More

    ಜಿಲ್ಲೆಯಲ್ಲಿ 29 ಜನರಿಗೆ ಕರೊನಾ ದೃಢ

    ಹಾವೇರಿ: ಜಿಲ್ಲೆಯಲ್ಲಿ ಶನಿವಾರ 29 ಜನರಿಗೆ ಕರೊನಾ ದೃಢಪಟ್ಟಿದ್ದು, 46 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದ್ದಾರೆ. ಈವರೆಗೆ 10,328 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. 9,702 ಜನರು ಗುಣವಾಗಿದ್ದಾರೆ. 187 ಜನರು ಮೃತಪಟ್ಟಿದ್ದಾರೆ. 439 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 349 ಸೋಂಕಿತರು ಹೋಂ ಐಸೋಲೇಷನ್, 90 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್​ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

    ತಾಲೂಕುವಾರು ವಿವರ: ಹಾನಗಲ್ಲ-3, ಹಾವೇರಿ-4, ಹಿರೇಕೆರೂರ-6, ರಾಣೆಬೆನ್ನೂರು-9, ಸವಣೂರ-6, ಶಿಗ್ಗಾಂವಿ-1 ಸೇರಿ 29 ಜನರಿಗೆ ಶನಿವಾರ ಸೋಂಕು ತಗುಲಿದೆ. ಸೋಂಕಿನಿಂದ ಗುಣವಾದ ಬ್ಯಾಡಗಿ-2, ಹಾನಗಲ್ಲ-6, ಹಾವೇರಿ-11, ಹಿರೇಕೆರೂರು-1, ರಾಣೆಬೆನ್ನೂರು-11, ಸವಣೂರ-14, ಶಿಗ್ಗಾಂವಿ-1 ಸೇರಿ 46 ಜನರು ಬಿಡುಗಡೆಯಾಗಿದ್ದಾರೆ. ರಾಣೆಬೆನ್ನೂರ ತಾಲೂಕಿನ ಜೋಯಿಸರಹರಳಹಳ್ಳಿಯ 84 ವರ್ಷದ ವೃದ್ಧ ಅ. 19ರಂದು ತೀವ್ರ ಉಸಿರಾಟ ತೊಂದರೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ಅ. 23ರಂದು ಮೃತಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts