ್. ರ್ಬಾ, ವಿ.ಪಿ. ಗುರಪ್ಪನವರ, ನರಸಿಂಹ ಕೋಮಾರ, ಜಗದೀಶ ಮಡಿವಾಳರ, ಶೋಭಾ ಪಾಟೀಲ, ಬಿ.ಸಿ. ಪಾಟೀಲ, ಅಶೋಕ ಕಲಾಲ ಅತಿಥಿಗಳಾಗಿ ಪಾಲ್ಗೊಳ್ಳುವರು.

    ಸಮಾರೋಪ ಸಮಾರಂಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಎಸ್.ಸಿ. ಕಲ್ಲನಗೌಡರ ಅಧ್ಯಕ್ಷತೆ ವಹಿಸುವರು. ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ ಸಮಾರೋಪ ಭಾಷಣ ಮಾಡಲಿದ್ದಾರೆ. ಕದಳಿ ಜಿಲ್ಲಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ ಗಾಣಿಗೇರ, ಲೀಲಕ್ಕ ಹೊರಡಿ, ಅಮೃತಕ್ಕ ಶೀಲವಂತರ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಮಾಳಗಿ, ಕಾರ್ಯದರ್ಶಿ ಎಸ್.ಆರ್. ಹಿರೇಮಠ, ಡಾ. ಪ್ರಕಾಶ ಹೊಳೇರ, ಎಂ. ಪ್ರಸನ್ನಕುಮಾರ ಅತಿಥಿಗಳಾಗಿ ಪಾಲ್ಗೊಳ್ಳುವರು.

    ಪೂರ್ವಿಕಾ ಶೆಟ್ಟರ್, ಚಂದನಾ ಗುಡಿ, ದಾನೇಶ್ವರಿ ಸಿಂಧೂರ, ವಿಜಯಲಕ್ಷ್ಮೀ ಸಿಂಧೂರ, ಸೃಷ್ಟಿ ಅರಳೆಲೆಮಠ ಹಾಗೂ ಶ್ರೀ ಕುಮಾರೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ವಚನ ನೃತ್ಯ ಪ್ರದರ್ಶನಗೊಳ್ಳಲಿದೆ ಎಂದು ಕದಳಿ ಮಹಿಳಾ ವೇದಿಕೆ ಕಾರ್ಯದರ್ಶಿ ರೇಖಾ ಶೆಟ್ಟರ್ ಹಾಗೂ ಶಸಾಪ ಕಾರ್ಯದರ್ಶಿ ಪ್ರವೀಣ ಬ್ಯಾತನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts