More

    ಜನಸಂಖ್ಯೆ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಪಾತ್ರ ಹಿರಿದು

    ಚಿತ್ರದುರ್ಗ:ಆರೋಗ್ಯವಂಥ ಜನರಿಂದ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯವೆಂದು ಜಿಪಂ ಸಿಇಒ ಎಂ.ಎಸ್.ದಿವಾಕರ್ ಹೇಳಿದರು. ಜಿಲ್ಲಾಡಳಿತ ಜಿಪಂದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ನೌಕ ರರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಆರೋಗ್ಯ ಭಾಗ್ಯ ಒಂದಿದ್ದರೆ ಭವಿಷ್ಯದ ಬದುಕು ಚೆನ್ನಾಗಿ ರುತ್ತದೆ ಎಂದ ಅವರು, ಜಿಲ್ಲೆಯ ಜನ ಅದರಲ್ಲೂ ವಿಶೇಷವಾಗಿ ಗ್ರಾಮೀಣರ ಆರೋಗ್ಯದೆಡೆ ಕಾಳಜಿ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿ,ಸಿಬ್ಬಂದಿಗೆ ಸಲಹೆ ನೀಡಿದರು.
    ಜನಸಂಖ್ಯೆ ಹೆಚ್ಚಳ ಕೃಷಿ ಮೇಲಿನ ಒತ್ತಡವನ್ನು ಅಧಿಕಗೊಳಿಸಲಿದ್ದು,ಜನಸಂಖ್ಯೆ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಉತ್ತಮವಾಗಿ ಕೆಲಸಮಾಡುವಂಥವರಿಗೆ ಪ್ರಶಂಸೆ ಅಗತ್ಯವಿದೆ. ಇದರಿಂದ ಸಕರಾತ್ಮಕ ಬದಲಾವಣೆಗೆ ಅವಕಾಶ ಸಿಗಲಿದೆ. ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಪ್ರತಿ ವರ್ಷವೂ ಗೌರವಿಸಲಾಗುವುದು ಎಂದರು.

    ಡಿಎಚ್‌ಒ ಡಾ.ಆರ್.ರಂಗನಾಥ್ ಮಾತನಾಡಿ,ಜನಸಂಖ್ಯೆಸ್ಫೋಟದ ಬಡತನ,ವಸತಿ,ಆಹಾರ,ಪಾಲನೆ-ಪೋಷಣೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣದ ಅಗತ್ಯವಿದ್ದು,ಕುಟುಂಬ ಕಲ್ಯಾಣ ಯೋಜನೆಗಳ ಕುರಿತು ಹೆಚ್ಚಿನ ಜನರಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕಿದೆ ಎಂದರು.

    ವೈದ್ಯರು,ನೌಕರರಿಗೆ ಸನ್ಮಾನ

    ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ವೈದ್ಯರು,ಶುಶ್ರೂಷಕಿಯರು ಹಾಗೂ ಗ್ರೂಫ್ ಡಿ ನೌಕರರನ್ನು ಸನ್ಮಾನಿಸಲಾಯಿ ತು. ಚಿತ್ರದುರ್ಗ ತಾಲೂಕಿನ ಡಾ.ಶ್ರೀಧರ್,ಶ್ಯಾಮಲಾದೇವಿ,ಗೌರಮ್ಮ. ಹೊಳಲ್ಕೆರೆ ತಾಲೂಕಿನ ಡಾ.ಹರೀಶ್‌ಬಾಬು,ವೀಣಾ,ಕೃಷ್ಣಪ್ಪ. ಹೊ ಸದುರ್ಗ ತಾಲೂಕಿನ ಡಾ.ರಾಘವೇಂದ್ರ ಪ್ರಸಾದ್,ವಿಜಯಮ್ಮ,ರಾಮಚಂದ್ರಪ್ಪ, ಹಿರಿಯೂರು ತಾಲೂಕಿನ ಡಾ.ಕವಿತಾ,ತುಳಸಮ್ಮ,ಪಾಂ ಡುರಂಗಪ್ಪ. ಚಳ್ಳಕೆರೆ ತಾಲೂಕಿನ ಡಾ.ವಿಕಾಸ್,ಷರೀಫ್‌ಉಲ್ಲಾಬೀ,ನಾಗೇಂದ್ರ. ಮೊಳಕಾಲ್ಮೂರು ತಾಲೂಕಿನ ಡಾ.ಅನಿತಾ,ಮಂಜುಳಾ ಹಾ ಗೂ ಅಂಜಿನಿ ಅವರಿಗೆ ಪ್ರಶಸ್ತಿ ಪತ್ರ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಜನಸಂಖ್ಯೆ ನಿಯಂತ್ರಣ ವಿಭಾಗದ ನೌಕರರಾದ ಶಿವಕುಮಾರ್ ಹಾಗೂ ಕಾಯಕಲ್ಪ ಯೋಜನೆಯಡಿ ಹೊಸದುರ್ಗದ ಡಾ.ಸಂಜಯ್ ಅವರನ್ನು ಗೌರವಿಸಲಾಯಿತು.


    ಜಿಲ್ಲಾ ಕುಟುಂಬ ಯೋಜನಾ ಅನುಷ್ಠಾನಾಧಿಕಾರಿ ಡಾ.ರೇಣುಪ್ರಸಾದ್,ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್,ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ,ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಆರ್.ಗೌರಮ್ಮ,ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts