More

    ಡಯಾಲಿಸಿಸ್ ರೋಗಿಗೆ ಸಿಗದ ಚಿಕಿತ್ಸೆ

    ಶಿರಸಿ: ಡಯಾಲಿಸಿಸ್ ರೋಗಿಯೊಬ್ಬರಿಗೆ ಕರೊನಾ ಸೋಂಕು ತಗುಲಿದ ಪರಿಣಾಮ ವಾರ ಕಳೆದರೂ ಎಲ್ಲಿಯೂ ಚಿಕಿತ್ಸೆ ಸಿಗದೇ ಪುನಃ ಮನೆಗೆ ಕರೆದುಕೊಂಡು ಹೋದ ಅಮಾನವೀಯ ಘಟನೆ ಶಿರಸಿಯಲ್ಲಿ ಮಂಗಳವಾರ ನಡೆದಿದೆ.

    ತಾಲೂಕಿನ ಹನುಮಂತಿಯ 53 ವರ್ಷದ ವ್ಯಕ್ತಿಯೊಬ್ಬರು ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ವಾರದ ಹಿಂದೆ ಕರೊನಾ ಸೋಂಕು ತಗುಲಿದ್ದು, ನಂತರ ಅವರಿಗೆ ಎಲ್ಲಿಯೂ ಡಯಾಲಿಸಿಸ್ ಸೇವೆ ಲಭ್ಯವಾಗಿಲ್ಲ. ಇದರಿಂದ ವ್ಯಕ್ತಿಯ ಆರೋಗ್ಯ ತೀರಾ ಹದಗೆಟ್ಟಿದ್ದು, ಅನಿವಾರ್ಯವಾಗಿ ಮನೆಗೆ ಕರೆದುಕೊಂಡು ಹೋಗಲಾಗಿದೆ.

    ಕರೊನಾ ಸೋಂಕು ಹರಡಿದ ಕಾರಣ ಶಿರಸಿಯ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೇವೆ ನೀಡಲು ನಿರಾಕರಿಸಲಾಗಿದೆ. ನಂತರ ರೋಗಿಯನ್ನು ತಾತ್ಕಾಲಿಕ ಸೇವೆಗಾಗಿ ಶಿರಸಿಯ ಸ್ಕ್ಯಾನ್ ಸೆಂಟರ್​ಗೆ ಸೇರಿಸಲಾಗಿದೆ. ಆದರೆ, ಅಲ್ಲಿ ಡಯಾಲಿಸಿಸ್ ಸೇವೆ ಇರದ ಕಾರಣ ಜಿಲ್ಲಾಡಳಿತದ ಮೊರೆ ಹೋಗಲಾಗಿದೆ. ಆದರೆ, ಎಲ್ಲಿಯೂ ಸೇವೆ ಸಿಗದೇ ಈಗ ಪುನಃ ಮನೆಗೆ ಕರೆದುಕೊಂಡು ಹೋಗಲಾಗಿದ್ದು, ಕುಟುಂಬದವರ ಎದುರೇ ರೋಗಿ ಒದ್ದಾಡುತ್ತಿದ್ದರೂ ಏನೂ ಮಾಡಲಾಗದ ಸ್ಥಿತಿ ನಿರ್ವಣವಾಗಿದೆ.

    ಈ ರೀತಿಯ ಅಮಾನವೀಯ ಘಟನೆ ಎಲ್ಲಿಯೂ ನಡೆಯಬಾರದು. ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಸರ್ಕಾರಿ ವೈದ್ಯರು ಈ ರೀತಿಯ ಘಟನೆಗಳಿಗೆ ಸ್ಪಂದಿಸಬೇಕು. ಉಸ್ತುವಾರಿ ಸಚಿವರು ಹಾಗೂ ವಿಧಾನಸಭಾಧ್ಯಕ್ಷರು ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

    ಮೊದಲು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಲಾಗಿದ್ದು, ನಂತರ ಸರ್ಕಾರಿ ಆಸ್ಪತ್ರೆಯನ್ನು ಸಂರ್ಪಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ತದನಂತರ ಖುದ್ದು ಜಿಲ್ಲಾಡಳಿತವನ್ನು ಸಂರ್ಪಸಿದರೆ ಕೇವಲ ಆಶ್ವಾಸನೆ ದೊರೆಯಿತು. ಡಿಎಚ್​ಒ ಸಹ ಡಯಾಲಿಸಿಸ್ ಸೇವೆ ನೀಡಲು ನಿರಾಕರಿಸಿದರು. ಇದರಿಂದ ರೋಗಿಯ ಸ್ಥಿತಿ ತೀರಾ ಹದಗೆಟ್ಟಿದ್ದು, ಖಾಸಗಿ ಆಂಬುಲೆನ್ಸ್​ನಲ್ಲಿ ಅವರನ್ನು ಕರೆದುಕೊಂಡು ಹೋಗುವಂತಾಗಿದೆ.
    | ಸಂತೋಷ ಶೆಟ್ಟಿ, ಯುವ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ

    ಸಮಸ್ಯೆ ಗಮನಕ್ಕೆ ಬಂದಿದೆ. ಹುಬ್ಬಳ್ಳಿ ಕಿಮ್್ಸ ನಿರ್ದೇಶಕರ ಜತೆಗೂ ಮಾನತಾಡಿದ್ದೇನೆ. ಅಲ್ಲಿ ಬೆಡ್ ಖಾಲಿ ಇಲ್ಲ ಎಂಬ ಉತ್ತರ ನೀಡುತ್ತಿದ್ದಾರೆ. ಆದರೂ ಪ್ರಯತ್ನ ಮಾಡಿ, ಶೀಘ್ರವೇ ಅವರಿಗೆ ಚಿಕಿತ್ಸೆ ಕೊಡಿಸಲು ಯತ್ನಿಸಲಾಗುತ್ತದೆ.
    | ಡಾ. ಶರದ್ ನಾಯಕ, ಡಿಎಚ್​ಒ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts