More

    ಚುನಾವಣೆ ಸುದ್ದಿಗಳಲ್ಲಿ ಇರಲಿ ಸಮತೋಲನ


    ಚಿತ್ರದುರ್ಗ: ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ ಹಿರಿದಾಗಿದ್ದು,ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳಾನುಸಾರ ಕಾ ರ‌್ಯ ನಿರ್ವಹಿಸಲು ಮಾಧ್ಯಮಗಳ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರು ಹೇಳಿದರು.

    ನಗರದ ಡಿಸಿ ಕಚೇರಿಯಲ್ಲಿ ಬುಧವಾರ ಮಾಧ್ಯಮ ಪ್ರಮಾಣೀಕರಣ ಹಾಗೂ ನಿಗಾ ಸಮಿತಿ ಏರ್ಪಡಿಸಿದ್ದ ಮಾಧ್ಯಮ ಕಾರ‌್ಯಾಗಾರದ ಲ್ಲಿ ಮಾತನಾಡಿದ ಅವರು,ವಿಶೇಷವಾಗಿ ಈ ಹೊತ್ತಿನಲ್ಲಿ ಮಾಧ್ಯಮಗಳಿಂದ ವಸ್ತುನಿಷ್ಠ ವರದಿಗಳನ್ನು ನಿರೀಕ್ಷಿಸಲಾಗಿದೆ.

    ಚುನಾವಣಾ ಸುದ್ದಿ ಗಳಲ್ಲಿ ಸಮತೋಲನ ಕಾಪಾಡಿಕೊಳ್ಳ ಬೇಕಿದೆ. ವಿದ್ಯುನ್ಮಾನ ಮಾಧ್ಯಮ,ಸಾಮಾಜಿಕ ಜಾಲತಾಣಗಳಲ್ಲಿಯ ಜಾಹೀರಾತುಗಳಿಗೆ ಜಿಲ್ಲಾ ಎಂಸಿಎಂಸಿಯಿಂದ ಪ್ರಮಾಣೀಕರಣ ಕಡ್ಡಾಯ ಹಾಗೂ ಇ -ಪತ್ರಿಕೆಗಳ ಜಾಹೀರಾತುಗಳಿಗೂ ಪೂರ್ವಾನುಮತಿ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಹೇಳಿದರು. ಸುಪ್ರೀಂಕೋರ್ಟ್ ಆದೇಶದಂತೆ ಎಲೆಕ್ಟ್ರಾನಿಕ್ ಮಾಧ್ಯಮ ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಪ್ರಚಾರಕ್ಕೆ ಪೂ ರ್ವಾನುಮತಿ ಕಡ್ಡಾಯ.

    ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಪೂರ್ವಾನುಮತಿ ಅಗತ್ಯವಿಲ್ಲ. ಆದರೆ ಮತದಾನ ಕೊನೆಗೊಳ್ಳುವ 48 ಗಂಟೆ ಮೊ ದಲು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಗೊಳಿಸಿರುವ ಜಾಹೀರಾತುಗಳಿಗೆ ಪ್ರಮಾಣೀಕರಣ ಪಡೆಯುವುದು ಅಗತ್ಯವಿದೆ.

    ಪ್ರಮಾಣೀ ಕರಣ ಪಡೆಯಲು 2 ದಿನಗಳ ಮೊದಲು ಅರ್ಜಿ ಸಲ್ಲಿಸಬೇಕು ಎಂದರು. ಜಾಹೀರಾತು ವೆಚ್ಚವನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು. ನಾಮಪತ್ರ ಸಲ್ಲಿಕೆ ದಿನಾಂಕ ವೆಚ್ಚದ ಲೆಕ್ಕ ಹಾಕಲಾಗ ವುದು. ಅಭ್ಯರ್ಥಿ ಪರ ಬರಹ,ಸುದ್ದಿಯನ್ನು ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಲಾಗುತ್ತದೆ. ಚುನಾವಣಾಧಿಕಾರಿ ಅಭ್ಯರ್ಥಿಗೆ ನೋಟಿ ಸ್ ಜಾರಿಗೊಳಿಸಲಿದ್ದು,ಕಾಸಿಗಾಗಿ ಸುದ್ದಿ ಎಂದು ಖಚಿತಗೊಂಡರೆ ಆಯೋಗಕ್ಕೆ ಮಾಹಿತಿ ಸಲ್ಲಿಸಲಾಗುವುದು.

    ಈ ಪ್ರಕರಣಗಳಲ್ಲಿ ಜನಪ್ರತಿನಿಧಿಗಳು ಅನರ್ಹಗೊಂಡಿರುವ ಉದಾಹರಣೆಗಳು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿವೆ. ಕಾಸಿ ಗಾಗಿ ಸುದ್ದಿ ಪರಿಶೀಲನೆಗೆ, ಜಾಹೀರಾತು ಗಳ ಪ್ರಮಾಣೀಕರಣಕ್ಕೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಾಧ್ಯಮ ಮತ್ತು ಕಣ್ಗಾವಲು ಸಮಿತಿ ರಚಿಸ ಲಾಗಿದೆ ಎಂದರು. ಜಿಪಂ ಸಿಇಒ ಎಂ.ಎಸ್.ದಿವಾಕರ್, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಎಂಸಿಎಂಸಿ ನೋಡಲ್ ಅಧಿಕಾರಿ ಗಾಯತ್ರಿ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂ ರಾವ್, ಚುನಾವಣಾ ವೆಚ್ಚದ ನೋಡಲ್ ಅಧಿಕಾರಿ ಮಧು ಹಾಗೂ ಮಾಧ್ಯಮದ ಪ್ರತಿನಿಧಿಗಳಿದ್ದರು.

    ಕೋಟ್*
    ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಒಂದು ದಿನ ಮೊದಲು ಚುನಾವಣಾ ವೆಚ್ಚಗಳ ಉದ್ದೇಶಕ್ಕಾಗಿಯೇ ಪ್ರತ್ಯೇಕವಾಗಿ ಬ್ಯಾಂಕ್ ಖಾತೆಯನ್ನು ಹೊಸದಾಗಿ ತೆರೆಯಬೇಕು. ಈ ಖಾತೆಯಿಂದಲೇ ಪ್ರತಿ ವೆಚ್ಚದ ಮಾಹಿತಿ ನೀಡಬೇಕು. ಅಭ್ಯರ್ಥಿ ಚುನಾವಣಾ ವೆಚ್ಚದ ಗರಿಷ್ಠ ಮಿತಿ 40 ಲಕ್ಷ ರೂ.ನಿಗದಿಗೊಳಿಸಲಾಗಿದೆ.
    ಎಂ.ಎಸ್.ದಿವಾಕರ, ಸಿಇಒ, ಜಿಪಂ, ಚಿತ್ರದುರ್ಗ

    ಕೋಟ್*
    ಪ್ರಜಾಪ್ರಭುತ್ವದ ಈ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿರುವ ಮಾಧ್ಯಮ ರಂಗದ ಪಾತ್ರ ಚುನಾವಣೆಯ ವೇಳೆ ಇ ನ್ನೂ ಹೆಚ್ಚಿನ ರೀತಿಯಲ್ಲಿ ಪಾರದರ್ಶಕವಾಗಿರಬೇಕು.
    ಗಾಯತ್ರಿ, ಎಂಸಿಎಂಸಿ ನೋಡಲ್ ಅಧಿಕಾರಿ, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts