More

    ಡಾ. ಅಂಬೇಡ್ಕರ್ ಜಾತಿಗೆ ಸೀಮಿತವಲ್ಲ

    ಹುಕ್ಕೇರಿ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರನ್ನು ಒಂದೇ ಜಾತಿಗೆ ಸೀಮಿತಗೊಳಿಸುತ್ತಿರುವ ಸಂಕುಚಿತ ಮನೋಭಾವದಿಂದ ಹೊರಬರಬೇಕಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

    ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಅಂಬೇಡ್ಕರ್ ಜನಜಾಗೃತಿ ವೇದಿಕೆ ಹಾಗೂ ವಿವಿಧ ದಲಿತಪರ ಸಂಘಟನೆಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಆಶಯಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.

    ಅಂಬೇಡ್ಕರ್, ಬಸವಣ್ಣ ಸೇರಿ ಅನೇಕ ಮಹಾಪುರುಷರು ಎಲ್ಲ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ. ಆದರೆ, ಈ ಮಹಾನ್ ನಾಯಕರನ್ನು ಆಯಾ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸುತ್ತಿರುವುದು ನೋವಿನ ಸಂಗತಿ. ಹಾಗಾಗಿ, ಬರುವ ದಿನಗಳಲ್ಲಿ ಈ ಕುರಿತು ಸಮಾಜಗಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.

    ಸಂಘಟನೆ ಮುಖಂಡ ಮಲ್ಲಿಕಾರ್ಜುನ ರಾಶಿಂಗೆ ಮಾತನಾಡಿ, ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾದ ಅಂಬೇಡ್ಕರ್ ಸೇರಿ 6 ಜನ ಮಹಾಪುರುಷರ ಪ್ರತಿಮೆ ಹುಕ್ಕೇರಿಯಲ್ಲಿ ಪ್ರತಿಷ್ಠಾಪಿಸಲು ಮುಂದಾಗಿರುವ ಕತ್ತಿ ಸಹೋದರರ ಕಾರ್ಯ ಶ್ಲಾಘನೀಯ.
    ಕತ್ತಿ ಸಹೋದರರ ಒಡೆತನದ ವಿಶ್ವರಾಜ ಕತ್ತಿ ಪ್ರತಿಷ್ಠಾನದಿಂದ ಹಣ ಒದಗಿಸುವ ಮೂಲಕ ದಲಿತರ ಮನೋಬಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದರು.

    ಪುರಸಭೆ ಮಾಜಿ ಸದಸ್ಯ ದಿಲೀಪ ಹೊಸಮನಿ ಮಾತನಾಡಿದರು. ಮುಖಂಡರಾದ ಕೆಂಪಣ್ಣ ಶಿರಹಟ್ಟಿ, ಲಕ್ಷ್ಮಣ ಹೂಲಿ, ಶ್ರೀನಿವಾಸ ವ್ಯಾಪಾರಿ, ಮಂಜು ಪಡದಾರ, ಸುನೀಲ ಖಾತೆದಾರ, ಬಸವರಾಜ ದೇವುಗೋಳ, ನಾಗೇಶ ವಾಳವಿ, ಚಿದಾನಂದ ಹಿರೇಕೆಂಚನ್ನವರ, ಮಲ್ಲು ಕುರಣಿ, ಅಂಥೋನಿ ಪಾತ್ರೋಟ, ಮಾರುತಿ ಕೋಳಿ, ಗಂಗಾರಾಮ ಹುಕ್ಕೇರಿ, ಸೋಮು ಜೀವನ್ನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts