More

    ಜನರಲ್ಲಿ ಮತದಾನದ ಅರಿವು ಮೂಡಿಸಿ

    ಇಂಡಿ: ಕಳೆದ ಬಾರಿಗಿಂತಲೂ ಹೆಚ್ಚಿನ ಮತದಾನವಾಗುವಂತೆ ಮಾಡಲು ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಚಾರ ಕೈಗೊಂಡು, ಮತದಾನದ ಬಗ್ಗೆ ಜನರಿಗೆ ಮನವರಿಕೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಾಪಂ ಸ್ವೀಪ್ ಸಮಿತಿ ಅಧ್ಯಕ್ಷೆ, ಇಒ ನೀಲಗಂಗಾ ಬಬಲಾದ ಹೇಳಿದರು.

    ಪಟ್ಟಣದ ತಾ.ಪಂ ಭವನದಲ್ಲಿ ತಾ.ಪಂ ಸ್ವೀಪ್ ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

    ಮತದಾನದ ಮೇಲೆ ದೇಶದ ಅಭಿವೃದ್ಧಿ ಹಾಗೂ ಭದ್ರತೆ ನಿಂತಿರುತ್ತದೆ. ನಮ್ಮ ಮತದಾನದ ಹಕ್ಕನ್ನು ಕಡ್ಡಾಯವಾಗಿ ಪಾಲಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡೋಣ. ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಮತದಾನ ಪ್ರಾಮುಖ್ಯತೆ ಹಾಗೂ ಮತದಾರರ ಕರ್ತವ್ಯದ ಬಗ್ಗೆ ಮನವರಿಕೆ ಮಾಡೋಣ ಎಂದರು.

    ಕಂದಾಯ ಉಪವಿಭಾಗಾಧಿಕಾರಿ- ಸಹಾಯಕ ಚುನಾವಣೆ ಅಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಯಾರೂ ಮತದಾನದಿಂದ ದೂರ ಉಳಿಯದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಎಲ್ಲರಿಗೂ ಕಡ್ಡಾಯವಾಗಿ ಮತದಾನ ಮಾಡಿಸಬೇಕು ಎಂದರು.

    ಬೈಕ್ ರ‌್ಯಾಲಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಲಾಯಿತು. ಸಿಂದಗಿ ರಸ್ತೆ, ಮಿನಿ ವಿಧಾನಸೌಧ, ವಿಜಯಪುರ ರಸ್ತೆ, ಸೇವಾಲಾಲ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಸ್ಟೇಷನ್ ರಸ್ತೆ ಮೂಲಕ ಬೈಕ್ ರ‌್ಯಾಲಿ ಸಂಚರಿಸಿ ಮತ್ತೆ ತಾಪಂ ಕಚೇರಿಯಲ್ಲಿ ಮುಕ್ತಾಯಗೊಂಡಿತು.

    ತಹಸೀಲ್ದಾರ್ ಮಂಜುಳಾ ನಾಯಕ, ಜಿಲ್ಲಾ ಸ್ವೀಪ್ ಸಮಿತಿ ರಾಯಭಾರಿ ರಾಜೇಶ ಪವಾರ, ಸಂಜಯ ಖಡಗೇಕರ, ಪ್ರಕಾಶ ರಾಠೋಡ, ಬಸವರಾಜ ಬಬಲಾದ, ವಿನೋದ ಸಜ್ಜನ, ಸಾಹಿಲ್ ಧನಶೆಟ್ಟಿ, ರಾಮನಗೌಡ ಸದಾಶಿರಗಿ, ಶ್ರೀಶೈಲ ಹಡಪದ, ಮುರುಗೇಶ ನಾರಾಯಣಪುರ, ಜೆ.ಕೆ.ಲಾಳಸರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts