More

    ಡಿಜಿಟಲ್ ಯುಗದಲ್ಲಿ ಕ್ಷೀಣಿಸುತ್ತಿದೆ ಪುಸ್ತಕ ಓದುಗರ ಸಂಖ್ಯೆ

    ಮೈಸೂರು: ಡಿಜಿಟಲ್ ಯುಗದಲ್ಲಿ ಪುಸ್ತಕಗಳನ್ನು ಓದುವವರು ಸಂಖ್ಯೆ ಕಡಿಮೆಯಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಕಳವಳ ವ್ಯಕ್ತಪಡಿಸಿದರು.

    ಕವಿತಾ ಪ್ರಕಾಶನದ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸುಚಿತ್ರಾ ಹೆಗಡೆ ಅವರ ಪ್ರವಾಸ ಕಥನ ಕೃತಿ ‘ಜಗವ ಸುತ್ತುವ ಮಾಯೆ’ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೊಬೈಲ್, ಸಾಮಾಜಿಕ ಜಾಲತಾಣಗಳಿಗೆ ಜನರು ಮಾರುಹೋಗಿದ್ದಾರೆ. ಇದರಿಂದ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಇದು ಸಮಾಜದ ಮೇಲೆ ವ್ಯತರಿಕ್ತ ಪರಿಣಾಮ ಬೀರಲಿದೆ ಎಂದರು.

    ಪ್ರವಾಸವು ಸ್ಥಳದ ಚರಿತ್ರೆ ಮತ್ತು ಸಾಂಸ್ಕೃತಿಕ ಪರಂಪರೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ನೆಲದ ಪರಂಪರೆ ಮತ್ತು ಸಂಸ್ಕೃತಿಯನ್ನು ಕಲಿಯಲು ನಮಗೆ ಅನುಕೂಲವಾಗುತ್ತದೆ. ಪ್ರತಿಯೊಂದು ಪ್ರವಾಸದಲ್ಲಿ ಅನನ್ಯ ಅನುಭವ ಆಗುತ್ತದೆ. ಡಿಜಿಟಲ್‌ಯುಗದಲ್ಲಿ ನಾವು ಯಾವುದೇ ದೇಶದ ಮಾಹಿತಿಯನ್ನು ನಾವು ಇರುವ ಸ್ಥಳದಲ್ಲೇ ಕ್ಷಣ ಮಾತ್ರದಲ್ಲೇ ಪಡೆದುಕೊಳ್ಳಬಹುದು. ಆದರೆ, ನಾವು ಆ ದೇಶಕ್ಕೆ ಅಥವಾ ಸ್ಥಳಕ್ಕೆ ಖುದ್ದು ಭೇಟಿ ನೀಡಿದಾಗ ರೋಚಕ ಅನುಭವವಾಗುತ್ತದೆ ಎಂದರು.

    ಸುಚಿತ್ರಾ ಹೆಗಡೆ ತಮ್ಮ ಕೃತಿಯಲ್ಲಿ ಪ್ರವಾಸವನ್ನು ಪ್ರಯಾಸ ಎಂದುಕೊಳ್ಳದೆ ಅವರಿಗಾದ ಚಿಕ್ಕ ಪುಟ್ಟ ಅನುಭವವನ್ನು ಈ ಪುಸ್ತಕದಲ್ಲಿ ಸುಲಲಿತವಾಗಿ ಹಾಗೂ ಅತ್ಯಂತ ಸರಳವಾಗಿ ಸರಳೀಕರಿಸಿ ಅಕ್ಷರರೂಪದಲ್ಲಿ ಕೊಟ್ಟಿದ್ದಾರೆ ಎಂದರು.

    ಪತ್ರಕರ್ತ ಜೋಗಿ ಮಾತನಾಡಿ, ಪ್ರವಾಸ ಕಥನ ಓದಿದರೆ, ಆ ದೇಶಕ್ಕೆ ನಾವು ಭೇಟಿ ನೀಡಿದಷ್ಟು ಭಾಸವಾಗಬೇಕು. ಪ್ರವಾಸ ಕಥನಗಳ ಮೂಲಕ ಓದುಗರಿಗೆ ಆ ದೇಶದ ಬಗ್ಗೆ ಗೊತ್ತಿಲ್ಲದ ವಿಷಯ ಕಟ್ಟಿಕೊಡುವುದು ಅಷ್ಟು ಸುಲಭದ ಕೆಲಸವಲ್ಲ ಎಂದರು.
    ಪ್ರವಾಸ ಕಥನ ಎಂದರೆ ಕೇವಲ ಅಲ್ಲಿನ ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ ನೀಡಿವುದು ಅಷ್ಟೇ ಅಲ್ಲ. ಬದಲಿಗೆ, ಆ ದೇಶದ ಜನಜೀವನದ ಕುತೂಹಲಕಾರಿ ಸಂಗತಿಯನ್ನೂ ಕಟ್ಟಿಕೊಡಬೇಕು ಎಂದರು.

    ಪತ್ರಕರ್ತ ಜಿ.ಎನ್.ಮೋಹನ್ ಮಾತನಾಡಿದರು. ಕವಿತಾ ಪ್ರಕಾಶನದ ಗಣೇಶ ಅಮೀನಗಡ, ಲೇಖಕಿ ಸುಚಿತ್ರಾ ಹೆಗಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts