More

    ತಾಲೂಕಿನ ಎಲ್ಲ ಗ್ರಾಪಂಗಳಲ್ಲೂ ಜನತಾದರ್ಶನ, ಶಾಸಕ

    ಚಿತ್ರದುರ್ಗ: ಪ್ರಾಮಾಣಿಕ ಪ್ರಯತ್ನದ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತದಿಂದ ಚಿತ್ರದುರ್ಗ ತಾಲೂಕು ಕುರುಮರಡಿಕೆರೆ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಜನತಾದರ್ಶನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
    ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವುದು ಕಾರ‌್ಯಕ್ರಮದ ಉದ್ದೇಶ. ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ಕೆಲಸ ಮಾಡ ಬೇಕು. ಇಂಗಳದಾಳ್ ಗ್ರಾಪಂಗೆ 160 ಮನೆಗಳು ಮಂಜೂರಾಗಿದ್ದು, ಅರ್ಹರಿಗೆ ಶೀಘ್ರ ಕಾರ್ಯಾದೇಶ ವಿತರಿಸಲಾಗುವುದು. ಚಿತ್ರದುರ್ಗ ರಾ.ಹೆ.4ರಿಂದ ಯರೇಹಳ್ಳಿವರೆಗೂ ಉತ್ತಮ ರಸ್ತೆ ನಿರ್ಮಿಸಲಾಗುವುದು. ಡಿಪಿಆರ್‌ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿರು ವುದಾಗಿ ಹೇಳಿದರು.
    ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬಹಳಷ್ಟು ಜಾಗವನ್ನು ವಿಂಡ್‌ಮಿಲ್ ಕಂಪನಿಗಳಿಗೆ ನೀಡಲಾಗಿದೆ. ಇವುಗಳ ಸಿಎಸ್‌ಆರ್ ನಿಧಿಯನ್ನು ಕ್ಷೇತ್ರಕ್ಕೆ ಉಪ ಯೋಗಿಸಬೇಕಿದೆ. ಇದಕ್ಕಾಗಿ ಕಂಪನಿಯವರ ಸಭೆ ಕರೆಯುವಂತೆ ಡಿಸಿ ಜಿಆರ್‌ಜೆ ದಿವ್ಯಾಪ್ರಭು ಅವರಿಗೆ ತಿಳಿಸಿದರು. ತಾಲೂಕಿನ ಎಲ್ಲಾ ಗ್ರಾಪಂಗಳಲ್ಲೂ ಜನತಾದರ್ಶನ ನಡೆಸುವುದಾಗಿ ಶಾಸಕರು ಪ್ರಕಟಿಸಿದರು.
    ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾತನಾಡಿ, ಜನತಾ ದರ್ಶನದಲ್ಲಿ ಈವರೆಗೂ ಸ್ವಿಕೃತವಾಗಿರುವ 1191 ಅರ್ಜಿಗಳ ಪೈಕಿ 791 ಅರ್ಜಿಗಳನ್ನು ವಿಲೇ ಮಾಡಲಾಗಿದೆ. ಫಲಾನುಭವಿ ಆಧಾರಿತ ಯೋಜನೆಗಳ ಅರ್ಹರಿಗೆ ತಕ್ಷಣ ಸೌಲಭ್ಯ ಕಲ್ಪಿಸಲಾಗುವುದು. ಸರ್ವೇ, ಪೋಡಿ ಸಮಸ್ಯೆಗಳನ್ನು ಒಂ ದು ತಿಂಗಳೊಳಗೆ ಬಗೆಹರಿಸಲಾಗುವುದು. ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾದ ಕೂಡಲೇ ಬಗರ್‌ಹುಕುಂ ಅರ್ಜಿಗಳನ್ನು ವಿಲೇ ಮಾ ಡಿ, ಅರ್ಹರಿಗೆ ಸಾಗುವಳಿ ಚೀಟಿ ವಿತರಿಸಲಾಗುವುದು ಎಂದರು.
    ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಮಾತನಾಡಿ, ಗ್ರಾಪಂಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಪರಿಹರಿಸಲು ಪ್ರತ್ಯೇಕವಾಗಿ ಆಗಮಿಸಿ, ಖುದ್ದು ಪರಿಶೀಲಿಸಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಗ್ರಾಮದ ತ್ಯಾಜ್ಯ ವಿಲೇವಾರಿ ಘಟಕಕಕ್ಕೆ ಶೀಘ್ರ ಭೂಮಿ ಮಂಜೂರು ಮಾಡಲಾಗುವುದು ಎಂದರು.
    ಸರ್ಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು. ಉಪ ಆರೋಗ್ಯಕೇಂದ್ರಕ್ಕೆ ಒಂದು ವಾರದೊಳಗೆ ಪೂ ರ್ಣಾವಧಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ನೇಮಿಸುವಂತೆ ಶಾಸಕರು ತಾಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಅವರಿಗೆ ತಿಳಿಸಿದರು.
    ಕುರುಮರಡಿಕೆರೆ ಹಾಗೂ ಚಿತ್ರದುರ್ಗ ನಡುವೆ ಗುರುವಾರದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರವನ್ನು ಆರಂಭಿಸ ಬೇಕು, ವಿದ್ಯಾರ್ಥಿಗಳ ಅನುಕೂಲಕ್ಕೆ ಪೂರಕವಾಗಿ ಬಸ್‌ಸಂಚಾರದ ವೇಳಾ ಪಟ್ಟಿ ಇರಬೇಕೆಂದು ಕೆಎಸ್‌ಆರ್‌ಟಿಸಿ ಅಧಿಕಾರಿಗೆ ಶಾಸಕರು ನಿರ್ದೇಶನ ನೀಡಿದರು.
    ಗ್ರಾಮದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆ ಡಿಡಿ ಡಾ.ಬಾಬುರತ್ನ ಅವರಿಗೆ ಸೂಚಿಸಿದರು. ಇಂಗಳದಾಳ್ ಗ್ರಾಪಂ ಅಧ್ಯಕ್ಷ ಸಿರುವಲ್ಲಪ್ಪ, ಉಪಾಧ್ಯಕ್ಷೆ ನೇತ್ರಮ್ಮ, ಮಾಜಿ ಉಪಾಧ್ಯಕ್ಷೆ ಬೃಂದಾ, ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ತಾಪಂ ಇಒ ರವಿ ಕುಮಾರ್, ತಹಸೀಲ್ದಾರ್ ಡಾ.ನಾಗವೇಣಿ ಮತ್ತಿತರರು ಇದ್ದರು.
    (ಸಿಟಿಡಿ 28 ಜನತಾದರ್ಶನ-ಕುರುಮರಡಿಕೆರೆ)
    ಚಿತ್ರದುರ್ಗ ತಾಲೂಕು ಕುರುಮರಡಿಕೆರೆಯಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕುಮಟ್ಟದ ಜನತಾದರ್ಶನ ಕಾರ‌್ಯಕ್ರಮವನ್ನು ಶಾಸಕ ಕೆ.ಸಿ.ವೀ ರೇಂದ್ರ ಪಪ್ಪಿ ಅವರು ಉದ್ಘಾಟಿಸಿದರು. ಡಿಸಿ ಜಿಆರ್‌ಜೆ ದಿವ್ಯಾಪ್ರಭು, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್,ಎಸಿ ಎಂ.ಕಾರ್ತಿಕ್, ತಹಸೀ ಲ್ದಾರ್ ಡಾ.ನಾಗವೇಣಿ, ತಾಪಂ ಇಒ ರವಿಕುಮಾರ್,ಇಂಗಳದಾಳ್ ಗ್ರಾಪಂ ಅಧ್ಯಕ್ಷ ಸಿರುವಲ್ಲಪ್ಪ, ಉಪಾಧ್ಯಕ್ಷೆ ನೇತ್ರಮ್ಮ, ಮಾಜಿ ಉಪಾಧ್ಯಕ್ಷೆ ಬೃಂದಾ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts