More

    ಜಿಲ್ಲೆಯಲ್ಲಿ 14 ಕೋವ್ಯಾಕ್ಸಿನ್ ಕೇಂದ್ರ

    ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡಲು ಒಟ್ಟು 14 ಕೇಂದ್ರಗಳನ್ನು ಗುರುತಿಸಲಾಗಿದೆ. ಜಿಲ್ಲಾ ಆಸ್ಪತ್ರೆ, ಎಲ್ಲ ತಾಲೂಕು ಆಸ್ಪತ್ರೆಗಳು ಹಾಗೂ ಒಂದು ಪಿಎಚ್​ಸಿ ಒಂದು ಸಿಎಚ್​ಸಿಯನ್ನು ಅದಕ್ಕಾಗಿ ಗುರುತಿಸಲಾಗಿದೆ. ಎಲ್ಲ ಕಡೆಗಳಿಗೆ ಒಬ್ಬ ವ್ಯಾಕ್ಸಿನೇಟರ್ ಹಾಗೂ ಒಬ್ಬ ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಪ್ರತಿ. ಕೇಂದ್ರದಲ್ಲಿ ಪ್ರತಿ ದಿನ 100 ಜನರಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ.ರಮೇಶ ರಾವ್ ತಿಳಿಸಿದ್ದಾರೆ.

    ಜಿಲ್ಲೆಯ 105 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಸಂಗ್ರಹಿಸಲು ಶೀತಲೀಕರಣ ವ್ಯವಸ್ಥೆ ಇದೆ. ಜಿಲ್ಲೆಗೆ ಮೊದಲ ಹಂತದದಲ್ಲಿ ಲಸಿಕೆ ನೀಡಲು 12 ಸಾವಿರ ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ. ಎಲ್ಲರಿಗೂ ಪೂರೈಸಲು ಸಾಕಾಗುವಷ್ಟು ಲಸಿಕೆ ಸಂಗ್ರಹಿಸಲು ಬೇಕಾದ ಎಲ್ಲ ವ್ಯವಸ್ಥೆ ನಮ್ಮಲ್ಲಿದೆ ಎಂದು ಅವರು ವಿವರಿಸಿದ್ದಾರೆ. ಜಿಲ್ಲೆಗೆ ಲಸಿಕೆ ಯಾವಾಗ ತಲುಪಲಿದೆ ಎಂಬ ಮಾಹಿತಿ ಸ್ಪಷ್ಟವಾಗಿ ಸಿಕ್ಕಿಲ್ಲ. ಆದರೆ, ನಾವು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಇತ್ತೀಚೆಗೆ ನಡೆದ ಡ್ರೖೆರನ್ ಕೂಡ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ.

    9 ಜನರಿಗೆ ಕರೊನಾ: ಭಾನುವಾರದ ವರದಿಯಂತೆ ಜಿಲ್ಲೆಯ 9 ಜನರಿಗೆ ಕರೊನಾ ಸೋಂಕು ಇರುವುದು ಖಚಿತವಾಗಿದೆ. ಅಂಕೋಲಾ ಮತ್ತು ಹಳಿಯಾಳದಲ್ಲಿ ತಲಾ 2, ಯಲ್ಲಾಪುರದಲ್ಲಿ 3, ಕುಮಟಾ, ಹೊನ್ನಾವರ, ಶಿರಸಿ, ಸಿದ್ದಾಪುರದಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ. 15 ಜನ ಗುಣವಾಗಿದ್ದಾರೆ. ಸದ್ಯ ಕುಮಟಾದಲ್ಲಿ 12, ಶಿರಸಿಯಲ್ಲಿ 10, ಸಿದ್ದಾಪುರ ಹಾಗೂ ಅಂಕೋಲಾದಲ್ಲಿ ತಲಾ 8, ಯಲ್ಲಾಪುದಲ್ಲಿ 7, ಅಂಕೋಲಾದಲ್ಲಿ ತಲಾ 8,ಯಲ್ಲಾಪುರದಲ್ಲಿ 7, ಕಾರವಾರದಲ್ಲಿ 5, ಹಳಿಯಾಳದಲ್ಲಿ 4, ಭಟ್ಕಳ, ಮುಂಡಗೋಡ, ಜೊಯಿಡಾದಲ್ಲಿ ತಲಾ ಟ ಸೇರಿದಂತೆ 60 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ಒಟ್ಟು 14379 ಸೋಂಕು ಖಚಿತವಾಗಿದ್ದು, 14133 ಜನ ಗುಣವಾಗಿದ್ದಾರೆ. 186 ಜನ ಮೃತಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts