More

    ಆಮೆಗತಿ ಆಡಳಿತ, ಗೋವಿಂದಪ್ಪ ಗರಂ

    ಚಿತ್ರದುರ್ಗ: ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರು, ಕಾರ‌್ಯದರ್ಶಿಗಳನ್ನು ನೇಮಿಸಿದ್ದರೂ ಕಳೆದ ಎಂಟು ತಿಂಗಳಿಂದ ಜಿಲ್ಲೆಯ ಆಡಳಿತ ಚುರುಕಾಗಿಲ್ಲ ಎಂದು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಅಸಮಾಧಾನ ವ್ಯಕ್ತಪಡಿಸಿದರು.
    ಚಿತ್ರದುರ್ಗ ಜಿಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಆಡಳಿತದಲ್ಲಿ ಹೊಸತನವಿಲ್ಲ. ಅಧಿಕಾರಿಗಳು ಫೋನ್ ಕರೆಗೆ ಸಿಗುತ್ತಿಲ್ಲ. ಯಾವ ಬದಲಾವಣೆ ಆಗಿವೆ ಎಂಬುದನ್ನು ತೋರಿಸಿ ನಂತರ ಸಭೆ ಮುಂದುವರಿಸಿ ಎಂದು ಪಟ್ಟು ಹಿಡಿದರು.
    ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಅವಸರದ ಸಭೆ ಬೇಡ. ಎಲ್ಲ ಇಲಾಖೆಗಳ ಪ್ರಗತಿ ಕೂಲಂಕಷ ಚರ್ಚೆಯಾಗಲಿ ಎಂದರು. ಸ್ವಪಕ್ಷೀಯ ಶಾಸಕರ ಭಾವನೆಗಳಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು, ಕಾಮಗಾರಿ, ಯೋಜನೆಗಳ ಕುರಿತಂತೆ ಶಾಸಕರ ಗಮನಕ್ಕೆ ತರದ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗುವುದು ಎಂದರು.
    *ಅಡಕೆ ಬೆಳೆಗಾರರಿಗೆ ಸಬ್ಸಿಡಿ: ಅಡಕೆ ಬೆಳೆಯ ಹನಿ ನೀರಾವರಿಗಾಗಿ ಚಿತ್ರದುರ್ಗ ಸೇರಿ ರಾಜ್ಯದೆಲ್ಲ ಬೆಳೆಗಾರರಿಗೆ ಸಹಾಯಧನ ನೀಡಲು ಹಾಗೂ ನರೇಗಾದಡಿ ಅಡಕೆ ಬೆಳೆ ಪ್ರದೇಶ ವಿಸ್ತರಣೆಗೆ ತೋಟಗಾರಿಕೆ ಸಚಿವರು ತಾತ್ವಿಕ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಇಲಾಖೆ ಡಿಡಿ ಜಿ.ಸವಿತಾ ತಿಳಿಸಿದರು.ಈ ಮೊದಲು ಆಯ್ದ ಜಿಲ್ಲೆಗಳ ಬೆಳೆಗಾರರಿಗೆ ಸೌಲಭ್ಯವಿತ್ತು. ಇದನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಿ ಸರ್ಕಾರ ಶೀಘ್ರ ಆದೇಶಿಸಲಿದೆ ಎಂದರು.
    ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ತೆರವಾಗಿದ್ದರೂ ಬಿಸಿಎಂ ಇಲಾಖೆ ಹಾಸ್ಟೆಲ್‌ಗಳಿಗೆ ಹಳೆಯ ಗುತ್ತಿಗೆದಾರರೇ ತರಕಾರಿ, ಆಹಾರ ಸಾ ಮಗ್ರಿ ವಿತರಿಸುತ್ತಿರುವ ಕುರಿತಂತೆ ಜಿಲ್ಲಾ ಉಸ್ತುವಾರಿ ಕಾರ‌್ಯದರ್ಶಿ ಆಮ್ಲಾನ್‌ಆದಿತ್ಯ ಬಿಸ್ವಾಸ್ ಆಕ್ಷೇಪ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ಇದಕ್ಕಾಗಿ ಟೆಂಡರ್ ಕರೆದಿದೆ ಎಂದು ರಘುಮೂರ್ತಿ ಹೇಳಿದರು.
    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಡಿಮೆ ಅವಧಿಯ ಟೆಂಡರ್ ಕರೆಯುವಂತೆ ಬಿಸಿಎಂ ಜಿಲ್ಲಾ ಅಧಿಕಾರಿ ಸುಬ್ರನಾಯಕ್ ಅವರಿಗೆ ಸಭೆ ತಾಕೀತು ಮಾಡಿತು. ಕೋರ್ಟ್ ತಡೆಯಾಜ್ಞೆ ತೆರವು ವಿಚಾರ ನನ್ನ ಗಮನಕ್ಕೂ ತಂದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸಚಿವರು ಗರಂ ಆದರು.
    ಸಮಾಜ ಕಲ್ಯಾಣ, ಬಿಸಿಎಂ, ಪರಿಶಿಷ್ಟ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳು ಕ್ರೈಸ್ ವಸತಿ ಶಾಲೆಗಳಿಗೆ ವಸತಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದು ಸಚಿವರು ತಿಳಿಸಿದರು. ಹೈಕೋರ್ಟ್ ಹೊಸ ಟೆಂಡರ್‌ಗೆ ಸೂಚಿಸಿದೆ ಎಂದು ಬಿಸ್ವಾ ಸ್ ಹೇಳಿದರು.
    ಚಿತ್ರದುರ್ಗ ತಾಲೂಕು ಬೆಳಗಟ್ಟ ಸೇರಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಸಬಾ, ದೊಡ್ಡಉಳ್ಳಾರ್ತಿ, ಚೌಳೂರು, ಹಿರೇಕೆರೆ ಕಾ ವಲುಗಳಲ್ಲಿ 5 ಗೋಶಾಲೆಗಳನ್ನು ಪ್ರಾರಂಭಿಸಬೇಕೆಂಬ ರಘುಮೂರ್ತಿ ಹಾಗೂ ಹೊಳಲ್ಕೆರೆ ತಾಲೂಕಲ್ಲಿ ಗೋಶಾಲೆ ಪ್ರಾರಂಭಿಸಬೇಕೆಂಬ ಶಾಸಕ ಚಂದ್ರಪ್ಪರ ಮಾತಿಗೆ ಸಚಿವರು ಸಹಮತ ಸೂಚಿಸಿ,ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
    ಜಿಲ್ಲೆಯ ದೇವರ ಎತ್ತುಗಳ ಮೇವಿಗಾಗಿ ಮಾಸಿಕ 22 ಲಕ್ಷ ರೂ.ಅನುದಾನದ ಅಗತ್ಯವಿದ್ದು, 10 ಲಕ್ಷ ರೂ.ಮಂಜೂರಾಗಿದೆ ಎಂದು ಪ ಶುವೈದ್ಯಕೀಯ ಇಲಾಖೆ ಡಿಡಿ ಡಾ.ಬಾಬುರತ್ನ ಹೇಳಿದರು. ಸದ್ಯ 2ಲೋಡ್ ಮೇವು ಪೂರೈಸಲಾಗಿದೆ ಎಂದರು. ಗೋಶಾಲೆಗಳ ಸಮ ರ್ಪಕ ನಿರ್ವಹಣೆಗೆ ಆರ್‌ಐ, ವಿಎಗಳನ್ನು ನೇಮಿಸಬೇಕೆಂದು ಬಿಸ್ವಾಸ್ ಸೂಚಿಸಿದರು.
    ಜಿಲ್ಲೆಯಲ್ಲಿ 278 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಗ್ರಾ.ಕು.ಮತ್ತು ನೈ.ಇಲಾಖೆ ಇಇ ಬಸವನ ಗೌಡಮೇಟಿ ಪಾಟೀಲ್ ಹೇಳಿದರು. ಡಿಸಿ ದಿವ್ಯಾಪ್ರಭು ಬರಗಾಲ ತುರ್ತು ಕಾರ‌್ಯ ನಿರ್ವಹಣೆಗೆ 9 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.
    ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಿಗೆ ಗ್ರಾಮೀಣ ಭಾಗಗಳಿಂದ ಎ ಷ್ಟೇ ವಿದ್ಯಾರ್ಥಿಗಳು ಬಂದರೂ ಅವರಿಗೆ ಪ್ರವೇಶ ನಿರಾಕರಿಸಬಾರದೆಂದು ಗೋವಿಂದಪ್ಪ ಹೇಳಿದರು. ಕೆಡಿಪಿ ನಾಮನಿರ್ದೇಶಿತ ಸದಸ್ಯ ರಾದ ತಿಮ್ಮಯ್ಯ, ಕೆ.ಸಿ.ನಾಗರಾಜು, ಖಲೀಮುಲ್ಲಾ, ರಂಗಸ್ವಾಮಿ ಹಾಗೂ ದೀಪಿಕಾ, ಸಿಇಒ ಎಸ್.ಜೆ. ಸೋಮಶೇಖರ್, ಎಎಸ್‌ಪಿ ಕುಮಾರಸ್ವಾಮಿ ಇದ್ದರು.

    *ಡಿವೈಡರ್ ತೆರವುಗೊಳಿಸಿ
    ಚಿತ್ರದುರ್ಗದ ಡಿವೈಡರ್‌ಗಳ ಕುರಿತು ತಜ್ಞರ ಸಮಿತಿ ಪರಿಶೀಲನೆ ನಡೆಸಿದ್ದು, ವರದಿ ಸಲ್ಲಿಕೆ ಬಳಿಕ ತೆರವಿಗೆ ಕ್ರಮ ವಹಿಸಲಾಗುವುದೆಂದು ಪಿಡಬ್ಲುೃಡಿ ಇಇ ಮಲ್ಲಿಕಾರ್ಜುನ್ ಹೇಳಿದರು. ಲೋಕಸಭೆ ಚುನಾವಣೆ ಮೊದಲು ಅನಗತ್ಯವಿರುವೆಡೆ ಡಿವೈಡರ್ ತೆರವುಗೊಳಿಸುವಂತೆ ಸಚಿವರು ಹೇಳಿದರು.

    *ಬೆಳೆ ವಿಮೆ, ಪರಿಹಾರ
    ಬರಗಾಲ ಹಿನ್ನೆಲೆಯಲ್ಲಿ ಜಿಲ್ಲೆಯ 6 ತಾಲೂಕುಗಳಲ್ಲಿ 2.35 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಇನ್‌ಪುಟ್ ಸಬ್ಸಿಡಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ಜೆಡಿ ಬಿ.ಮಂಜುನಾಥ ಹೇಳಿದರು. ರಾಜ್ಯ ಸರ್ಕಾರ ಗರಿಷ್ಠ 2 ಸಾವಿರ ರೂ. ಪರಿಹಾರ ಪಾವತಿಸಲಿದೆ ಎಂದರು. ಕಳೆದ ಬಾರಿ, ಚಳ್ಳಕೆರೆ ತಾಲೂಕು ಪಿ.ಮಹದೇವಪುರ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ 83 ಲಕ್ಷ ರೂ. ದುರ್ಬಳಕೆಯಾಗಿದೆ. ಜಿಲ್ಲೆಯಲ್ಲಿ 84992 ಫಲಾನುಭವಿಗಳಿಗೆ ಬೆಳೆ ನಷ್ಟ ಪರಿಹಾರ ವಿತರಿಸಲಾಗಿದೆ ಎಂದರು.

    *ಕೋಟ್
    ವಿವಿಧ ನಿಗಮಗಳಡಿ ಗಂಗಾಕಲ್ಯಾಣ, ನೇರ ಸಾಲ ಮತ್ತಿತರ ಯೋಜನೆಗಳಿಗೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಅದಕ್ಕೆ ತಕ್ಕಂತೆ ಸವಲತ್ತು ದೊರೆಯಬೇಕಿದೆ. ಈ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಲಿ. ಬರಗಾಲ ನಿರ್ವಹಣೆ ಕುರಿತಂತೆ ಅಧಿಕಾರಿಗಳು ಮೌನ ವಹಿಸುವುದು ಸರಿಯಲ್ಲ.
    ಡಾ.ಎಂ.ಚಂದ್ರಪ್ಪ, ಶಾಸಕ, ಹೊಳಲ್ಕೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts