More

    ಜಾತಿ ಪ್ರಮಾಣಪತ್ರಕ್ಕಾಗಿ ಬೇಡ ಜಂಗಮರ ಮನವಿ

    ರಬಕವಿ/ಬನಹಟ್ಟಿ: ನಾವು ಬಿಕ್ಷೆ ಬೇಡತ್ತಿಲ್ಲ. ಸಂವಿಧಾನಿಕ ಹಕ್ಕು ಕೇಳುತ್ತಿದ್ದೇವೆ, ನಮ್ಮ ಹಕ್ಕು ನಮಗೆ ಕೊಡದೇ ಹೋದರೆ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಅಖಿಲ ಬಾರತ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಪುರದ ನ್ಯಾಯವಾದಿ ಮಲ್ಲಿಕಾರ್ಜುನ ಬಂಗಿಮಠ ಅಗ್ರಹಿಸಿದರು.

    ಬುಧವಾರ ತಾಲೂಕು ವ್ಯಾಪ್ತಿಯ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಕೇಂದ್ರ ಸರ್ಕಾರದ ಅಧಿಕಾರ ಮತ್ತು ವ್ಯಾಪ್ತಿಗೆ ಒಳಪಡುವ ಅನುಸೂಚಿತ ಜಾತಿಗಳ ಆದೇಶ 1976 ರ ಪಟ್ಟಿ ಕ್ರಮ. ಸಂ.19 ರಲ್ಲಿನ ಬೇಡ ಜಂಗಮರು ಸಂವಿದಾನಬದ್ಧ ಹಕ್ಕನ್ನು ರಕ್ಷಿಸಿ, ಜಾತಿ ಪ್ರಮಾಣಪತ್ರ ಕೊಡುವಂತೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

    ಸರ್ಕಾರದ ಕೆಲವು ಪ್ರಮುಖ ರಾಜಕಾರಣಿಗಳು ಬೇಡ ಜಂಗಮ ಸಮಾಜದ ಕುರಿತು ಹಗುರವಾಗಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಂಥವರಿಗೆ ತಕ್ಕ ಪಾಠ ಕಲಿಸಲಾಗುವುದು. ಎಲ್ಲ ಪಕ್ಷದವರೂ ಬೇಡ ಜಂಗಮ ಪ್ರಮಾಣಪತ್ರಕ್ಕಾಗಿ ಒತ್ತಾಯಿಸಬೇಕು ಎಂದು ಮಲ್ಲಿಕಾರ್ಜುನ ಭೃಂಗಿಮಠ ಹೇಳಿದರು.

    ತೇರದಾಳ ಮತಕ್ಷೇತ್ರ ವ್ಯಾಪ್ತಿಯ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಈಶ್ವರ ಕಾಡದೇವರ, ಉಪಾಧ್ಯಕ್ಷ ಗಂಗಾಧರಯ್ಯ ಹಿರೇಮಠ, ಪ್ರಧಾನ ಕಾರ್ಯದರ್ಶಿ ವೀರಭದ್ರಶಾಸ್ತ್ರಿ ಹಿರೇಮಠ, ಸಮಾಜದ ಮುಖಂಡರಾದ ಚನ್ನಯ್ಯ ಲಿಂಗದ, ಬಸಯ್ಯ ವಸ್ತ್ರದ ಮತ್ತಿತರರು ಮಾತನಾಡಿದರು. ಸ್ಥಳೀಯ ಕಾಡಸಿದ್ಧೇಶ್ವರ ದೇವಸ್ಥಾನದಿಂದ ತಹಸೀಲ್ದಾರ್ ಕಾರ್ಯಾಲಯದವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿ ಶಿರಸ್ತೇದಾ ಬಸವರಾಜ ಬಿಜ್ಜರಗಿ ಅವರಿಗೆ ಮನವಿ ಸಲ್ಲಿಸಿದರು.

    ಶಿವರುದ್ರಯ್ಯ ಕಾಡದೇವರ, ಸಂಜಯ ಅಮ್ಮಣಗಿಮಠ, ಈಶ್ವರಯ್ಯ ಕಾಡದೇವರ, ಶಂಕರ ಅಂಗಡಿ, ದಯನಾಂದನ ಬಾಗಲಕೋಟಮಠ, ಮುರಗಯ್ಯ ಹಿರೇಮಠ, ಮಹಾಂತಯ್ಯ ಹಿರೇಮಠ, ಸದಯ್ಯ ಮಠಪತಿ, ಬಸಯ್ಯ ಸಿದ್ದಗಿರಿಮಠ, ಬಸವರಾಜ ಅಮ್ಮಣಗಿಮಠ, ಬಾಳಯ್ಯ ಪೂಜಾರಿ ಸೇರಿದಂತೆ ಮತ್ತಿತರರು ಪ್ರತಿಭಟನಾ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.



    ರಬಕವಿ/ಬನಹಟ್ಟಿ, ಸಂವಿಧಾನ, ಅಖಿಲ ಬಾರತ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘ, ವಿಜಯಪುರ, ಜಾತಿ, Rabakavi / Banahatti, Constitution, akhila Bharat Beda Jangama kshemabhivruddhi sangha, Vijayapura, Caste,



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts