More

    ತಾಂಬಾ ಗ್ರಾಮ ಹೋಬಳಿ ಕೇಂದ್ರ ಮಾಡಲು ಆಗ್ರಹ

    ತಾಂಬಾ: ಇಂಡಿ ತಾಲೂಕಿನ ಸಿಂದಗಿ ಮತಕ್ಷೇತ್ರದ ತಾಂಬಾ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕು ಎಂದು ಶಾಸಕ ಅಶೋಕ ಮನಗೂಳಿ ಅವರಿಗೆ ಗುತ್ತಿ ಬಸವಣ್ಣ ಹೋರಾಟ ಸಮಿತಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

    ಸಮಿತಿ ಅಧ್ಯಕ್ಷ ಮಲ್ಲಯ್ಯ ಸಾರಂಗಮಠ ಮಾತನಾಡಿ, ತಾಂಬಾ ಗ್ರಾಮ 20 ರಿಂದ 25 ಸಾವಿರ ಜನಸಂಖ್ಯೆ ಹೊಂದಿದ್ದು ಇಂಡಿ ತಾಲೂಕಿನಲ್ಲಿಯೇ ಅತಿ ದೊಡ್ಡ ಗ್ರಾಮವಾಗಿದೆ. 39 ಜನ ಗ್ರಾಮ ಪಂಚಾಯಿತಿ ಸದಸ್ಯರು ಇದ್ದಾರೆ. 2 ರಾಷ್ಟ್ರೀಕೃತ ಬ್ಯಾಂಕ್‌ಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು 12 ಸೌಹಾರ್ದ ಸಹಕಾರಿ ಸಂಘಗಳು, 1 ಪದವಿ ಕಾಲೇಜು, ಪದವಿ ಪೂರ್ವ (ಕಲಾ ವಾಣಿಜ್ಯ ಶಿಕ್ಷಣ ವಿಜ್ಞಾನ) ಕಾಲೇಜುಗಳು ಹೊಂದಿವೆ.

    3 ಪ್ರೌಢಶಾಲೆ, 6 ಹಿರಿಯ ಪ್ರಾಥಮಿಕ ಶಾಲೆ, 3 ಪೂರ್ವ ಪ್ರಾಥಮಿಕ ಶಾಲೆ, ಬಾಲಕಿಯರ ವಿದ್ಯಾರ್ಥಿ ನಿಲಯ, ಪೋಸ್ಟ್ ಆಫೀಸ್, ಪ್ರಾಥಮಿಕ ಆರೋಗ್ಯ ಕೇಂದ್ರ, ನೆಮ್ಮದಿ ಕೇಂದ್ರ, 3 ಗ್ರಾಮ ಓನ್ ಕೇಂದ್ರಗಳು, ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯ, ರೈತ ಸಂಪರ್ಕ ಉಪಕೇಂದ್ರ, ಪಶು ಆಸ್ಪತ್ರೆ, 3 ಪೆಟ್ರೋಲ್ ಪಂಪ್‌ಗಳಿವೆ. ಈ ಗ್ರಾಮ ಲಿಂಗಸುಗೂರು ಶಿರಡೋಣ ಹೆದ್ದಾರಿಯಲ್ಲಿದ್ದು 20ಕ್ಕೂ ಹೆಚ್ಚು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದೆ ಎಂದರು.

    ಗ್ರಾಮದಿಂದ ಇಂಡಿ ಪಟ್ಟಣ 22 ಕಿ.ಮೀ. ದೂರದವಿದೆ. ಸರ್ಕಾರಿ ಸೌಲಭ್ಯಗಳಿಗಾಗಿ ಅಂಗವಿಕಲರು, ಹಿರಿಯರು ಸಂಚಾರ ಮಾಡಲು ತೊಂದರೆಯಾಗುತ್ತದೆ. ಆದಕಾರಣ ಗ್ರಾಮಸ್ಥರ ಹಿತದೃಷ್ಟಿಯಿಂದ ತಾಂಬಾ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

    ಈರಣ್ಣ ಬ್ಯಾಕೊಡ, ಸಿದ್ದಪ್ಪ ಗಳೇದ, ಪರಸು ಬಿಸನಾಳ, ಸಿದ್ದು ಹತ್ತಳ್ಳಿ, ಮಹಾದೇವ ಮೂಲಿಮನಿ, ಸಿದ್ದಣ್ಣ ಕಿಣಗಿ, ಮಹಮ್ಮದ ವಾಲಿಕಾರ, ರೇವಪ್ಪ ಹೊರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts