More

    ಜಾನಪದ ವಿವಿಗೆ ಸೊಲಬಕ್ಕನವರ ಹೆಸರಿಡಿ

    ಶಿಗ್ಗಾಂವಿ: ಕಲೆಯ ಮೂಲಕ ಜನಮಾನಸ ತಲುಪಿದ ಡಾ.ಟಿ.ಬಿ. ಸೊಲಬಕ್ಕನವರ ಹೆಸರನ್ನು ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಆಗ್ರಹಿಸಿದರು.

    ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್​ಗೆ ಭಾನುವಾರ ಭೇಟಿ ನೀಡಿ ಸೊಲಬಕ್ಕನವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಅವರು ಮಾತನಾಡಿದರು. ಶಿಲ್ಪಕಲೆ ಮೂಲಕ ದೇಶಾದ್ಯಂತ ಗಮನ ಸೆಳೆದ ಡಾ.ಟಿ.ಬಿ. ಸೊಲಬಕ್ಕನವರ ಕೊಡುಗೆ ಅನನ್ಯ. ಜನಪದ, ರಂಗಭೂಮಿ, ಲಲಿತ ಕಲೆಗಳನ್ನು ಜನರ ಬಳಿಗೆ ಕೊಂಡೊಯ್ದ ಮಹಾನ್ ಕಲಾವಿದರು. ಇಂಥ ಮೇರು ಕಲಾವಿದರ ಹೆಸರು ಅಜರಾಮರವಾಗಿಡುವುದು ರಾಜ್ಯ ಸರ್ಕಾರದ ಕರ್ತವ್ಯ. ಈ ಹಿನ್ನೆಲೆಯಲ್ಲಿ ವಿಶ್ವದ ಏಕೈಕ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣೀಕರ್ತರಾಗಿರುವ ಸೊಲಬಕ್ಕನವರ ಹೆಸರಿಡಲು ಇದು ಸಕಾಲ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆಗೆ ರ್ಚಚಿಸಲು ಸಿದ್ಧ ಎಂದರು.

    ಡಾ.ಟಿ.ಬಿ. ಸೊಲಬಕ್ಕನವರ ಕಲಾಸೇವೆ ಅಪಾರ. ಅವರ ಕಲಾರಾಧನೆ ಇತರರಿಗೆ ಪ್ರೇರಣೆ. ಅವರ ಕನಸು ನನಸಾಗಲು ಅವರ ಕುಟುಂಬ ವರ್ಗಕ್ಕೆ ಬಸವಾದಿ ಶರಣರು ಶಕ್ತಿ ನೀಡಲಿ ಎಂದರು.

    ಇದಕ್ಕೂ ಮುನ್ನ ಸೊಲಬಕ್ಕನವರ ಕುಟುಂಬಕ್ಕೆ ಸಾಂತ್ವನ ಹೇಳಿದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು, ಡಾ.ಟಿ.ಬಿ. ಸೊಲಬಕ್ಕನವರ ಮಹಾನ್ ಕನಸುಗಾರ. ಅವರ ಕನಸುಗಳು ಕಲೆಯಲ್ಲಿ ಜೀವ ಪಡೆದಿವೆ. ಕಲೆಗೆ ಜೀವ ತುಂಬಿದ ಅವರು ಇನ್ನಿಲ್ಲ ಎಂದು ನಂಬಲಾಗುತ್ತಿಲ್ಲ. ಅವರ ಕೊಡುಗೆ ಸ್ಮರಣೀಯ ಎಂದರು.

    ಸಾವಿತ್ರಮ್ಮ ಸೊಲಬಕ್ಕನವರ, ಪ್ರಕಾಶ ದಾಸನೂರ, ವೇದಾರಾಣಿ ದಾಸನೂರ, ಹರ್ಷರಾಜ ಸೊಲಬಕ್ಕನವರ, ಜಯಶ್ರೀ ಸೊಲಬಕ್ಕನವರ ಹಾಗೂ ದಾಸನೂರ ಕುಟುಂಬ ಸದಸ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts