More

    ಗ್ಲೋಬಲ್ ಯೋಗ ಸಮ್ಮೀಟ್ 17ರಿಂದ, ಬೆಂಗಳೂರಿನಲ್ಲಿ ರೋಟರಿ ಕ್ಲಬ್ ಆಯೋಜನೆ

    ಹುಬ್ಬಳ್ಳಿ: ರೋಟರಿ ಬೆಂಗಳೂರು ಗ್ಲೋಬಲ್ ಯೋಗ (ಆರ್​ಬಿಜಿವೈ) ವತಿಯಿಂದ ಗ್ಲೋಬಲ್ ಯೋಗ ಸಮ್ಮೀಟ್ 2022 ಅನ್ನು ಬೆಂಗಳೂರಿನ ಯಲಹಂಕದಲ್ಲಿರುವ ರಾಯಲ್ ಆರ್ಕಿಡ್ ರೆಸಾರ್ಟ್​ನಲ್ಲಿ ಡಿ. 17ರಿಂದ ಎರಡು ದಿನಗಳವರೆಗೆ ಏರ್ಪಡಿಸಲಾಗಿದೆ ಎಂದು ರೋಟರಿಯನ್ ಡಾ. ಸಿ.ಆರ್. ಡವಳಗಿ ತಿಳಿಸಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗದ ಮಹತ್ವ ಹಾಗೂ ಆನಂದವನ್ನು ಎಲ್ಲರಿಗೂ ಉಣಬಡಿಸುವ ಉದ್ದೇಶದಿಂದ ಈ ಸಮ್ಮೇಳನ ಆಯೋಜಿಸಲಾಗಿದೆ. ದೇಶ- ವಿದೇಶದ ಸುಮಾರು 1,500 ಪ್ರತಿನಿಧಿಗಳು, 50ಕ್ಕೂ ಹೆಚ್ಚು ಯೋಗಾಚಾರ್ಯರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.

    ಜಾಗತಿಕವಾಗಿ ಎಲ್ಲರಿಗೂ ಉತ್ತಮ ಆರೋಗ್ಯ ಒದಗಿಸಬೇಕು, ಅದರ ಜತೆಗೆ ಯೋಗದ ಬಗ್ಗೆ ಹೆಚ್ಚಿನ ಆಸಕ್ತಿ ಇರುವವರು, ನ್ಯಾಚುರೊಪಥಿ ಹಾಗೂ ಆಯುಶ್ ತಜ್ಞರು ಒಂದೆಡೆ ಸೇರಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆ ಒದಗಿಸುವ ಆಶಯ ಇದೆ ಎಂದರು.

    ಸಂಶೋಧಕರು ಹಾಗೂ ಪರಿಣಿತರು ಯೋಗದ ಬಗ್ಗೆ ತಾವು ಕಂಡುಕೊಂಡ ಸತ್ಯಗಳು, ಅದರಿಂದ ಆರೋಗ್ಯದಲ್ಲಿ ಆದ ಸುಧಾರಣೆಗಳ ಬಗ್ಗೆ ಇಲ್ಲಿ ಅನಿಸಿಕೆ ಹೇಳಿಕೊಳ್ಳಲಿದ್ದಾರೆ. ಇದಕ್ಕಾಗಿ ತಾಂತ್ರಿಕ ಹಾಗೂ ಯೋಗ, ಹೋಲಿಸ್ಟಿಕ್ ಹೆಲ್ತ್ ಬಗ್ಗೆ ಗೋಷ್ಠಿಗಳನ್ನು ಏರ್ಪಡಿಸಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ 5 ಸಾವಿರ ಸ್ವಯಂ ಸೇವಕರನ್ನು ತಯಾರು ಮಾಡಿ ಅವರಿಗೆ ಪ್ರಮಾಣ ಪತ್ರ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

    ಉತ್ತರ ಕರ್ನಾಟಕ ಭಾಗದಿಂದ ಸುಮಾರು 600 ಜನರು ಭಾಗಿಯಾಗುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳು, ರೋಟರಿ ಕ್ಲಬ್, ಹಾಸ್ಪಿಟಲ್, ರೀಸರ್ಚ್ ಔಟ್​ಸೋರ್ಸಿಂಗ್ ಸೆಂಟರ್ಸ್, ನ್ಯಾಷನಲ್- ಇಂಟರ್​ನ್ಯಾಷನಲ್ ಯುನಿವರ್ಸಿಟಿ, ಯೋಗ ಕೇಂದ್ರಗಳು, ಯೋಗ ಗುರುಗಳು ಎನ್​ಜಿಒಗಳು ಮುಂತಾದವರು ಇದರಲ್ಲಿ ಭಾಗಿಯಾಗಬಹುದಾಗಿದೆ.

    ಜೀವನವನ್ನು ಸಾರ್ಥಕತೆಯ ಕಡೆಗೆ ಕೊಂಡೊಯ್ಯಲು ಯೋಗ ಸಹಕಾರಿಯಾಗಿದೆ. ಈ ದಿಸೆಯಲ್ಲಿ ಸಮ್ಮೇಳನ ಹೆಚ್ಚು ಉಪಯುಕ್ತವಾಗಲಿದೆ ಎಂದು ಯೋಗ ಸ್ಟಡಿ ಸೆಂಟರ್ ನಿರ್ದೇಶಕ ಡಾ. ಎಂ. ಈಶ್ವರ ಅವರು ಹೇಳಿದರು.

    ಅಮೆರಿಕದ ಯೋಗ ವಿಶ್ವವಿದ್ಯಾಲಯದ ಕುಲಪತಿ ಡಾ. ಯೋಗಿ ದೇವರಾಜ ಗುರೂಜಿ ಮಾತನಾಡಿ, ಔಷಧಿಗಳಿಲ್ಲದೇ ಚಿಕಿತ್ಸೆ ನೀಡಬಹುದಾದ ಯೋಗವನ್ನು ವಿಶ್ವದಾದ್ಯಂತ ಪ್ರಸಾರ ಮಾಡುವ ಉದ್ದೇಶದಿಂದ ಸಂಘಟನೆಯು ಹಲವು ಯೋಜನೆಗಳನ್ನು ಹಾಕಿಕೊಂಡಿದೆ ಎಂದರು.

    ಮುತ್ತಪ್ಪ ನಲವಡಿ, ಜ್ಯೋತಿ ಹಿರೇಮಠ, ಗಿರೀಜಾ, ಇತರರು ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts