More

    ಜಿಪಂ-ತಾಪಂ ಮೀಸಲು ಪಟ್ಟಿ ಅವೈಜ್ಞಾನಿಕ, ಹಿಂದುಳಿದ ವರ್ಗಕ್ಕೆ ಅನ್ಯಾಯ, ವಿಜುಗೌಡ ಪಾಟೀಲ ಆಕ್ಷೇಪಣೆ ಸಲ್ಲಿಕೆ

    ವಿಜಯಪುರ: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆ ರಾಜ್ಯ ಚುನಾವಣೆ ಆಯೋಗದಿಂದ ಹೊರಡಿಸಿದ ಕ್ಷೇತ್ರವಾರು ಮೀಸಲು ಪಟ್ಟಿ ಅವೈಜ್ಞಾನಿಕವಾಗಿದ್ದು, ಹಿಂದುಳಿದ ವರ್ಗಕ್ಕೆ ಅನ್ಯಾಯವಾಗಿದೆ ಎಂದು ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ತಿಳಿಸಿದ್ದಾರೆ.
    ಈ ಬಗ್ಗೆ ಚುನಾವಣೆ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಿರುವ ಅವರು, ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನಲ್ಲಿ ಒಟ್ಟು 8 ಜಿಲ್ಲಾ ಪಂಚಾಯಿತಿ ಬರಲಿವೆ. ಸದರಿ ಮೀಸಲಾತಿ ಪ್ರಕಾರ 4-ಸಾಮಾನ್ಯ, 2-ಸಾಮಾನ್ಯ ಮಹಿಳೆ, 2 ಅನುಸೂಚಿತ ಮಹಿಳೆಗೆ ಮೀಸಲಿಡಲಾಗಿದೆ. ಜನಗಣತಿ ಆಧಾರದ ಮೇಲೆ ಸದರಿ ಮೀಸಲಾತಿ ಹೊರಡಿಸಿದ್ದೇ ಆದಲ್ಲಿ ಇದೊಂದು ಅವೈಜ್ಞಾನಿಕ. ಇದರಿಂದ ಹಿಂದುಳಿದ ವರ್ಗಗಳಾದ ಕುರುಬ, ಗಾಣಿಗ, ತಳವಾರ, ಮಾಳಿ ಸಮುದಾಯಕ್ಕೆ ಅನ್ಯಾಯವಾಗಲಿದೆ. ಹೀಗಾಗಿ ಸದರಿ ಮೀಸಲಾತಿ ಪಟ್ಟಿ ಪರಿಶೀಲಿಸಿ ಹಿಂದುಳಿದ ವರ್ಗಕ್ಕೆ ಅನ್ಯಾಯವಾಗದಂತೆ ಮೀಸಲಾತಿ ಪಟ್ಟಿ ಪ್ರಕಟಿಸಬೇಕೆಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts