More

    ಜೆಇ ಎಸಿಬಿ ಬಲೆಗೆ

    ಲಕ್ಷ್ಮೇಶ್ವರ: ತಾಲೂಕಿನ ಗೊಜನೂರ ಗ್ರಾಪಂ ವ್ಯಾಪ್ತಿಯಲ್ಲಿ ಸಾಮೂಹಿಕ ಶೌಚಗೃಹಗಳನ್ನು ನಿರ್ವಿುಸಿದ ಗುತ್ತಿಗೆದಾರರಿಂದ 15 ಸಾವಿರ ರೂ. ಲಂಚ ಪಡೆಯುವ ವೇಳೆ ಪಂಚಾಯತ್​ರಾಜ್ ಇಂಜಿನಿಯರಿಂಗ್ ಉಪವಿಭಾಗದ ಜೆಇ ಮಿರಾಜುದ್ದೀನ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

    ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಗೊಜನೂರ ಗ್ರಾಮದಲ್ಲಿ ಗುತ್ತಿಗೆದಾರರ ರವಿಕುಮಾರ ನಿಡಗುಂದಿ ಅವರು ಸಾಮೂಹಿಕ ಶೌಚಗೃಹ ನಿರ್ವಿುಸಿದ್ದರು. ಕಾಮಗಾರಿಯ ಬಿಲ್ ಪಾಸ್ ಮಾಡಿಕೊಡಲು ಮಿರಾಜುದ್ದೀನ್ 15 ಸಾವಿರ ರೂ. ಲಂಚ ಕೇಳಿದ್ದಾರೆ. ಇದಕ್ಕೆ ಗುತ್ತಿಗೆದಾರ ಒಪ್ಪದ್ದರಿಂದ ಆರೇಳು ತಿಂಗಳಿಂದ ಕಾಮಗಾರಿ ಪೂರ್ಣಗೊಂಡಿರುವ ಪ್ರಮಾಣ ಪತ್ರ ನೀಡದೇ ಸತಾಯಿಸಿದ್ದಾರೆ. ಇದರಿಂದ ಬೇಸತ್ತ ಗುತ್ತಿಗೆದಾರ ಎಸಿಬಿಗೆ ದೂರು ಸಲ್ಲಿಸಿದ್ದರು. ಗುರುವಾರ ಮೀರಾಜುದ್ದೀನ್​ಗೆ 15 ಸಾವಿರ ರೂ. ಕೊಡುವುದಾಗಿ ರವಿಕುಮಾರ ತಿಳಿಸಿದ್ದರು. ಶಿರಹಟ್ಟಿ-ಮಾಗಡಿ ರಸ್ತೆಯಲ್ಲಿ ಲಂಚ ಪಡೆಯುವ ವೇಳೆ ಎಸಿಬಿ ಡಿಎಸ್​ಪಿ ವಾಸುದೇವರಾಮ ಎನ್. ನೇತೃತ್ವದ ತಂಡ ದಾಳಿ ನಡೆಸಿ ಹಣ ಸಮೇತ ಮಿರಾಜುದ್ದೀನ್​ನನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ಎಸಿಬಿ ಪಿಎಸ್​ಐಗಳಾದ ವೈ.ಎಸ್. ಧರಣನಾಯಕ, ರವೀಂದ್ರ ಕುರುಬಗಟ್ಟ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts