More

    ಜೊಲ್ಲೆ ದಂಪತಿ ಸೇವೆ ಮುಂದುವರಿಯಲಿ

    ಕೊಕಟನೂರ: ಜೊಲ್ಲೆ ಚಾರಿಟೇಬಲ್ ಫೌಂಡೇಷನ್ ಮೂಲಕ ಸಮಾಜಸೇವೆಯಲ್ಲಿ ನಿರತರಾಗಿರುವ ಜೊಲ್ಲೆ ದಂಪತಿಯಿಂದ ಇನ್ನೂ ಅನೇಕರಿಗೆ ನೆರವು ಸಿಗುವಂತಾಗಲಿ ಎಂದು ಯುವ ಮುಖಂಡ ಚಿದಾನಂದ ಸವದಿ ಆಶಿಸಿದ್ದಾರೆ.

    ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಚಿಕ್ಕೋಡಿ ಸಂಸದರ ನಿಧಿಯಿಂದ ನೀರಾವರಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕರೊನಾದಿಂದ ಜನಜೀವನ ತತ್ತರಗೊಂಡಿದೆ. ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಿದರೆ ಶೀಘ್ರವಾಗಿ ಸೋಂಕಿನ ಭಯದಿಂದ ಎಲ್ಲರೂ ಹೊರಬರಬಹುದು ಎಂದರು.

    ಅಥಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ, ಸಮುದಾಯ ಭವನ, ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಅವರು ಪ್ರಯತ್ನಿಸುತ್ತಿದ್ದಾರೆ, ಗುತ್ತಿಗೆದಾರರು ಸಕಾಲಕ್ಕೆ ಕಾಮಗಾರಿ ಆರಂಭಿಸಬೇಕು ಎಂದರು.

    ಮುಖಂಡ ಶೀತಲಗೌಡ ಪಾಟೀಲ ಮಾತನಾಡಿದರು. ಬಾಹುಬಲಿಗೌಡ ಪಾಟೀಲ, ಮುತ್ತಣ್ಣ ಹಿಡಕಲ್ಲ, ಮುತ್ತಣ್ಣ ಯಂಡೋಳಿ, ಭರತೇಶ ನೇಮಗೌಡ, ಅಣ್ಣಾಸಾಬ ಯಂಡೋಳಿ, ಪ್ರಕಾಶ ಬಡಿಗೇರ, ಮಹಾದೇವ ಚಿಪ್ಪಾಡಿ, ರಾವಸಾಬ ಸಂಕೋನಟ್ಟಿ, ಸುಶೀಲಕುಮಾರ ಪತ್ತಾರ, ಶಿವಾನಂದ ವಾಳವೆ, ಮಹಾವೀರ ಮಹಿಷವಾಡಗಿ, ಶ್ರೀಧರ ಹಂಡಿ, ನೀರಾವರಿ ಇಲಾಖೆಯ ರಾಜೇಂದ್ರ ರೂಡಗಿ, ಎಸ್.ಬಿ. ಕರಡಿ, ಭರತೇಶ ಮಹಿಷವಾಡಗಿ, ಶೇಖರ ರಾಠೋಡ, ನೇಮಿನಾಥ ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts