More

    ಚಾಂಗದೇವರ ಜಾತ್ರೆಗೆ ಕರೊನಾ ಭೀತಿ

    ನವಲಗುಂದ: ಕರೊನಾ ಭೀತಿಯಿಂದ ತಿಂಗಳ ಪರ್ಯಂತ ನಡೆಯುವ ತಾಲೂಕಿನ ಯಮನೂರ ಚಾಂಗದೇವನ ಜಾತ್ರೆಗೆ ಭಕ್ತರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ಸೋಮವಾರ ದೇವಸ್ಥಾನದ ಆವರಣ, ಪುಣ್ಯಸ್ನಾನದ ಬೆಣ್ಣೆಹಳ್ಳ, ದೇವರ ದರ್ಶನಕ್ಕಾಗಿ ಹಾಕಿರುವ ಟೆಂಟ್​ ಭಕ್ತರಿಲ್ಲದೆ ಬಿಕೋ ಎನ್ನುತ್ತಿದ್ದವು.

    ಭಕ್ತರ ನಂಬಿಕೆಯಂತೆ ಪಾಪ, ಚರ್ಮ ರೋಗಗಳ ನಿವಾರಿಸುವ ಬೆಣ್ಣೆಹಳ್ಳದ ನೀರಿನಲ್ಲಿ ಸ್ನಾನ ಮಾಡುವ ಜನರು ಅಷ್ಟಾಗಿ ಕಾಣಸಲಿಲ್ಲ.ಬೆಂಡು-ಬೆತ್ತಾಸು, ತಿಂಡಿ-ತಿನಿಸು, ಬಳೆಗಳು, ಕಬ್ಬಿಣ, ಕಟ್ಟಿಗೆ ಗೃಹ ಬಳಕೆ ವಸ್ತುಗಳು, ಮಕ್ಕಳ ಆಟಿಕೆಗಳು, ಹಣ್ಣುಗಳ ಮಾರಾಟಗಾರರು, ಹೋಟೆಲ್​ನವರು ವ್ಯಾಪಾರವಿಲ್ಲದೆ ನಷ್ಟ ಅನುಭವಿಸುವಂತಾಗಿದೆ. ವ್ಯಾಪಾರಸ್ಥರು ಒಬ್ಬೊಬ್ಬರಾಗಿ ತಮ್ಮೂರಿಗೆ ಟೆಂಟ್ ಕಿತ್ತೊು್ಯುತ್ತಿದ್ದರೆ, ಭಕ್ತರು ಮರಳಿ ತೆರಳುತ್ತಿದ್ದ ದೃಶ್ಯ ಕಂಡುಬಂತು.

    ಕೆಲವು ಭಕ್ತರು, ಅಂಗಡಿಕಾರರು ಬಾಯಿಗೆ ಮಾಸ್ಕ್ ಧರಿಸಿದ್ದರು. ಅಂಗಡಿಗಳ ಮುಂದೆ ಬಿಸಾಕಿದ್ದ ತ್ಯಾಜ್ಯವನ್ನು ಸುಟ್ಟು, ಶುಚಿಗೊಳಿಸಿದ ಆವರಣದಲ್ಲಿ ಧೂಳು ಮೇಲೇಳದಂತೆ ನೀರು ಚಿಮುಕಿಸಲಾಯಿತು.

    ಯಮನೂರ ಗ್ರಾಪಂ ಆಡಳಿತದೊಂದಿಗೆ ತಹಸೀಲ್ದಾರ್ ನವೀನ ಹುಲ್ಲೂರ, ತಾಲೂಕು ವೈದ್ಯಾಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಕರೊನಾ ಹತೋಟಿಗೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಭಕ್ತರು ಗುಂಪಾಗಿ ಬರುವುದು, ಚಾಂಗದೇವನ ದರ್ಶನಕ್ಕೆ ಸರದಿಯಲ್ಲಿ ಬರá-ವುದನ್ನು ಸ್ಥಗಿತಗೊಳಿಸಿದ್ದಾರೆ. ಜಾತ್ರೆ ಉದ್ದಗಲಕ್ಕೂ ಭಕ್ತರು, ವ್ಯಾಪಾರಸ್ಥರಿಗೆ ಕರೊನಾ ವೈರಾಣು ಜಾಗೃತಿ ಫಲಕಗಳನ್ನು ಅಳವಡಿಸಿದ್ದಾರೆ. ಧ್ವನಿವರ್ಧಕ ಮೂಲಕ ಅರಿವು ಮೂಡಿಸಿ ಕಟ್ಟೆಚ್ಚರ ವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts