More

    ಜ.೨ ರಿಂದ ಸಮಾಜ ಪತಿವರ್ತನಾ ಸತ್ಯಾಗ್ರಹ ಯಾತ್ರೆ

    ಬಾಗಲಕೋಟೆ: ಕರ್ನಾಟಕ ಸರ್ಕಾರದ ಮೂರು ಕರಾಳ ಕೃಷಿ ಕಾಯ್ದೆ ರದ್ದಾಗಬೇಕು, ಕನಿಷ್ಠಿ ಬೆಂಬಲ ಬೆಲೆ ಹಾಗೂ ಸಕ್ಯೂರಮೆಂಟ್ ನೀತಿಗಳ ಕಾಯ್ದೆ ಬದ್ಧಗೊಳಿಸಬೇಕು ಸೇರಿದಂತೆ ವಿವಿಧ ಹಕ್ಕೋತ್ತಾಯ ಮಂಡಿಸಿ ಜನಾಂದೋಲನ ಮಹಾಮೈತ್ರಿ ನೇತೃತ್ವದಲ್ಲಿ ಜ.೨ ರಿಂದ ೧೧ ವರೆಗೆ ಕೂಡಲಸಂಗಮದಿಂದ ಬೆಂಗಳೂರು ಪ್ರೀಡಂ ಪಾರ್ಕವರೆಗೆ ಸಮಾಜ ಪರಿವರ್ತನ ಸತ್ಯಾಗ್ರಹ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಹೇಳಿದರು.
    ಈ ಯಾತ್ರೆಯು ರಾಜ್ಯದ ವಿವಿ ಭಾಗದಲ್ಲಿ ಸಂಚರಿಸಲಿದೆ. ಅಲ್ಲದೆ ಈ ಯಾತ್ರೆ ಭಾಗವಾಗಿ ಶಿವಮೊಗ್ಗ, ಕೋಲಾರ, ಮಂಗಳೂರು ಪ್ರದೇಶದಲ್ಲಿ ಪ್ರತ್ಯೇಕ ಯಾತ್ರೆಗಳು ನಡೆಯಲಿವೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ನಾಡಿನ ಕೃಷಿಕರು, ಚಿಂತಕರು, ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ದಲಿತರ ಮೇಲೆ ಹಲ್ಲೆ, ಅಸ್ಪೃಶ್ಯತೆ ಆಚರಣೆ ಮೇಲೆ ಕಠಿಣ ಕ್ರಮಗಳಿಂದ ನಿಯಂತ್ರಿಸಬೇಕು, ಭೂಸ್ವಾಧೀನ ಎಂಬುದು ರೈತಾಪಿ ದೃಷ್ಟಿಯಿಂದ ಜೀವ ವಿರೋಽಯಾಗಿದೆ. ೨೦೧೩ ಹೊಸ ಕಾಯ್ದೆ ಅನ್ವಯ ಭೂಸ್ವಾಧೀನ ಕಾಯ್ದೆ ರೂಪಿಸಬೇಕು. ನಿರುದ್ಯೋಗ, ಹಣದುಬ್ಬರ ನಿಯಂತ್ರಿಸಬೇಕು, ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಂವಿಧಾನ ಪಠ್ಯ ಅಳವಡಿಸಿ ನಿತ್ಯ ಪಠಿಸುವಂತೆ ಮಾಡಬೇಕು. ಖಾಸಗೀಕರಣ, ಕೋಮುವಾದಿಕರಣ ನಿಲ್ಲಿಸಬೇಕು, ಕಾರ್ಮಿಕ ಕಾಯ್ದೆಗಳನ್ನು ಮರು ಸ್ಥಾಪಿಸಬೇಕು, ಸಾರ್ವಜನಿಕರ ಭೂಮಿ ಖಾಸಗಿಕರಣ, ಮಾರಾಟ ನಿಲ್ಲಬೇಕು, ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ನಿರ್ಮಿಸಬೇಕು ಎಂದು ಯಾತ್ರ ಸಂದರ್ಭದಲ್ಲಿ ಆಗ್ರಹಿಸಲಾಗುವುದು.
    ಈ ನಿಟ್ಟಿನಲ್ಲಿ ನಮ್ಮ ವೇದಿಕೆಯಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ. ಡಬಲ್ ಇಂಜಿನ್ ಸರ್ಕಾರ ಎನ್ನುವ ಬಿಜೆಪಿಯವರು ನಮ್ಮ ಹಕ್ಕೋತ್ತಾಯಗಳಿಂದ ಸ್ಪಂದಿಸುತ್ತಿಲ್ಲ. ಸರ್ವಾಧೀಕರಣ ನೀತಿಗಳ ಮೂಲಕ ಸರ್ಕಾರ ಜನರ ಬದುಕು ಹಾಳು ಮಾಡುತ್ತಿದೆ. ಇಂತಹ ಸರ್ಕಾರ ಅಽಕಾರದಲ್ಲಿ ಇರಲು ನೈತಿಕ ಹಕ್ಕು ಇಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಜಾಪ್ರಬುತ್ವದ ಗಮ್ಯತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಮುಖಂಡರಾದ ಬಿ.ಎಂ.ನದಾಫ ಎಂ.ಎ.ಅಗಸಿಮುಂದಿನ, ಮಂಜುನಾಥ ಪಿ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts