More

    ಗ್ರಾಹಕರ, ರೈತರ ಸಮಸ್ಯೆಗೆ ಸ್ಪಂದಿಸಿ

    ಆಳಂದ: ವಿವಿಧ ಇಲಾಖೆಗಳ ಮೇಲ್ಮಟ್ಟದ ಅಧಿಕಾರಿಗಳು ಗ್ರಾಹಕರು ಮತ್ತು ಸಿಬ್ಬಂದಿಯನ್ನು ಸ್ವಂತ ಕುಟುಂಬದವರಂತೆ ಕಾಣಬೇಕು. ಅಲ್ಲದೆ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸುಭಾಷ ಗುತ್ತೇದಾರ್ ಸಲಹೆ ನೀಡಿದರು.
    ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜೆಸ್ಕಾಂ ಅಧಿಕಾರಿಗಳ, ಸಿಬ್ಬಂದಿ ಹಾಗೂ ಗ್ರಾಹಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಬೇಸಿಗೆ ಆರಂಭವಾಗುತ್ತಿದ್ದು ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು. ಕುಡಿವ ನೀರಿನ ಪಂಪ್ಸೆಂಟ್ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಇಲಾಖೆ ಸಿಬ್ಬಂದಿ 24 ಗಂಟೆಗೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
    ರೈತರಿಗೆ ಕನಿಷ್ಟ 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಯಾವುದೇ ಕುಂಟು ನೆಪ ಹೇಳದೆ ಸುಟ್ಟ ಟಿಸಿಗಳನ್ನು ರಿಪೇರಿ ಮಾಡಬೇಕು. ರೈತರಿಂದ ಯಾವುದೇ ಹಣ ಪಡೆಯಬೇಡಿ. ಗ್ರಾಹಕರು ಹಾಗೂ ರೈತರ ಕರೆಗಳನ್ನು ಸ್ವೀಕರಿಸಿ, ಸಮಸ್ಯೆಗೆ ಸ್ಪಂದಿಸಬೇಕು. ಆಳಂದ ಮತ್ತು ಕಡಗಂಚಿ ಉಪ ವಿಭಾಗಗಳ ಮಧ್ಯೆ ಒಂದು ಸಹಾಯವಾಣಿ ಸ್ಥಾಪಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಜೆಸ್ಕಾಂ ನಿರ್ದೇಶಕ ವೀರಣ್ಣ ಮಂಗಾಣೆ, ಎನ್ಈಕೆಆರ್ಟಿಸಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ್, ಪುರಸಭೆ ಅಧ್ಯಕ್ಷೆ ರಾಜಶ್ರೀ ಖಜೂರೆ, ಉಪಾಧ್ಯಕ್ಷ ವೀರಣ್ಣ ಹತ್ತರಕಿ, ಬಿಜೆಪಿ ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ್, ಪ್ರಮುಖರಾದ ಅಶೋಕ ಗುತ್ತೇದಾರ್, ಶಿವಪುತ್ರಪ್ಪ ಪಾಟೀಲ್ ಮುನ್ನಹಳ್ಳಿ, ಸಂತೋಷ ಚವ್ಹಾಣ್, ಮಾಣಿಕರಾವ ಕುಲಕರ್ಣಿ , ಸುನೀಲಕುಮಾರ, ಸುಮೀತಕುಮಾರ, ಥಾಮಸ್ ಭಾವಿಕಟ್ಟಿ, ರಾಮರಾವ ತೋಳೆ, ಪರಮೇಶ್ವರ ಬಡಿಗೇರ, ಅಮೃತ ಅಲ್ಲಾಪುರೆ, ಜ್ಞಾನೇಶ್ವರ, ಮೈಸೂರ ಜಾಧವ್, ಪ್ರಭಾಕರ, ಶ್ರೀಶೈಲ ನಾಯ್ಕೋಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts