More

    ಜೀವ ಹಿಂಡುತಿದೆ ಕೋಳಿ ಸಾಕಣೆ ಕೇಂದ್ರ

    ಎನ್.ಆರ್.ಪುರ: ಸೀತೂರು ಗ್ರಾಮದ ಅಬ್ಬಿಗುಂಡಿಯ ಕೋಳಿ ಫಾಮರ್್​ನಿಂದ ಮಲಿನ ವಾತಾವರಣ ನಿರ್ವಣವಾಗಿದ್ದು, ಕೂಡಲೆ ತೆರವುಗೊಳಿಸುವಂತೆ ಒತ್ತಾಯಿಸಿ ಅಬ್ಬಿಗುಂಡಿ, ಮುತ್ತಗದಾನಿ ನಿವಾಸಿಗಳು ಸೀತೂರು ಗ್ರಾಪಂ ಎದುರು ಗುರುವಾರ ಪ್ರತಿಭಟನೆ ನಡೆಸಿ ತಾಪಂ ಇಒ ನಯನಾ ಅವರಿಗೆ ಮನವಿ ಸಲ್ಲಿಸಿದರು.

    ಎರಡು ವರ್ಷದ ಹಿಂದೆ ಅಬ್ಬಿಗುಂಡಿಯಲ್ಲಿ ಸತೀಶ್ ಅವರು ಸರ್ವೆ ನಂ. 132ರ ಸರ್ಕಾರಿ ಜಾಗದಲ್ಲಿ ಫಾಮ್ರ್ ನಿರ್ವಿುಸಿಕೊಂಡಿದ್ದಾರೆ. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಓಡಾಡುವ ರಸ್ತೆಯಲ್ಲೇ ಇರುವುದರಿಂದ ವಾತಾವರಣ ಕಲುಷಿತಗೊಂಡಿದೆ. ಕಳೆದ ಜುಲೈನಲ್ಲೇ ಗ್ರಾಪಂಗೆ ಮನವಿ ಸಲ್ಲಿಸಿದ್ದರಿಂದ ತೆರವುಗೊಳಿಸಲಾಗಿತ್ತು. ಜ.14ರಿಂದ ಮತ್ತೆ ಪ್ರಾರಂಭ ಮಾಡಿದ್ದಾರೆ. ಅಬ್ಬಿಗುಂಡಿಯಲ್ಲಿ ಕುಡಿಯುವ ನೀರು ಪೂರೈಸುವ ಟ್ಯಾಂಕ್ ಇದೆ. ಆದ್ದರಿಂದ ತಕ್ಷಣ ಸ್ಥಳ ಪರಿಶೀಲಿಸಿ ಫಾಮ್ರ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

    ಅಬ್ಬಿಗುಂಡಿ ನಿವಾಸಿ ದಿವಾಕರ ಮಾತನಾಡಿ, ಕೋಳಿ ಫಾಮ್ರ್ ಸಮೀಪ ಕುಡಿಯುವ ನೀರಿನ ಟ್ಯಾಂಕ್ ಇದೆ. ನಾಯಿಗಳ ಹಿಂಡು ಅಲ್ಲಿ ಸೇರುತ್ತದೆ. ಅವು ಶಾಲೆಗೆ ಹೋಗುವ ಮಕ್ಕಳಿಗೆ ಕಚ್ಚಲು ಬರುತ್ತವೆ. ಜತೆಗೆ ಕೆಟ್ಟ ವಾಸನೆ ಬರುತ್ತಿದೆ. ಕೋಳಿ ತ್ಯಾಜ್ಯವನ್ನು ಪಕ್ಕದಲ್ಲೇ ಹರಿಯುವ ಕಪಿಲಾ ಹಳ್ಳಕ್ಕೆ ಹಾಕುತ್ತಿರುವುದರಿಂದ ನೀರು ಮಲಿನವಾಗುತ್ತಿದೆ ಎಂದರು.

    ಜಾಗ ಕಮಲಾಪುರ ಕಿರು ಅರಣ್ಯ ಪ್ರದೇಶದ್ದು. ಇದನ್ನು ತೆರವುಗೊಳಿಸುವಂತೆ ಎನ್.ಆರ್.ಪುರ ವಲಯ ಅರಣ್ಯಾಧಿಕಾರಿಗೆ ಸೂಚನೆ ನೀಡಿದ್ದೇನೆ. ಈ ಹಿಂದೆ ಸ್ಥಳೀಯರ ಮನವಿ ಮೇರೆಗೆ ಸೀತೂರು ಗ್ರಾಪಂನಿಂದ ನೋಟಿಸ್ ನೀಡಿದಾಗ ಕೋಳಿ ಫಾಮ್ರ್ ಮುಚ್ಚಿದ್ದರು. ಮತ್ತೆ ಆರಂಭಿಸಿದ್ದರಿಂದ ಜ.30ರಂದು ಮತ್ತೆ ನೋಟಿಸ್ ನೀಡಲಾಗಿದೆ ಎಂದು ತಾಪಂ ಇಒ ನಯನಾ ತಿಳಿಸಿದರು.

    ಗ್ರಾಪಂಗೆ ಭೇಟಿ ನೀಡಿದ ತಾಪಂ ಅಧ್ಯಕ್ಷೆ ಜಯಶ್ರೀ ಮೋಹನ್, ಸ್ಥಳ ಪರಿಶೀಲನೆ ಮಾಡಿ ಕಾನೂನಿನಂತೆ ಕ್ರಮ ಕೈಗೊಳ್ಳಿ ಎಂದು ತಾಪಂ ಇಒಗೆ ತಿಳಿಸಿದರು.

    ಗ್ರಾಪಂ ಮಾಜಿ ಅಧ್ಯಕ್ಷ ಎನ್.ಪಿ.ರಮೇಶ್, ಸದಸ್ಯರಾದ ಎಚ್.ಇ.ದಿವಾಕರ, ಎಚ್.ಇ.ಮಹೇಶ್, ಸತ್ಯ, ದಿವಾಕರ, ನಾಗೇಂದ್ರ, ಅಂಬರೀಶ್, ಯೋಗೀಶ್, ನಾಗರತ್ನ್ನಾ, ಕಮಲಾ, ರತ್ನಾ, ಪೂರ್ಣಿಮಾ, ಸರಸ್ವತಿ, ರತ್ನಾಕರ, ಚಂದ್ರು, ಸುರೇಶ, ಪ್ರಭಾಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts