More

    ಜಾಹೀರಾತು ನೋಡಿ ಆಹಾರ ಸೇವನೆಯಿಂದ ಅನಾರೋಗ್ಯ

    ಮಳವಳ್ಳಿ: ಜಾಹೀರಾತುಗಳಿಗೆ ಮಾರುಹೋಗಿ ಆಹಾರ ಸೇವನೆ ಮಾಡುತ್ತಿರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಪ್ರಸ್ತುತ ಪೀಳಿಗೆ ಎದುರಿಸುವಂತಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಾದೇಶ್ ಬೇಸರ ವ್ಯಕ್ತಪಡಿಸಿದರು.


    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಪೌಷ್ಟಿಕ ಆಹಾರ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


    ನಮ್ಮ ಪೂರ್ವಜರ ಕಾಲದಲ್ಲಿ ನೈಸರ್ಗಿಕವಾಗಿ ಬೆಳೆದ ಆಹಾರ ಸಾಮಗ್ರಿಗಳನ್ನು ಬಳಸಿ ಆಹಾರ ತಯಾರಿಸಿ ಸೇವಿಸುತ್ತಿದ್ದರು. ಆದ್ದರಿಂದ ಅಂದಿನವರು ಹೆಚ್ಚುಕಾಲ ಆರೋಗ್ಯವಂತರಾಗಿ ಜೀವನ ಸಾಗಿಸುವುದರ ಮೂಲಕ ಇಂದಿಗೂ ನಮ್ಮೊಡನೆ ಇದ್ದು ಸಾಕ್ಷೀಭೂತರಾಗಿದ್ದಾರೆ. ಆದರೆ ಇಂದಿನ ಪೀಳಿಗೆ ಟಿವಿ ಹಾಗೂ ಇತರ ಮಾಧ್ಯಮಗಳ ಜಾಹೀರಾತುಗಳ ಅಬ್ಬರದ ಪ್ರಚಾರಗಳಿಗೆ ಒಳಗಾಗಿ ಜಂಕ್ ಫುಡ್‌ಗಳನ್ನು ದುಪ್ಪಟ್ಟು ಹಣ ವ್ಯಯಿಸಿ ಉಪಯೋಗಿಸುತ್ತಾ ವಿವಿಧ ರೀತಿಯ ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ ಎಂದರು.


    ಸಿಡಿಪಿಒ ಕುಮಾರ್, ಕ್ಷೇತ್ರಣ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ,
    ನ್ಯಾಯಾಧೀಶರಾದ ಮಮತಾ ಶಿವಪೂಜೆ, ಸಚಿನ್ ಕುಮಾರ್ ಶಿವಪೂಜೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ನಾಗರಾಜು, ವಕೀಲರ ಸಂಘದ ಅಧ್ಯಕ್ಷ ಸುಂದರ್, ಕಾರ್ಯದರ್ಶಿ ನಟೇಶ್, ವಕೀಲ ಶ್ರೀಕಂಠಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts