More

    ಜೀವ ಉಳಿಸಲು ರಕ್ತದಾನ ಅಗತ್ಯ

    ರಾಯಬಾಗ, ಬೆಳಗಾವಿ: ಜೀವ ಉಳಿಸಲು ರಕ್ತ ಅತ್ಯಂತ ಉಪಯುಕ್ತ ವಾಗಿದ್ದು, ಆರೋಗ್ಯವಂತ ವ್ಯಕ್ತಿ ವರ್ಷದಲ್ಲಿ ಕನಿಷ್ಠ ಎರಡು ಸಲ ರಕ್ತದಾನ ಮಾಡಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಬಸವರಾಜಪ್ಪ ಕೆ.ಎಂ. ಹೇಳಿದರು.

    ಪಟ್ಟಣದ ವಕೀಲರ ಸಂಘದ ಸಭಾಭವನದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ ಅಂಗವಾಗಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಬಿಮ್ಸ್ ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನವಾಗಿದೆ ಎಂದರು.

    ವಕೀಲರ ಸಂಘದ ಅಧ್ಯಕ್ಷ ಆರ್.ಎಚ್.ಗೊಂಡ ಮಾತನಾಡಿ, ನಾವು ನೀಡುವ ರಕ್ತದಿಂದ ಅನೇಕ ಜೀವಗಳನ್ನು ಉಳಿಸಬಹುದಾಗಿದೆ. 60ಕ್ಕಿಂತ ಹೆಚ್ಚು ವಕೀಲರು ರಕ್ತದಾನ ಮಾಡಲು ಹೆಸರು ನೋಂದಾಯಿಸಿದ್ದಾರೆ ಎಂದು ತಿಳಿಸಿದರು. ರಕ್ತದಾನ ಶಿಬಿರದಲ್ಲಿ ಪ್ರಧಾನ ದಿವಾಣಿ ನ್ಯಾಯಾಧೀಶ ಅಲೋಕ ಎ.ಎನ್., ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಮಂಜುನಾಥ ಪಾನಘಂಟಿ, ವಕೀಲರ ಸಂಘದ ಅಧ್ಯಕ್ಷ ಆರ್.ಎಚ್.ಗೊಂಡೆ ಸೇರಿ ಸುಮಾರು 25ಕ್ಕಿಂತ ಹೆಚ್ಚಿನ ವಕೀಲರು, ನ್ಯಾಯಾಲಯದ ಸಿಬ್ಬಂದಿ ರಕ್ತದಾನ ಮಾಡಿದರು ಎಂದು ತಿಳಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಂ.ಚಿಂಚಲಿಕರ, ಕಾರ್ಯದರ್ಶಿ ಆರ್.ಎಸ್.ಹೊಳೆಪ್ಪಗೋಳ, ಸಹಕಾರ್ಯದರ್ಶಿ ಎಸ್.ಆರ್.ಪಾಟೀಲ, ಡಾ. ಝೆಡ್.ಎಸ್.ಜೋಶಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಪಾಟೀಲ, ಶೀತಲ್ ಚೌಗಲಾ, ವಿಜಯಲಕ್ಷ್ಮೀ ನರಸನ್ನವರ, ಸದಾಶಿವ ಚಿಗರಿ, ನಾಜಿಯಾ ಜಿನ್ನಾಬಡೆ, ಶಂಕರ ಬಾರಿಗಿಡದ, ವಕೀಲರಾದ ಎ.ಬಿ.ಮಂಗಸೂಳೆ, ಎಸ್.ಕೆ.ರೆಂಟೆ, ಜಿ.ಎಸ್.ಪವಾರ, ಪಿ.ಎಂ.ದರೂರ, ಅಮರ ನಾಗರಾಳೆ, ಎಸ್.ಸಿ.ದೀಕ್ಷಿತ, ಎನ್.ಎಸ್.ಒಡೆಯರ, ಎಸ್.ಎಸ್.ಜೋಶಿ, ಎಸ್.ವಿ.ಬನ್ನೆಗೋಳ, ಎಸ್.ಬಿ.ಹಿರೇಕೊಡಿ, ಅಜಿತ ಖಿಚಡೆ, ಜಿ.ಡಿ.ಕುಲಕರ್ಣಿ, ಎಸ್.ಎ.ಕೂಗೆ, ಎಸ್.ಪಿ.ಕಾಂಬಳೆ, ಎಸ್.ಬಿ.ಬಿರಾದಾರಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts