More

    ಜೈನ ಸನ್ಯಾಸ ದೀಕ್ಷೆಯಿಂದ ಸೋಹಂಜ್ಯೋತಿ ಸೃಷ್ಟಿ

    ಹುಬ್ಬಳ್ಳಿ: ನಗರದ 21 ವರ್ಷದ ಯುವತಿ ಸೃಷ್ಟಿ ಜೈನ ಅವರು ಸೋಮವಾರ ಜೈನ ಸನ್ಯಾಸ ದೀಕ್ಷೆಯನ್ನು ತೆಗೆದುಕೊಂಡು, ಸೋಹಂಜ್ಯೋತಿ ಶ್ರೀಜಿ ಆಗಿ ಮರುನಾಮಕರಣಗೊಂಡರು.

    ಕೇಶ್ವಾಪುರದ ಜೈನ ಕಾಲನಿಯ ಶ್ರೀ ಮುನಿಸುರತ್ ಸ್ವಾಮಿ ದೇವಸ್ಥಾನ ಆವರಣದಲ್ಲಿ ಏರ್ಪಡಿಸಿದ್ದ ದೀಕ್ಷಾ ಸ್ವೀಕಾರ ಹಾಗೂ ಪಾರ್ಶ್ವನಾಥ ದೀಕ್ಷಾ ಕಲ್ಯಾಣಕ್ ಕಾರ್ಯಕ್ರಮದಲ್ಲಿ ಜೈನ ಮುನಿಗಳಾದ ಆಚಾರ್ಯ ಶ್ರೀ ಅಭಯೇಕರ ಸುರೀಶ್ವರಜಿ, ಆಚಾರ್ಯ ಶ್ರೀ ಅಜಿತ್ಯೇಕರ ಸುರೀಶ್ವರಜಿ, ಆಚಾರ್ಯ ಶ್ರೀ ವಿಮಲಬೋಧಿ ಸುರೀಶ್ವರಜೀ ಅವರು ಸೃಷ್ಟಿ ಅವರಿಗೆ ಸನ್ಯಾಸ ದೀಕ್ಷೆ ನೀಡಿದರು. ನಂತರ ಕ್ರಿಯಾ ವಿಧಿ ಬೋಧಿಸಿ ನಾಮಕರಣ ಮಾಡಲಾಯಿತು.

    ಇದಕ್ಕೂ ಮೊದಲು ಮಾತನಾಡಿದ ಶ್ರೀ ಅಭಯೇಕರ ಸುರೀಶ್ವರಜಿ, ಗುರುವಾಕ್ಯವನ್ನು ನಿರಂತರ ಪಾಲಿಸಬೇಕು. ಸನ್ಯಾಸ ದೀಕ್ಷೆ ಸ್ವೀಕರಿಸಿದ ಬಳಿಕ ದೇಶಾದ್ಯಂತ ಸಂಚರಿಸಿ ಸತ್ಯ, ಅಹಿಂಸೆ, ಅಪರಿಗ್ರಹವನ್ನು ಬೋಧಿಸಬೇಕು ಎಂದು ತಿಳಿಸಿ, ಆಶೀರ್ವದಿಸಿದರು.

    ಮುನಿಗಳಾದ ಶ್ರೀ ಚಾರಿತ್ರ್ಯರ್ಧನ, ಶ್ರೀ ಜ್ಯೋತಿವರ್ಧನ, ಶ್ರೀ ಹರ್ಷಜ್ಯೋತಿ, ಜೈನ ಮರುಧರ ಸಂಘದ ಅಧ್ಯಕ್ಷ ಫುಖರಾಜ ಸಂಘಿ, ಕಾರ್ಯದರ್ಶಿ ಶಾಂತಿಲಾಲ ಜೈನ್, ಮೋಹನಲಾಲ ದೇವಿಚಂದ್​ಜಿ, ರಾಜಮಲ್ ರಾಥೋಡ, ಭಗವಾನ್ ಭಂಡಾರಿ, ಮಹೇಂದ್ರ ಸಿಂಘಿ, ಮದನಲಾಲ ಜೈನ, ಕಾಂತಿಲಾಲ ವಾಕ್ಯಾತ್ರ, ಮನ್ಸಾಲಾಲ ಧುಮಾವತ್, ಗಿರೀಶ ಕೊಠಾರಿ, ಮುಖೇಶ ಕೊಠಾರಿ, ವಿನಯ ಷಾ, ಗೌತಮ ಜೈನ, ವಾಸುಪೂಜ್ಯ ಶ್ರೀ ಶ್ವೇತಾಂಬರ ಜೈನ ಟ್ರಸ್ಟ್ ಸಮಿತಿ ಪದಾಧಿಕಾರಿಗಳು ಇದ್ದರು.

    22ರಂದು 10 ಜನರಿಂದ ಸ್ವೀಕಾರ: ಹರ್ಷ ಕೊಠಾರಿ, ಚೇತನ ಲಲಿತ್ ಕೊಠಾರಿ, ಅಭಿಷೇಕ ವಿಜಯ ಜೈನ, ವಿನೀತ ಜೈನ, ಅದಿತಿ ಜೈನ, ಕರಿಷ್ಮಾ ಬೋಹ್ರಾ, ರೇಖಾ ಜೈನ, ಸಿಮ್ರನ್ ಜೈನ, ವಿನೀತ ಧಾರಿವಾಲ ಸೇರಿ 10 ಜನರು ಫೆ. 22ರಂದು ಸನ್ಯಾಸ ದೀಕ್ಷೆ ಪಡೆಯಲಿದ್ದಾರೆ. ಫೆ. 21ರಂದು ಬೆಳಗ್ಗೆ 9.30ಕ್ಕೆ ಇವರೆಲ್ಲರ ಅದ್ದೂರಿ ಮೆರವಣಿಗೆ ನಗರದಲ್ಲಿ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts