More

    ತಳವಾರ, ಪರಿವಾರ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಿ

    ಶಹಾಬಾದ್: ಅಧಿಕಾರಿಗಳ ಷಡ್ಯಂತ್ರ, ಕೆಲ ರಾಜಕಾರಣಿಗಳ ಕುತಂತ್ರದಿಂದ ಕೇಂದ್ರ ಸರ್ಕಾರ ಒಪ್ಪಿದ್ದರೂ, ರಾಜ್ಯ ಸರ್ಕಾರ ತಳವಾರ ಪರಿವಾರ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ವಿಳಂಬ ನೀತಿ ಅನುಸರಿಸುತ್ತಿದೆ. ಕೂಡಲೇ ಸರ್ಕಾರ ಈ ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಕೋಲಿ ಸಮಾಜದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
    ತೊನಸಳ್ಳಿ (ಎಸ್)ಯ ಶ್ರೀ ಕೊತ್ತಲಪ್ಪ ಮುತ್ಯಾ, ಸಮಾಜದ ಮುಖಂಡರಾದ ಶಿವುಕುಮಾರ ತಳವಾರ, ಶಿವುಕುಮಾರ ಸುಣಗಾರ ನಾಲವಾರ, ಸುನೀತಾ ತಳವಾರ, ಶಿವಾಜಿ ವೆಂಟಗಾರ ಮಾತನಾಡಿ, ತಳವಾರ, ಪರಿವಾರ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ, ಜಾತಿ ಪ್ರಮಾಣ ಪತ್ರ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಕುತಂತ್ರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಸಂಪುಟದಿಂದ ಕೈಬಿಡಬೇಕು, ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
    ಉಪ ತಹಸೀಲ್ದಾರ್ ಮಲ್ಲಿಕಾರ್ಜುನ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪಟ್ಟಣದ ಬಸವೇಶ್ವರ ವೃತ್ತದಿಂದ ನೆಹರು ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
    ಪ್ರಮುಖರಾದ ಕಾಶಣ್ಣ ಚನ್ನೂರ, ದೇವಿಂದ್ರ ಕಾರೊಳ್ಳಿ, ಪರಮನಂದ ಯಲಗೂಡಕರ್, ಆನಂದ ಕೊಡಸಾ, ಮಲ್ಕಣ್ಣ ಮುದ್ದಾ, ನಿಂಗಣ್ಣ ಹುಳಗೋಳ, ಶಿವು ನಾಟಿಕಾರ, ಬೆಳ್ಳೆಪ್ಪ ತೊನಸನಳ್ಳಿ, ಶಿವು , ಪ್ರಭು ಮಂಗಳೂರ, ಲೋಹಿತ ಮಳಖೇಡ, ನಾಗರಾಜ ಯಡ್ರಾಮಿ, ಸಿದ್ದಾರ್ಥ ತಳವಾರ, ರವಿ ಗೋಳಾ, ಶರಣು ಹಲಕಟರ್ಿ, ರಾಜು ಸಣಮೋ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts