More

    ಜೀವವಿಮಾ ಪ್ರತಿನಿಧಿಗಳ ಒಕ್ಕೂಟ ಪ್ರತಿಭಟನೆ

    ಬೇಲೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತಿಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಸದಸ್ಯರು ಬೇಲೂರು ಪಟ್ಟಣದ ಎಸ್‌ಬಿಐ ಬ್ಯಾಂಕ್ ಪಕ್ಕದಲ್ಲಿನ ಜೀವವಿಮಾ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

    ಭಾರತೀಯ ಜೀವವಿಮಾ ಪ್ರತಿನಿಧಿಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಶಿವಣ್ಣಗೌಡ ಮಾತನಾಡಿ, ಜೀವವಿಮಾ ಪ್ರತಿನಿಧಿಗಳ ಪಾಲಿಸಿದಾರರ ಬೋನಸ್ ಹೆಚ್ಚಿಸಬೇಕು. ಪಾಲಿಸಿದಾರರ ಸಾಲ ಮತ್ತು ಪ್ರೀಮಿಯಂ ವಿಳಂಬದ ಶುಲ್ಕದ ಬಡ್ಡಿ ದರಗಳನ್ನು ಕಡಿಮೆ ಮಾಡಬೇಕು. ಜಿಎಸ್‌ಟಿಯನ್ನು ತೆಗೆದು, 1938ರಿಂದ ಇರುವ ಸ್ಮಾಟಿಕ್ ಆಯೋಗದ ದರಗಳನ್ನು ಹೆಚ್ಚಿಸಬೇಕು. ಜೀವವಿಮಾ ಪ್ರತಿನಿಧಿಗಳ ಕಲ್ಯಾಣ ನಿಧಿ ರಚಿಸಿ, ಗ್ರಾೃಚುಟಿಯನ್ನು ಹೆಚ್ಚಿಸಬೇಕು. ಅವಧಿ ವಿಮೆ ಹೆಚ್ಚಳ ಮಾಡಬೇಕು. ಎಲ್ಲ ಪ್ರತಿನಿಧಿಗಳಿಗೆ ಗ್ರೂಪ್ ಮೆಡಿಕ್ಲೈಮ್ ಮಾಡಬೇಕು. ಪಿಂಚಣಿ ಯೋಜನೆಯೊಂದಿಗೆ ಜೀವವಿಮಾ ಪ್ರತಿನಿಧಿಯನ್ನು ವೃತ್ತಿಪರರು ಎಂದು ಗುರುತಿಸಬೇಕು. ನೇರ ಪ್ರತಿನಿಧಿಗಳಿಗೆ ಪ್ರಯೋಜನಗಳನ್ನು ನೀಡಿ ವಹಿವಾಟು ಶುಲ್ಕವನ್ನು ಹೆಚ್ಚಿಸಬೇಕು ಎಂದರು.

    ಭಾರತೀಯ ಜೀವವಿಮಾ ಪ್ರತಿನಿಧಿಗಳ ಒಕ್ಕೂಟದ ತಾಲೂಕು ಕಾರ್ಯದರ್ಶಿ ಪೂವಯ್ಯ, ಖಜಾಂಚಿ ಎಂ.ಎಸ್.ಚಂದ್ರಶೇಖರ್, ಸಂಘದ ಪದಾಧಿಕಾರಿಗಳಾದ ಅರುಣ್‌ಕುಮಾರ್, ಷಡಕ್ಷರಿ, ಶರ್ಮ, ಗೋಪಿನಾಥ್, ಲಿಂಗಾರಾಧ್ಯ, ವೀರಭದ್ರೇಗೌಡ, ಹೇಮಚಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts