More

    ರಾಜ್ಯದಲ್ಲಿವೆ ಸಿಡಿ ಬಿಸಿನೆಸ್ ಮಾಡುವ ಎರಡು ಫ್ಯಾಕ್ಟರಿ

    ದಾವಣಗೆರೆ : ರಾಜ್ಯದಲ್ಲಿ ಸಿಡಿ ಬಿಸಿನೆಸ್ ಮಾಡುವ ಎರಡು ಫ್ಯಾಕ್ಟರಿ ಇವೆ. ಅದರಲ್ಲಿ ಒಬ್ಬರ ಹೆಸರನ್ನು ಕುಮಾರಸ್ವಾಮಿ ಹೇಳಿದ್ದಾರೆ, ಇನ್ನೊಂದು ಫ್ಯಾಕ್ಟರಿಯ ಹೆಸರನ್ನು 8ನೇ ತಾರೀಕಿನಂದು ನಾನು ಹೇಳುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
     ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಬ್ಬರೂ ಬೇರೆ ಬೇರೆ ಪಕ್ಷದಲ್ಲಿದ್ದಾರೆ, ಇಬ್ಬರದೂ ಸಿಡಿ ಬಿಸಿನೆಸ್ ಒಂದೇ ಇದೆ. ಎರಡೂ ಕುಟುಂಬಗಳು ರಾಜ್ಯದ ರಾಜಕಾರಣ ಹಾಳು ಮಾಡುತ್ತಿವೆ ಎಂದು ತಿಳಿಸಿದರು.
     ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಸಂಸದರಾಗಿದ್ದರು. ಈಗ ತನಿಖೆ ಮಾಡುವವರು ಯಾರು?, ರಾಜ್ಯದಲ್ಲಿರುವ ಸರ್ಕಾರ ಯಾರದ್ದು. ಪ್ರಜ್ವಲ್ ಪರಾರಿ ಆಗುವ ವರೆಗೆ ರಾಜ್ಯ ಸರ್ಕಾರ ಮಲಗಿತ್ತಾ?. ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲು ಯತ್ನ ನಡೆದಿದೆ, ಹೊಂದಾಣಿಕೆಯ ರಾಜಕಾರಣ ನಡೆದಿದೆ ಎಂದು ಆರೋಪಿಸಿದರು.
     ರಾಜ್ಯದಲ್ಲಿ ಪಿಎಸ್‌ಐ ಹಗರಣ, ಗಾಂಜಾ, ಅಫೀಮು ಕೇಸ್ ಏನಾಯಿತು?, ಎರಡು ಪೋಕ್ಸೋ ಪ್ರಕರಣ ದಾಖಲಾದರೂ ಏನೂ ಆಗುತ್ತಿಲ್ಲ. ಸಿನಿಮಾ ನಟಿಯರು ಬಂಧನವಾಯಿತು, ಅವರ ಮೊಬೈಲ್ ಸಿಕ್ಕಿರು. ಅದರಲ್ಲಿ ಯಾವ ರಾಜಕಾರಣಿಯ ಮಗ ಇದ್ದ ಎಂದು ಬಹಿರಂಗವಾಗಲಿಲ್ಲ ಎಂದರು.
     ಪೆನ್‌ಡ್ರೈವ್ ಯಾರು ಬಿಡುಗಡೆ ಮಾಡಿದ್ದು ಎಂದು ತನಿಖೆಯಿಕೆಯಿಂದ ಗೊತ್ತಾಗಲಿದೆ. ಉದ್ದೇಶಪೂರ್ವಕವಾಗಿ ಚುನಾವಣೆ ವೇಳೆ ಬ್ಲಾಕ್‌ಮೇಲ್ ಮಾಡಲು ಬಳಕೆ ಮಾಡಿದ್ದಾರೆ. ಚುನಾವಣೆಗೆ ಮುಂಚಿತವಾಗಿಯೆ ಬಿಡುಗಡೆ ಮಾಡಬೇಕಿತ್ತು ಎಂದು ಹೇಳಿದರು.
     ಇಷ್ಟು ದಿನ ಕಾಂಗ್ರೆಸ್‌ಗೆ ಮತ ಹಾಕಲು ಹೇಳಿದ್ದ ಹರಿಹರದ ಸ್ವಾಮೀಜಿಯೊಬ್ಬರು ಈಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಕರೆ ಮಾಡಿ ಆಶೀರ್ವಾದ ಪಡೆಯಲು ಬರುವಂತೆ ಹೇಳಿದ್ದಾರಂತೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ 5 ಬಾರಿ ಕೇಳಿದರೂ ಅವಕಾಶ ನೀಡಿರಲಿಲ್ಲ, ನಾಳೆ ಭೇಟಿ ಮಾಡಲು ಹೇಳಿದ್ದಾರಂತೆ. ಬಿಜೆಪಿ ಗಾಳಿ ಚೆನ್ನಾಗಿದೆ, 25 ಸ್ಥಾನ ಗೆಲ್ಲುತ್ತದೆ ಎಂಬ ಕಾರಣಕ್ಕೆ ಈಗ ಕರೆದಿದ್ದಾರೆ ಎಂದು ತಿಳಿಸಿದರು.
     ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಪಡೆದ ಅನುದಾನದ ಹಿಂದೆ ಹಗರಣದ ವಾಸನೆಯಿದೆ. ನಕಲಿ ಸಹಿ ಮಾಡಿಸಿ ಹಣ ಪಡೆಯಲಾಗಿದೆ ಎಂದು ಆರೋಪಿಸಿದರು.
     
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts