More

    ಜನತಾ ಪ್ಲಾಟ್ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಮನವಿ

    ಕುಮಟಾ: ತಾಲೂಕಿನ ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗೆಕೊಳ್ಳದ ಸ.ನಂ. 129ರ ಜನತಾ ಪ್ಲಾಟ್​ನಲ್ಲಿ ವಾಸ್ತವ್ಯ ಮಾಡಿದವರಿಗೆ ನಿವೇಶನದ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಜನತಾ ಪ್ಲಾಟ್​ನ ನಿವಾಸಿಗಳು ತಹಸೀಲ್ದಾರ್ ಮೇಘರಾಜ ನಾಯ್ಕ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

    ಗಂಗೆಕೊಳ್ಳದ ಜನತಾ ಪ್ಲಾಟ್​ನ ಸ.ನಂ 129 ರಲ್ಲಿ ಸುಮಾರು 25 ವರ್ಷಗಳಿಗೂ ಹಿಂದಿನಿಂದ 50 ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ. ಆದರೆ, ಈವರೆಗೆ ಸರ್ಕಾರದ ವಸತಿ ಸೌಲಭ್ಯ ಅಥವಾ ಇತರ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಅಲ್ಲದೆ, ಇಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಯಾವುದೇ ರೀತಿಯ ಪಿತ್ರಾರ್ಜಿತ ಆಸ್ತಿಯೂ ಇಲ್ಲ.

    ಈ ಬಗ್ಗೆ ಕಳೆದ ಹತ್ತಾರು ವರ್ಷಗಳಿಂದ ಗ್ರಾಮ ಸಭೆ ಮತ್ತು ಜನಸಂಪರ್ಕ ಸಭೆಗಳಲ್ಲಿ ಪ್ರಸ್ತಾಪಿಸಿ ರ್ಚಚಿಸಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಜನತಾ ಪ್ಲಾಟ್​ನಲ್ಲಿ ಒಟ್ಟು 35 ಕುಟುಂಬಗಳು ವಾಸಿಸುತ್ತಿದ್ದು, ಸ್ಥಳ ಪರಿಶೀಲನೆ ನಡೆಸಿ ಹಕ್ಕು ಪತ್ರ ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಯಿತು.

    ಈ ವೇಳೆ ತಾಪಂ ಸದಸ್ಯ ಮಹೇಶ ಶೆಟ್ಟಿ, ಜನತಾ ಪ್ಲಾಟ್ ನಿವಾಸಿಗಳಾದ ಗಿರಿಜಾ ನಾಯ್ಕ, ಸರಸ್ವತಿ ತಾಂಡೇಲ, ರಮಾ ನಾಯ್ಕ, ನಿರ್ಮಲಾ ನಾಯ್ಕ, ಗೌರಿ ಗೌಡ, ಮಂಜುಳಾ ನಾಯ್ಕ, ಸವಿತಾ ನಾಯ್ಕ, ಸೀತೆ ಗೌಡ, ಮಾದೇವಿ ನಾಯ್ಕ, ರೇಖಾ ನಾಯ್ಕ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts