More

    ಛತ್ರಪತಿ ಹೆಸರಲ್ಲಿ ತೆರೆಯಿರಿ ವಸತಿ ಶಾಲೆ- ಸರ್ಕಾರಕ್ಕೆ ಬಸವಪ್ರಭು ಸ್ವಾಮೀಜಿ ಸಲಹೆ

    ದಾವಣಗೆರೆ: ಛತ್ರಪತಿ ಶಿವಾಜಿ ಮಹಾರಾಜರ ಹೆಸರಲ್ಲಿ ವಸತಿ ಶಾಲೆಗಳನ್ನು ತೆರೆಯಬೇಕು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸರ್ಕಾರಕ್ಕೆ ಸಲಹೆ ನೀಡಿದರು.
    ಇಲ್ಲಿನ ಶ್ರೀ ಕೃಷ್ಣ ಭವಾನಿ ಕಲ್ಯಾಣಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘ, ಜೀಜಾಮಾತಾ ಮಹಿಳಾ ಮಂಡಳಿ ಹಾಗೂ ಶಿವ ಛತ್ರಪತಿ ಶಿವಾಜಿ ಮಹಾರಾಜರ ಯುವಕ ಸಂಘದ ಸಹಯೋಗದಲ್ಲಿ ಹಮ್ಮಿಕೊ
    ಶಿವಾಜಿ ನೆನಪಿಸಿಕೊಂಡರೆ ಸೋಲು ಇರುವುದಿಲ್ಲ. ಕೌಟುಂಬಿಕ ಸಮಸ್ಯೆಯಲ್ಲಿರುವ ದಂಪತಿ, ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಆಲೋಚನೆ ಮೂಡಲು ಛತ್ರಪತಿ ಹೆಸರು ಪ್ರೇರಣೆಯಾಗಬೇಕು. ಹೀಗಾಗಿ ಸರ್ಕಾರ,ಮುರಾರ್ಜಿ ದೇಸಾಯಿ ಮಾದರಿಯಲ್ಲೇ ವಸತಿ ಶಾಲೆಗಳನ್ನು ತರುವ ಆಲೋಚನೆ ಮಾಡಲಿ ಎಂದು ಹೇಳಿದರು.
    ಶಿವಾಜಿ ಮಹಾರಾಜರು ಹಿಂದು ಸಮಾಜದ ಸಿಂಹ. ಶೌರ್ಯ, ಸಮರ್ಥ ನಾಯಕತ್ವಕ್ಕೆ ಹೆಸರಾಗಿದ್ದರು. ಬಡವರ ರಾಜನಾಗಿದ್ದರು. ದೊಡ್ಡ ಹುದ್ದೆ ತಲುಪಿದವರು ನೊಂದವರು, ಬಡವರು, ಶೋಷಿತರು ಹಾಗೂ ಮಹಿಳೆಯರ ಪರವಾಗಿರಬೇಕು. ಈ ಸಮಾನತೆಯ ಗುಣ ಶಿವಾಜಿ ಮಹಾರಾಜರಲ್ಲಿತ್ತು ಎಂದರು.
    ಉಪನ್ಯಾಸ ನೀಡಿದ ಹೊಸಪೇಟೆಯ ವಿಶ್ರಾಂತ ಪ್ರಾಧ್ಯಾಪಕ ಡಾ. ವಿಠ್ಠಲರಾವ್ ಟಿ. ಗಾಯಕ್‌ವಾಡ್, 1630 ಫೆ. 19ರಂದು ಶಿವಾಜಿ ಜನಿಸಿದ್ದಾಗಿ ಇತಿಹಾಸತಜ್ಞರು ಖಚಿತಪಡಿಸಿದ್ದಾರೆ. ಕ್ರಿಸ್ತಶಕ 1610ರಿಂದ ಮೊದಲ ಸ್ವಾತಂತ್ರೃ ಸಂಗ್ರಾಮದ ಅವಧಿಯವರೆಗೂ ಮರಾಠದ ಆಳ್ವಿಕೆ ಇತ್ತು. ಮಾತೆ ಜೀಜಾಬಾಯಿ ಇಲ್ಲವಾಗಿದ್ದರೆ ಶಿವಾಜಿ ನಮಗೆ ಸಿಗುತ್ತಿರಲಿಲ್ಲ ಎಂದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ಶಿವಾಜಿ ಅವರಲ್ಲಿ ಸಹಿಷ್ಣುತೆ ಹಾಗೂ ಪರಸ್ತ್ರೀಯರನ್ನು ಗೌರವಿಸುವ ಗುಣಗಳಿದ್ದವು. ಅವನ್ನು ನಾವಿಂದು ಅಳವಡಿಸಿಕೊಳ್ಳಬೇಕು. ಭಾರತೀಯತೆ ಎಂಬುದು ಶಿವಾಜಿ ನಮಗೆ ಕೊಟ್ಟ ಬಳುವಳಿ. ಅದನ್ನು ಅನುಸರಿಸಬೇಕು ಎಂದರು.
    ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ ಮೊಗಲರ ದಬ್ಬಾಳಿಕೆ ವಿರುದ್ಧವಾಗಿ ಹಿಂದು ಧಮ್ದ ಉಳಿವಿಗಾಗಿ ಶಿವಾಜಿ ಹೋರಾಟ ಮಾಡಿದರೇ ಹೊರತು ಯಾವುದೇ ಸಮಾಜದ ವಿರುದ್ಧವಾಗಿ ಅಲ್ಲ. ಅವರ ವಂಶಸ್ಥರಾದ ನಾವು ಅವರ ಆದರ್ಶ ಪಾಲಿಸುತ್ತಿದ್ದೇವೆಯೆ ಎಂಬುದು ಅವಲೋಕಿಸಬೇಕಿದೆ ಎಂದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘ, ಜೀಜಾಮಾತಾ ಮಹಿಳಾ ಮಂಡಳಿ, ಶಿವ ಛತ್ರಪತಿ ಶಿವಾಜಿ ಮಹಾರಾಜರ ಯುವಕ ಸಂಘದ ಸಹಯೋಗದಲ್ಲಿನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ 24 ಸಾಧಕರನ್ನು ಸನ್ಮಾನಿಸಲಾಯಿತು. ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಮಾಲತೇಶರಾವ್ ಜಾಧವ್, ಉಪಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್, ಎಚ್.ಎಸ್. ಗಣೇಶರಾವ್ ಪವಾರ್, ಎಂ. ಗೋಪಾಲರಾವ್ ಮಾನೆ, ಜಿ. ಯಲ್ಲಪ್ಪ ಢಮಾಳೆ, ವೈ. ಮಲ್ಲೇಶ್, ಗೌರಾಬಾಯಿ ಮೋಹಿತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts