More

    ಚಟುವಟಿಕೆ ಆಧಾರಿತ ತರಬೇತಿ ಕಾರ್ಯಾಗಾರ

    ಹುಬ್ಬಳ್ಳಿ: ಏಕಸ್ ಪ್ರತಿಷ್ಠಾನ, ಸೋನಾಟಾ ಸಾಫ್ಟವೇರ್, ಅಗಸ್ಱ ಅಂತಾರಾಷ್ಟ್ರೀಯ ಪ್ರತಿಷ್ಠಾನ ಮತ್ತು ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಧಾರವಾಡ ಜಿಲ್ಲೆಯ 86 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಚಟುವಟಿಕೆಯಾಧಾರಿತ ತರಬೇತಿ ಕಾರ್ಯಾಗಾರ ಇತ್ತೀಚೆಗೆ ಆಯೋಜಿಸಲಾಗಿತ್ತು.

    ಇಲ್ಲಿಯ ಹೊಸೂರಿನ ಅನುಸೂಯಾ ಮೆಳ್ಳಿಗೇರಿ ವಿಜ್ಞಾನ ಮತ್ತು ತರಬೇತಿ ಕೇಂದ್ರ ಹಾಗೂ ಧಾರವಾಡ ಮಾಳಮಡ್ಡಿಯ ಮಾದರಿ ಶಾಲೆಯಲ್ಲಿ ಎರಡು ದಿನ ಕಾರ್ಯಾಗಾರ ನಡೆಸಲಾಯಿತು.

    ಅಗಸ್ಱ ಪ್ರತಿಷ್ಠಾನದ ಪ್ರಾದೇಶಿಕ ಮುಖ್ಯಸ್ಥರಾದ ಡಾ. ಬಬಿತಾ ಅವರು ಮಾತನಾಡಿ, ಅನೇಕ ವರ್ಷಗಳಿಂದ ಧಾರವಾಡ ಜಿಲ್ಲೆಯ ತಾಲೂಕುಗಳಲ್ಲಿ ಪ್ರತಿಷ್ಠಾನದ ಕಾರ್ಯಕ್ರಮಗಳು ನಡೆಯುತ್ತಿವೆ. ವಿಜ್ಞಾನ ಬೋಧನೆಯು ರೋಚಕವೂ, ಆಸಕ್ತಿದಾಯಕವೂ ಆಗಿರಬೇಕೆನ್ನುವ ಆಶಯ ಹಾಗೂ ಶಿಕ್ಷಕರೂ ಚಟುವಟಿಕೆಯಾಧಾರಿತ ಮತ್ತು ಅನುಭವಪೂರಿತ ಕಲಿಕೆಯನ್ನು ಆಶ್ವಾಧಿಸಬೇಕೆನ್ನುವ ಉದ್ದೇಶದಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.

    ಅಗಸ್ಱ ಪ್ರತಿಷ್ಠಾನದ ವಲಯ ಮುಖ್ಯಸ್ಥ ಶಿವಾನಂದ ಚಲವಾದಿ ಮಾತನಾಡಿ, ಪ್ರತಿ ವರ್ಷದಂತೆ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು, ಏಕಸ್ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಆಯ್ದ ಶಾಲೆಗಳ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮೂರನೆ ಬಾರಿಗೆ ಆವಿಷ್ಕಾರ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆ ಮತ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

    ಸಂಪನ್ಮೂಲ ವ್ಯಕ್ತಿ ಬಸವರಾಜ ರಾಮದುರ್ಗ ಮತ್ತು ಬಸವರಾಜ ತಡಹಾಳ, ಸುರೇಶ ಕೊಕಟನೂರ, ಫಕ್ಕಿರೇಶ್ವರ ಮಡಿವಾಳರ, ರಮೇಶ ಅಣ್ಣಿಗೇರಿ ಇವರು ವಿಜ್ಞಾನ ವಿಷಯದ ಬೆಳಕು, ಆಮ್ಲ, ಪ್ರತ್ಯಾಮ್ಲ, ಲವಣಗಳು ಮತ್ತು ಉಸಿರಾಟ ಕ್ರಿಯೆಯ ಕುರಿತು ಪ್ರಯೋಗಗಳನ್ನು ಮಾಡಿಸಿ ಶಿಕ್ಷಕರಿಗೆ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts