More

    ಡ್ರೋಣ್ ಕ್ಯಾಮರಾ ಬಳಕೆ

    ಭಟ್ಕಳ: ಹೆಲ್ತ್ ಎಮರ್ಜೆನ್ಸಿ ಇದ್ದರೂ ವಿನಾಕಾರಣ ರಸ್ತೆಯಲ್ಲಿ ತಿರುಗಾಡುವುದು, ಗುಂಪಾಗಿ ಸೇರುವುದು, ಪೊಲೀಸರು ಬಂದ ತಕ್ಷಣ ಓಡಿಹೋಗುವುದನ್ನು ತಡೆಯಲು ಪೊಲೀಸ್ ಇಲಾಖೆ ಭಟ್ಕಳದಲ್ಲಿ ಬುಧವಾರದಿಂದ ಡ್ರೋಣ್ ಕ್ಯಾಮರಾ ಕಾರ್ಯಾಚರಣೆಗೆ ಇಳಿದಿದೆ.

    ಭಟ್ಕಳ ಉಪವಿಭಾಗದ ಡಿವೈಎಸ್​ಪಿ ಗೌತಮ ಕೆ.ಸಿ. ಅವರು ಡ್ರೋಣ್ ಕಾರ್ಯಕ್ಕೆ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಅವರು, ಕೋವಿಡ್- 19 ಮಹಾಮಾರಿಯಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಭಟ್ಕಳದಲ್ಲಿಯೇ 8 ಪ್ರಕರಣಗಳು ಕಂಡು ಬಂದಿದ್ದು, ದೇಶದ ಗಮನ ಸೆಳೆದಿದೆ. ಆದರೂ ಇಲ್ಲಿನ ಜನರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪ್ರತಿ ಬಾರಿ ಪೊಲೀಸರೆ ಹೋಗಿ ಜನರನ್ನು ನಿಯಂತ್ರಿಸಬೇಕಾಗಿದೆ. ಇದನ್ನು ತಪ್ಪಿಸಲೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಡ್ರೋಣ್ ಕ್ಯಾಮರಾ ಬಳಸಲು ಪರವಾನಗಿ ನೀಡಿದ್ದಾರೆ ಎಂದರು.

    ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಡ್ರೋಣ್ ಕ್ಯಾಮರಾ ಬುಧವಾರ 3 ಕಿ.ಮೀ. ಪರಿಧಿಯಲ್ಲಿ ಹಾರಾಟ ನಡೆಸಿದೆ. ಸಾರ್ವಜನಿಕರು ನಿಯಮ ಪಾಲಿಸಬೇಕು ಎಂದು ಸಲಹೆ ನೀಡಿದರು. ಸಿಪಿಐ ರಾಮಚಂದ್ರ ನಾಯಕ, ಟೌನ್ ಪಿಎಸ್​ಐ ಎಚ್. ಕುಡಗಂಟಿ, ಪೊಲೀಸ್ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts