More

    ಜಾತ್ರೆ ಸಾಮರಸ್ಯ ಬೆಸೆಯುವ ಕೊಂಡಿ

    ಕೊಡೇಕಲ್: ಜಾತ್ರೆ ಮತ್ತು ಉತ್ಸವಗಳು ಹಳ್ಳಿಗಳಲ್ಲಿ ಸಾಮರಸ್ಯ ಬೆಸೆಯುವ ಕೊಂಡಿಗಳಿದ್ದಂತೆ ಎಂದು ಬಸವ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ ನುಡಿದರು.

    ನಾರಾಯಣಪುರದ ಶ್ರೀ ಶಂಕರಲಿಂಗೇಶ್ವರ ಹಾಗೂ ಮಹಿಬೂಬ್ ಸುಬಾನಿ ದರ್ಗಾ ಜಾತ್ರೆ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಸರ್ವಧರ್ಮ ಸಹಿಷ್ಣು ವಿಶ್ವಗುರು ಬಸವಣ್ಣನವರ ತತ್ವಾದರ್ಶದಂತೆ ನಾರಾಯಣಪುರ, ಮದಲಿಂಗನಾಳ, ಕೊಡೇಕಲ್‌ಗಳಲ್ಲಿ ಶಂಕರಲಿಂಗೇಶ್ವರ ಮಠ ಸ್ಥಾಪಿಸಿ ಧರ್ಮ ಜಾಗೃತಿ ಮೂಡಿಸುತ್ತಿರುವ ಶ್ರೀ ಶಂಕರಲಿಂಗ ಮಹಾರಾಜರ ಕಾರ್ಯವನ್ನು ಶ್ಲಾಘಿಸಿದರು.

    ಶ್ರೀ ಶಂಕರಲಿಂಗ ಮಹಾರಾಜ, ಚನ್ನಮಲ್ಲಪ್ಪ ಶರಣರು, ಮಲ್ಲಿಕಾರ್ಜುನ ಶರಣರು, ಪ್ರಮುಖರಾದ ಗದ್ದೆಪ್ಪ ಪೂಜಾರಿ, ತಿಪ್ಪಣ್ಣ ರೋಡಲಬಂಡಾ, ಚಿನ್ನಪ್ಪ ಡೊಳ್ಳಿ, ಬಾಲಯ್ಯ ಗುತ್ತೇದಾರ್, ದ್ಯಾವಣ್ಣಗೌಡ, ಮಲ್ಲಿಕಾರ್ಜುನ ಶೃಂಗೇರಿ, ವೈ.ಸಿ.ಗೌಡರ, ಶಿವು ಬಿರಾದಾರ, ಆಂಜನೇಯ ದೊರೆ, ಆರ್.ಸಿ. ಗೌಡರ, ರಮೇಶ ಕೋಳೂರ, ಯಂಕಪ್ಪ ರೋಡಲಬಂಡಾ, ಹುಲಗಪ್ಪ ಭಜಂತ್ರಿ, ಮಂಜು ಹಾದಿಮನಿ, ಗದ್ದೆಪ್ಪ ಮೇಲಿನಮನಿ, ಸಾಯಿಬಣ್ಣ, ಗದ್ದೆಪ್ಪ ಕಟ್ಟಿಮನಿ ಇತರರಿದ್ದರು.

    ನಂತರ ಎತ್ತುಗಳ ತೇರಬಂಡಿ ಓಟ ನೋಡುಗರ ಗಮನ ಸೆಳೆಯಿತು. ಸೋಮವಾರ ರಾತ್ರಿ ಗಂಧದ ಮೆರವಣಿಗೆಯೊಂದಿಗೆ ದರ್ಗಾಕ್ಕೆ ಆಗಮಿಸಿದ ಭಕ್ತರು, ಮಹಿಬೂಬ್ ಸುಬಾನಿ ದರ್ಗಾಕ್ಕೆ ಗಂಧ ಲೇಪನವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು. ರಾತ್ರಿ ಭಾಗ್ಯವಂತಿ ದೇವಿಯ ಕಲಹಳ್ಳಿ ನಾಟ್ಯ ಸಂಘದಿಂದ ಘತ್ತರಗಿ ಭಾಗ್ಯಮ್ಮ ನಾಟಕ ಪ್ರದರ್ಶನಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts