More

    ಜನ ಶಿಕ್ಷಣ ಸಂಸ್ಥೆಯಿಂದ 30 ಸಾವಿರ ಅಧಿಕ ಜನರಿಗೆ ವೃತ್ತಿ ಕೌಶಲ

    ಬಾಗಲಕೋಟೆ: ಬಿವ್ಹಿವ್ಹಿ ಸಂಘದ ಜನ ಶಿಕ್ಷಣ ಸಂಸ್ಥೆಯಿಂದ 30 ಸಾವಿರಕ್ಕೂ ಅಧಿಕ ಜನರಿಗೆ ವೃತ್ತಿ ಕೌಶಲ ತರಬೇತಿ ನಿಡಿದ್ದು ಜನ ಶಿಕ್ಷಣ ಸಂಸ್ಥೆಯ ಹೆಮ್ಮೆಯ ವಿಷಯವಾಗಿದೆ ಎಂದು ಮಾಜಿ ಶಾಸಕ, ಸಂಘ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

    ಬಿ.ವ್ಹಿ.ವ್ಹಿ,ಸಂಘದ ಮಿನಿ ಸಭಾಂಗಣದಲ್ಲಿ ಗುರುವಾರ ಬಿ.ವ್ಹಿ.ವ್ಹಿ.ಎಸ್ ಶಿಕ್ಷಣ ಸಂಸ್ಥೆಯಿಂದ ವೃತ್ತಿ ಕೌಶಲ್ ಪಡೆದು ಉತ್ತೀರ್ಣರಾದ ಕಲಿಕಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸುವ ಕೌಶಲ್ಯ ದಿಕ್ಷಾಂತ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಕಲಿಕಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆಮಾಡಿ ಮಾತನಾಡಿದರು.

    ಬಾಗಲಕೋಟೆಯಲ್ಲಿ ಶ್ರಮೀಕ ವಿದ್ಯಾಪೀಠ ಎಂಬ ಹೆಸರಿನಿಂದ ಪ್ರಾರಂಭವಾದ ಈ ನ ಶಿಕ್ಷಣ ಸಂಸ್ಥೆ 2004-05 ರಿಂದ ಇಲ್ಲಿವರೆಗೆ ಸಂಸ್ಥೆ 30 ಸಾವಿರಕ್ಕೂ ಅಧಿಕ ಗ್ರಾಮೀಣ ಬಾಗದ ಜನರಿಗೆ ವೃತ್ತಿ ಕೌಶಲ್ಯ ತರಬೇತಿ ನಿಡುತ್ತಾ ಬಂದಿದ್ದು, ಸಾವಿರಾರು ಜನ ಸ್ವ ಉದ್ಯೋಗ ಕೈಗೊಂಡು ಬದುಕು ಸಾಗಿಸುತ್ತಿದ್ದಾರೆ, ಜನರು ಈ ಸಂಸ್ಥೆಯ ಸದುಪಯೋಗ ಪಡೆದುಕೊಳ್ಳಿ ಎಂದರು.

    ಜನ ಶಿಕ್ಷಣ ಸಂಸ್ಥೆಯ ನಿರ್ಧೇಶಕ ವೀರಣ್ಣ ಕಿರಗಿ ಪ್ರಸ್ತಾವಿಕವಾಗಿ ಮಾತನಾಡಿದರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಅಮರೇಶ ನಾಯಕ್ ಜನ ಶಿಕ್ಷಣ ಸಂಸ್ಥೆಯಿಂದ ತರಬೇತಿ ಪಡೆದ ಕಲಿಕಾರ್ಥಿಗಳು ಉದ್ಯೋಗಮೇಳದಲ್ಲಿ ಬಾಗವಹಿಸಿರಿ ಎಂದ ಅವರು ಸರಕಾರದ ಯೋಜನೆಗಳನ್ನು ಸದುಪಯೊಗಪಡಿಸಿಕೊಳ್ಳಿ ಎಂದರು. ಬಿ.ವ್ಹಿ.ವ್ಹಿ.ಸಂಘ ತಾಂತ್ರಿಕ ಶಿಕ್ಷಣ ವಿವಾಗದ ನಿರ್ದೇಶಕ ಡಾ,ಆರ.ಎನ,ಹೆರಕಲ, ನಗರಸಭೆ ಮಾಜಿ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಡಾ.ನಾಗರತ್ನಾ ಟಿ.ಎಮ್, ಸುನಿತ ಹಟ್ಟಿ.ಬಿ.ಕೆ.ಕೋರಿ ಸೇರಿದಂತೆ ಅನೇಕರು ಬಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts