More

    ಜಾನಪದ ಕಲೆ ಉಳಿಸಲು ಮುಂದಾಗಿ

    ಯಾದಗಿರಿ: ಗ್ರಾಮೀಣ ಭಾಗದ ಶ್ರಮ ಸಂಸ್ಕೃತಿಯ ಪ್ರತೀಕವಾಗಿರುವ ಜಾನಪದ ಕಲೆಯನನು ಉಳಿಸುವು ಬಹುದೊಡ್ಡ ಜವಾಬ್ದಾರಿ ಇಂದಿನ ಯುವಕರ ಮೇಲಿದೆ ಎಂದು ಹಿರಿಯ ಸಂಗೀತ ಕಲಾವಿದ ಗುರುರಾಜ ಹೊಸಕೋಟೆ ಸಲಹೆ ನೀಡಿದರು.

    ಸಮೀಪದ ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ಸೋಮವಾರ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಅಂತರ್ ಮಹಾವಿದ್ಯಾಲಯಗಳ ಯುವ ಜನೋತ್ಸವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯರ ಹೃದಯಾಂತರಾಳದಿಂದ ಬಂದ ಜಾನಪದ ಸಾಹಿತ್ಯವು ನೇರವಾಗಿ ಜನರ ಮನಸ್ಸಿಗೆ ತಟ್ಟುತ್ತದೆ. ನಮ್ಮ ಸಂಸ್ಕೃತಿ ಪರಂಪರೆಯನ್ನು ಈವರೆಗೆ ಗಟ್ಟಿಯಾಗಿ ಉಳಿಸಿಕೊಂಡು ಬರಲು ಕಾರಣವೇ ಜಾನಪದ ಸಾಹಿತ್ಯ ಎಂದರು.

    ನಾವಿಂದು ಆಧುನಿಕತೆಗೆ ಮಾರುಹೋಗುತ್ತಿದ್ದರಿಂದಾಗಿಯೇ ಅಪ್ಪಟ ದೇಶಿ ಕಲೆ ಜಾನಪದಕ್ಕೆ ಧಕ್ಕೆ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಆಧುನಿಕತೆಯ ಭರಾಟೆಯಲ್ಲಿ ಜಾನಪದ ದೇಶಿಯ ಕಲೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಯುವಜನೋತ್ಸವದಂತಹ ಸಾಂಸ್ಕೃತಿಕ ಹಬ್ಬಗಳು ಜಾನಪದ ಸಂಸ್ಕೃತಿ ಮತ್ತು ಕಲೆಗಳಿಗೆ ಮಹತ್ವ ನೀಡಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದರಿಂದ ಜಾನಪದ ಪರಂಪರೆಗೆ ಪ್ರಾಮುಖ್ಯತೆ ಹೆಚ್ಚುತ್ತಿದೆ ಎಂದು ಹೇಳಿದರು.

    ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ, ಬಸವಾದಿ ಶರಣರ ಚಿಂತನೆಗಳಲ್ಲಿ ಅಡಗಿರವ ಸಾಮಾಜಿಕ ಸಮಾನತೆ, ಲಿಂಗ ಸಮಾನತೆ, ವೈಚಾರಿಕತೆ, ಜೀವಕಾರುಣ್ಯದ ಮಾನವೀಯ ಮೌಲ್ಯಗಳು ಸಂದಿಗ್ಧ ಸಮಾಜಕ್ಕೆ ಅಗತ್ಯವಾಗಿದೆ ಯುವ ಸಮುದಾಯ ಶರಣರ ಬದುಕು ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts