More

    ಜಾನಪದ ಸಾಹಿತ್ಯ ಪ್ರತಿಯೊಬ್ಬರ ಬದುಕಾಗಲಿ

    ಕಲಬುರಗಿ: ಜಾನಪದ ಸಾಹಿತ್ಯ ಪ್ರತಿಯೊಬ್ಬರ ಬದುಕಾಗಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಹೇಳಿದರು.
    ನಗರದ ಕಲಾ ಮಂಡಳದಲ್ಲಿ ಜಾನಪದ ಸಾಹಿತ್ಯ ಪರಿಷತ್ ತಾಲೂಕು ಘಟಕ ಶನಿವಾರ ಆಯೋಜಿಸಿದ್ದ ಕನ್ನಡ ಗೀತಗಾಯನ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿದ ಅವರು, ಜಾನಪದ ಮೌಖಿಕ ಸಾಹಿತ್ಯವಾಗಿದೆ. ಉತ್ಸವದ ಮೂಲಕ ಜನಪದ ಕಲೆ ಉಳಿಸುವುದು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶದ ಕಲಾವಿದರಿಗೆ ಪ್ರೋತ್ಸಾಹಿಸುವ ಮೂಲಕ ನಮ್ಮ ಭವ್ಯ ಸಂಸ್ಕೃತಿ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
    ಇತ್ತೀಚೆಗೆ ಜಾನಪದ ಗೀತೆ ಎಂದು ಪ್ರಚಾರಕ್ಕೆ ಬರುತ್ತಿರುವ ಗೀತೆಗಳು ನಿಜವಾದ ಜಾನಪದ ಸಾಹಿತ್ಯವಲ್ಲ. ಅದು ಜನಪ್ರಿಯ ಸಾಹಿತ್ಯ. ಜನಪದ ಮತ್ತು ಜನಪ್ರಿಯಗೆ ಅಜಗಜಾಂತರ ವ್ಯತ್ಯಾಸವಿದೆ. ಜಾನಪದ ಸಾಹಿತ್ಯ ಜೀವನ ರೂಪಿಸುತ್ತದೆ. ಜನಪ್ರಿಯ ಗೀತೆಗಳು ಮನೋರಂಜನೆಗೆ ಸಿಮೀತವಾಗಿವೆ ಎಂದರು.
    ತಂತ್ರಜ್ಞಾನದ ಮೂಲವೇ ಜಾನಪದ ಸಾಹಿತ್ಯ. ನಮ್ಮ ದೇಶದಲ್ಲಿ ಜಾನಪದ ಕಲೆಯನ್ನು ತಂತ್ರಜ್ಞಾನಕ್ಕಾಗಿ ಬಳಸಿಕೊಳ್ಳಲಾಯಿತು. ಆದರೆ ಕಲಾವಿದರನ್ನು ಕಡೆಗಣಿಸಲಾಯಿತು. ಸಾಹಿತ್ಯದ ಜತೆ ಕಲಾವಿದರನ್ನು ಬೆಳೆಸುವುದು ಅಗತ್ಯವಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ರಾಮಪ್ಪ ಪಾಟೀಲ್ ಧಂಗಾಪುರ, ಸಾಹಿತಿ ಚಿ.ಸಿ.ನಿಂಗಣ್ಣ , ಜಾನಪದ ಕಲಾವಿದರಾದ ಬಾಬುರಾವ ಕೋಬಾಳ, ವಿಶ್ವನಾಥ ತೊಟ್ನಳ್ಳಿ, ದತ್ತರಾಜ ಕಲಶೆಟ್ಟಿ, ಲಕ್ಷ್ಮೀಬಾಯಿ ಖಜೂರಿ, ಬಸವರಾಜ ಪ್ಯಾಟಿ ಅವರನ್ನು ಸನ್ಮಾನಿಸಲಾಯಿತು.
    ಪ್ರಫುಲ್ ನಮೋಶಿ, ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಪ್ರೊ.ಅರುಣಕುಮಾರ ಪಾಟೀಲ್, ಕರ್ನಾಟಕ ಜಾನಪದ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ರಾಜೇಂದ್ರ ಯರನಾಳೆ, ಪರಮೇಶ್ವರ ಪೆಂಚನಕರ್, ಡಾ. ಶಂಕರ ಬಾಳಿ, ಸೋಮು ಕುಂಬಾರ, ಗೊಲ್ಲಾಳಪ್ಪ ಸಿಂದಗಿ, ವೆಂಕಟೇಶ ನೀರಡಗಿ, ಗುರಣ್ಣ ಮುದ್ದಾ, ನೀಲಕಂಠ ಹಾಬಾಳ, ಶಿವಕುಮಾರ ಹಿರೇಮಠ, ವೀರಣ್ಣ ತೊರವಿ, ಪ್ರೊ.ವಿಶಾಲಾಕ್ಷಿ ಕರೆಡ್ಡಿ ಉಪಸ್ಥಿತರಿದ್ದರು.
    ಬಿ.ಎಸ್.ನಿರಗುಡಿ ಸ್ವಾಗತಿಸಿದರು. ಮಾನು ಸಗರ ಪ್ರಾಸ್ತಾವಿಕ ಮಾತನಾಡಿದರು. ಜಿ.ಜಿ ವಣಿಕ್ಯಾಳ ನಿರೂಪಣೆ ಮಾಡಿದರು.
    *ಜನಪದ ಮತ್ತು ಜನಪ್ರಿಯಗೆ ಅಜಗಜಾಂತರ ವ್ಯತ್ಯಾಸವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts