More

    ಚಿತ್ರಕಲೆಯಲ್ಲಿ ಮಿಂಚುತ್ತಿರುವ ಹೈದ

    ಶಶಿಧರ ಕುಲಕರ್ಣಿ ಮುಂಡಗೋಡ

    ಬಾಲ್ಯದಿಂದಲೂ ಅಪಾರ ಆಸಕ್ತಿ ಹೊಂದಿದ್ದ ಯುವಕನಿಗೆ ಚಿತ್ರಕಲೆ ಕೈಹಿಡಿದಿದೆ. ವಿಶೇಷ ಸಾಧನೆ ಮೂಲಕ ಈತ ಮನೆ ಮಾತಾಗಿದ್ದಾನೆ.

    ಪಟ್ಟಣದ ಕಂಬಾರಗಟ್ಟಿ ಬಡಾವಣೆಯ ಸಂತೋಷ ಕುಸನೂರ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ. ಮನೆಯ ಆರ್ಥಿಕ ಪರಿಸ್ಥಿತಿಯಿಂದ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸಲಾಗಲಿಲ್ಲ. ಆದರೂ, ಎದೆಗುಂದದೆ ತನಗೆ ತಿಳಿದ ಚಿತ್ರಗಳನ್ನು ಚಿತ್ರಿಸುತ್ತ ಪ್ರೌಢಶಾಲೆಯಲ್ಲಿ ಶಿಕ್ಷಕರು ನೀಡಿದ ಪ್ರೋತ್ಸಾಹದಿಂದ ಈಗ ಚಿತ್ರಕಲೆಯ ಬಿವಿಎ (ಬ್ಯಾಚುಲರ್ ಆಫ್ ವಿಸ್ಯುವಲ್ ಆರ್ಟ್ಸ್) ಕೋರ್ಸ್​ನ ದ್ವಿತೀಯ ವರ್ಷದಲ್ಲಿ ಓದುತ್ತಿದ್ದಾನೆ.

    ಥರ್ವಕಾಲ್ ಕಟಿಂಗ್, ವಾಲ್ ಆರ್ಟ್​ಗಳಿಂದ ಗಮನ ಸೆಳೆದಿದ್ದಾನೆ. ಶಿವನ ವಾಲ್ ಆರ್ಟ್, ಮರದ ರೆಂಬೆಯಲ್ಲಿ ತೂಗುವ ಪಂಜರ, ಕೊಂಬೆಯ ಮೇಲೆ ಕುಳಿತ ಹಕ್ಕಿ ಗೋಡೆಯ ಅಂದ ಹೆಚ್ಚಿಸುವುದರ ಜತೆಗೆ ಕಣ್ಣಿಗೆ ಮುದ ನೀಡುತ್ತದೆ. ಹೋರಿ ಬೆದರಿಸುವ ಕಾರ್ಯಕ್ರಮಗಳಲ್ಲಿ ಬಾವುಟಗಳ ಮೇಲೆ ಚಿತ್ರ, ವ್ಯಕ್ತಿ, ವಸ್ತು ಮತ್ತು ಪ್ರಾಣಿಗಳ ನೇರ ಚಿತ್ರಣ, ನೀರಬಣ್ಣ, ನಿಸರ್ಗ ಚಿತ್ರಣ, ಸೃಜನಶೀಲ ಚಿತ್ರಣಗಳನ್ನು ಬಿಡಿಸಿ ಭೇಷ್ ಎನಿಸಿಕೊಂಡಿದ್ದಾನೆ.

    ಭವಿಷ್ಯದಲ್ಲಿ ಉತ್ತಮ ಕಲಾವಿದ, ಚಲನಚಿತ್ರದ ನಿರ್ದೇಶಕನಾಗುವ ಆಸೆಯಿಂದ ಅದರ ಪೂರ್ವ ಸಿದ್ಧತೆಯೊಂದಿಗೆ ಚಿತ್ರಕಲೆಯಲ್ಲಿ ಸೇವೆ ಸಲ್ಲಿಸುವ ಹಂಬಲದಲ್ಲಿದ್ದೇನೆ. | ಸಂತೋಷ ಕುಸನೂರ ಚಿತ್ರ ಕಲಾವಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts