More

    ಜನಸಾಮಾನ್ಯರ ಮೌಖಿಕ ಚರಿತ್ರೆಯೂ ಅಗತ್ಯ

    ಕಲಬುರಗಿ: ರಾಜ ಮಹಾರಾಜರ ಇತಿಹಾಸ ಸಾಕಷ್ಟು ಜನರು ಗುರುತಿಸಿ ಇತಿಹಾಸ ಪುಟಗಳಲ್ಲಿ ಸೇರಿಸಿದ್ದಾರೆ. ಆದರೆ ಜನಸಾಮಾನ್ಯರ ಬದುಕಿನ ಕುರಿತು ಮೌಖಿಕ ಚರಿತ್ರೆ ರಚನೆ ಅಗತ್ಯವಾಗಿದೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
    ರಂಗಾಯಣ ಸಭಾಂಗಣದಲ್ಲಿ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಡಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಗವೀಶ ಹಿರೇಮಠ ರಚಿಸಿದ `ಹೊತ್ತು ಮುಳುಗುವ ಮುನ್ನ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಾನಪದ ಸಾಹಿತ್ಯ ಜೀವಂತ ಇರೋದೇ ಈ ಭಾಗದಲ್ಲಿ. ಜನಸಾಮಾನ್ಯರ ಸಾಹಿತ್ಯ ಎಂದೇ ಖ್ಯಾತಿ ಪಡೆದ ಈ ಸಾಹಿತ್ಯ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಅವನತಿ ಹೊಂದಿದೆ ಎಂದು ವಿಷಾದಿಸಿದರು.
    ವೃತ್ತಿ ರಂಗಭೂಮಿ ಕಲಾವಿದರ ಕುರಿತ ಪುಸ್ತಕ ಹೊರತಂದಿರುವುದು ಶ್ಲಾಘನೀಯ. 105 ಕಲಾವಿರದನ್ನು ಗುರುತಿಸಿ ಅವರ ಬದುಕಿನ ಕುರಿತು ಪುಸ್ತಕ ಪ್ರಕಟಿಸಿದ್ದಾರೆ. ಇಂಥ ಪುಸ್ತಕಗಳು ಹೆಚ್ಚೆಚ್ಚು ಹೊರಬರಬೇಕು ಎಂದು ಆಶಿಸಿದರು.
    ಪುಸ್ತಕ ಪರಿಚಯ ಮಾಡಿಕೊಟ್ಟ ಪ್ರಾಧ್ಯಾಪಕಿ ಡಾ.ಅಮೃತಾ ಖಟಕೆ ಅವರು, ಲೇಖಕ ಗವೀಶ ಹಿರೇಮಠ ವೃತ್ತಿ ರಂಗಭೂಮಿಯ 105 ಕಲಾವಿದರ ಜೀವನ ಬಗ್ಗೆ ಸುಂದರವಾಗಿ ನಿರೂಪಣೆ ಮಾಡಿದ್ದಾರೆ. ರಂಗಭೂಮಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಕಲಾವಿದರನ್ನು ಗುರುತಿಸುವ ಕಾರ್ಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಗವೀಶ ಹಿರೇಮಠ ಮಾತನಾಡಿದರು. ಹಿರಿಯ ಸಾಹಿತಿಗಳಾದ ಶಂಕ್ರಯ್ಯ ಘಂಟಿ, ಸುಬ್ರಾವ್ ಕುಲಕಣರ್ಿ, ಶೇಖ್ ಮಾಸ್ತರ್, ಸಿದ್ರಾಮ ಅಣಕಲ್, ಡಾ.ಚಿ.ಸಿ. ನಿಂಗಣ್ಣ, ಪ್ರಮುಖರಾದ ಶ್ರೀನಿವಾಸ ಸಿರನೂರಕರ್, ಲಿಂಗರಾಜ ಶಾಸ್ತ್ರಿ, ಡಾ.ಎಸ್.ಎಸ್. ಗುಬ್ಬಿ, ಪಿ.ಎಂ. ಮಣ್ಣೂರ, ಸಂಧ್ಯಾ ಹೊನಗುಂಟಿಕರ, ಶೋಭಾ ರಂಜೋಳಕರ, ಸದಾನಂದ ಪೆರ್ಲ ಉಪಸ್ಥಿತರಿದ್ದರು.
    ಕಿರಣ್ ಪಾಟೀಲ್ ಪ್ರಾರ್ಥಿಸಿದರು. ರಂಗಾಯಣ ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು. ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ ನಿರೂಪಣೆ ಮಾಡಿದರು.


    ಕುಲಪತಿ ಹುದ್ದೆ ನಂತರ ನಾನು ಕಲಬುರಗಿ ಜಿಲ್ಲೆಯಲ್ಲಿ ನೆಲೆಸಿ ಇಲ್ಲಿನ ಜಾನಪದ ಸಾಹಿತ್ಯ ಸೇರಿ ಸಂಸ್ಕೃತಿ, ಸಂಪ್ರದಾಯ ಕುರಿತು ಅಧ್ಯನ ನಡೆಸುವೆ.
    | ಪ್ರೊ.ಎಚ್.ಎಂ. ಮಹೇಶ್ವರಯ್ಯ
    ಕೇಂದ್ರೀಯ ವಿವಿ ಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts