More

    ಜಾನುವಾರುಗಳಿಗೆ ಶೀಘ್ರ ವಿಮೆ

    ಶಿರಸಿ: ಹಾಲು ನೀಡುವ ಜಾನುವಾರುಗಳ ಅಕಾಲಿಕ ಮರಣದಿಂದ ಹೈನುಗಾರರಿಗೆ ಆಗುವ ನಷ್ಟ ತಪ್ಪಿಸಲು ಧಾರವಾಡ ಹಾಲು ಒಕ್ಕೂಟವು ಜಾನುವಾರು ವಿಮೆ (ಕ್ಯಾಟಲ್ ಇನ್ಶೂರೆನ್ಸ್) ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.

    ಧಾರವಾಡ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ನಿತ್ಯ 2.20 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಇದರಲ್ಲಿ 85 ಸಾವಿರ ಲೀಟರ್ ಹಾಲು ಮಾರಾಟವಾಗುತ್ತಿದೆ. ಹೀಗೆ, ಮಾರಾಟವಾಗುವ ಪ್ರತಿ ಲೀಟರ್​ಗೆ ಸಿಗುವ 2 ರೂ. ಹೆಚ್ಚುವರಿ ಪೋ›ತ್ಸಾಹ ಧನದಲ್ಲಿ 40 ಪೈಸೆಯನ್ನು ಜಾನುವಾರು ವಿಮೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಈ ಮೊತ್ತ 1.25 ಕೋಟಿ ರೂ. ಆಗಿದ್ದು, ಒಕ್ಕೂಟದ ಅಧೀನದಲ್ಲಿದೆ. ವಿಮೆಗಾಗಿ ವಿನಿಯೋಗಿಸಲು ರೂಪುರೇಷೆ ಅಂತಿಮವಾಗಿದೆ. ಓರಿಯಂಟಲ್ ಇನ್ಶೂರೆನ್ಸ್ ಕಂಪನಿ ವಿಮಾ ಗುತ್ತಿಗೆ ಪಡೆದಿದೆ. ವಿಮಾ ಯೋಜನೆಯ ಆರಂಭಿಕ ಹಂತದಲ್ಲಿ ಪ್ರತಿ ಜಿಲ್ಲೆಗೆ 6,250 ನಂತೆ ಒಟ್ಟು 25 ಸಾವಿರ ಜಾನುವಾರುಗಳ ವಿಮಾ ಕಂತನ್ನು ಪಡೆಯಲಾಗುತ್ತದೆ. 3 ವರ್ಷಗಳ ಅವಧಿಯ ವಿಮೆ ಇದಾಗಿದ್ದು, ರೈತರು 3 ವರ್ಷಗಳಿಗೊಮ್ಮೆ ವಿಮೆ ಮೊತ್ತ ತುಂಬಿದರೆ ಉಳಿದ ಹೆಚ್ಚುವರಿ ಪೋ›ತ್ಸಾಹ ಧನ ರೈತರ ಖಾತೆಗೆ ಜಮಾ ಆಗಲಿದೆ. ಈಗಾಗಲೇ ಪ್ರತಿ ಡೇರಿ ವ್ಯಾಪ್ತಿಯಲ್ಲಿ ವಿಮೆಯ ಸಮಗ್ರ ಮಾಹಿತಿ ಲಭಿಸಲಿದೆ ಎಂದು ಒಕ್ಕೂಟದ ಅಧಿಕಾರಿಗಳು ಮಾಹಿತಿ ನೀಡಿದರು.

    ಧಾರವಾಡ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿರುವ ಎಲ್ಲ ಜಾನುವಾರು ಗುರುತಿಸುವ ಸಂಬಂಧ ಪ್ರತಿ ಡೇರಿ ವ್ಯಾಪ್ತಿಯಲ್ಲಿ ಬೇಂಚ್ ಮಾರ್ಕ್ ಸರ್ವೆ ಕಾರ್ಯ ಆರಂಭಿಸಲಾಗಿದೆ. ಸರ್ವೆ ಪೂರ್ಣಗೊಂಡು ಜಾನುವಾರುಗಳ ಲೆಕ್ಕ ಸಿಕ್ಕ ನಂತರ ಭವಿಷ್ಯದಲ್ಲಿ ಈ ಯೋಜನೆಯನ್ನು ಎಲ್ಲ ಜಾನುವಾರುಗಳಿಗೂ ವಿಸ್ತರಿಸಲು ಚಿಂತನೆ ನಡೆಸಲಾಗಿದೆ.

    | ಬಸವರಾಜ ಅರಬಗೊಂಡ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts