More

    ಜೆಡಿಎಸ್​ ಜಲಧಾರೆಗೆ ಭರ್ಜರಿ ಸಿದ್ಧತೆ : 6 ಸಾವಿರ ಬೈಕ್​ಗಳಲ್ಲಿ 12ಸಾವಿರ ಯುವ ಕಾರ್ಯಕರ್ತರಿಂದ ಬೈಕ್​ ರ್ಯಾಲಿ

    ಮುಳಬಾಗಿಲು: ನಗರದ ಅಮರಜ್ಯೋತಿ ವಿದ್ಯಾಸಂಸ್ಥೆಯ ಮುಂಭಾಗದ ಮೈದಾನದ ಹೆಲಿಪ್ಯಾಡ್​ಗೆ ಮೇ10ರ ಬೆಳಗ್ಗೆ 10.30ಕ್ಕೆ ಹೆಲಿಕಾಪ್ಟರ್​ ಮೂಲಕ ಆಗಮಿಸಲಿರುವ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ, ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ, ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಯುವ ಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಆಗಮಿಸಲಿದ್ದು ಅವರನ್ನು ಸ್ವಾಗತಿಸಲು 6 ಸಾವಿರ ಬೈಕ್​ಗಳಲ್ಲಿ 12ಸಾವಿರ ಯುವ ಕಾರ್ಯಕರ್ತರ ಪಡೆ, 6 ಸಾವಿರ ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ವಿವಿಧ ಕಲಾ ತಂಡಗಳು ಮೆರವಣಿಗೆ ಮೂಲಕ ಸಮಾವೇಶದ ಸ್ಥಳ ತಲುಪಲಿದೆ ಎಂದು ಜೆಡಿಎಸ್​ ಮುಖಂಡ ಸಮೃದ್ಧಿ ವಿ.ಮಂಜುನಾಥ್​ ತಿಳಿಸಿದರು.
    ನಗರದ ಕೋಚಿಮುಲ್​ ಶಿಬಿರ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೆರವಣಿಗೆಯಲ್ಲಿ ತೆರಳುವಾಗ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್​, ಮಾಜಿ ಸಚಿವ ದಿ.ಆಲಂಗೂರು ಶ್ರೀನಿವಾಸ್​ ಪ್ರತಿಮೆಗೆ ಮಾಲಾರ್ಪಣೆ, ದರ್ಗಾ ಹಾಗೂ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾ.ಹೆ 75ರ ಕೋಲಾರ ಬೈಪಾಸ್​ನಲ್ಲಿರುವ ಬಾಲಾಜಿ ಭವನದ ಮುಂಭಾಗ ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
    ಕಾರ್ಯಕ್ರಮಕ್ಕೆ ಒಟ್ಟು 36 ಸಾವಿರ ಜನ ಸೇರಿಸುವ ಗುರಿ ಹೊಂದಲಾಗಿದೆ. ಗ್ರಾಮಾಂತರದಿಂದ ಆಗಮಿಸುವ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ 100 ಬಸ್​ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಟೆಂಪೋ, ಟ್ರಾ$್ಯಕ್ಟರ್​ ಮತ್ತಿತರ ವಾಹನಗಳ ಮೂಲಕ ಪಾಲ್ಗೊಳ್ಳಲಿದ್ದಾರೆ. ಮಜ್ಜಿಗೆ, ಊಟದ ವ್ಯವಸ್ಥೆಯನ್ನು 6 ಕೌಂಟರ್​ಗಳಲ್ಲಿ 500 ಮಂದಿ ವಿತರಣಾ ಕಾರ್ಯದಲ್ಲಿ ತೊಡಗಲಿದ್ದಾರೆ ಎಂದರು.
    ಕುರುಡುಮಲೆಯ ಕೌಂಡಿನ್ಯ ನದಿ ಹಾಗೂ ಕೋಲಾರ&ಮುಳಬಾಗಿಲು ತಾಲೂಕಿನ ಪಾಲಾರ್​ ನದಿಯಿಂದ 500 ಬಿಂದಿಗೆಗಳಲ್ಲಿ ನೀರು ತಂದು 1 ಸಾವಿರ ಮಹಿಳೆಯರು ಕಳಶಗಳೊಂದಿಗೆ ಹಾಗೂ 500 ಕಲಾವಿದರ ನೃತ್ಯ ಪ್ರದರ್ಶನದೊಂದಿಗೆ, 6 ಸಾವಿರ ಜನತಾ ಜಲಧಾರೆ ಟೀ&ಶರ್ಟ್​ ಹಾಕಿರುವ ಯುವಕರು ಬೈಕ್​ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
    ತಾಲೂಕು ಜೆಡಿಎಸ್​ ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್​.ನಾಗರಾಜ್​ ಮಾತನಾಡಿ, ಕೆಲವರು ಇಲ್ಲಸಲ್ಲದ ಊಹಾ ಪೋಹಗಳು ಹಬ್ಬಿಸುತ್ತಿದ್ದಾರೆ. 120 ೇತ್ರಗಳ ಜೆಡಿಎಸ್​ ಅಭ್ಯರ್ಥಿಗಳನ್ನು ಈಗಾಗಲೇ ಪ್ರಕಟಿಸಿದ್ದು, ಸಮೃದ್ಧಿ ವಿ.ಮಂಜುನಾಥ್​ ಮುಳಬಾಗಿಲು ಮೀಸಲು ೇತ್ರದ ಅಭ್ಯರ್ಥಿ ಎಂದು ೂಷಣೆ ಮಾಡಿದ್ದು ಅವರೇ ಮುಂದಿನ ಶಾಸಕರಾಗಲಿದ್ದಾರೆ ಎಂದರು.
    ತಾಪಂ ಮಾಜಿ ಅಧ್ಯಕ್ಷ ಎಂ.ಎಸ್​.ಶ್ರೀನಿವಾಸರೆಡ್ಡಿ, ಮಾಜಿ ಸದಸ್ಯ ಡಾ.ಸಿ.ಎನ್​.ಪ್ರಕಾಶ್​, ಜಿಪಂ ಮಾಜಿ ಸದಸ್ಯ ಬಿ.ವಿ.ಸಾಮೇಗೌಡ, ಜಂಟಿ ಕಾರ್ಯದರ್ಶಿ ಕವತನಹಳ್ಳಿ ಮುನಿಸ್ವಾಮಿಗೌಡ, ಜೆಡಿಎಸ್​ ಮುಖಂಡರಾದ ದೊಮ್ಮಸಂದ್ರ ಡಿ.ವಿ.ರುಪತಿಗೌಡ, ಬೆಳಪನಹಳ್ಳಿ ಕೇಶವರೆಡ್ಡಿ, ಹರಪನಾಯಕನಹಳ್ಳಿ ರಮೇಶ್​, ಬೊಮ್ಮಸಂದ್ರ ಪ್ರಹ್ಲಾದಗೌಡ ಇತರರಿದ್ದರು.

    ಗೊಂದಲ ಸೃಷ್ಟಿಸಬೇಡಿ: ಜೆಡಿಎಸ್​ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕಾರ್ಯಕ್ರಮ ಯಶಸ್ವಿಗೊಳಿಸಲು ಸಿದ್ದಗೊಂಡಿದ್ದಾರೆ. ತಾಲೂಕು ಮಾಜಿ ಅಧ್ಯಕ್ಷ ಆಲಂಗೂರು ಶಿವಣ್ಣ ಅವರು ಗಂಟಲು ಶಸ ಚಿಕಿತ್ಸೆಗೆ ಒಳಗಾಗಿದ್ದು ಅವರು ವಿಶ್ರಾಂತಿಯಲ್ಲಿದ್ದು ಮಂಗಳವಾರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವೇದಿಕೆಗೆ ವಿಐಪಿ ಪಾಸ್​ ಇರುವವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. 14 ವರ್ಷದಿಂದ ವನವಾಸ ಅನುಭವಿಸುತ್ತಿರುವ ಜೆಡಿಎಸ್​ ಕಾರ್ಯಕರ್ತರು, ಮುಖಂಡರು 2023ರ ಚುನಾವಣೆಯಲ್ಲಿ ಜೆಡಿಎಸ್​ ಬಹುಮತದಿಂದ ಗೆಲ್ಲಿಸಲು ಜನತಾ ಜಲಧಾರೆ ಕಾರ್ಯಕ್ರಮ ಹುರಿದುಂಬಿಸುತ್ತಿದೆ ಎಂದು ಮಂಜುನಾಥ್​ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts