More

    ಗ್ರಾಮೀಣ ಕ್ರೀಡೆ ಬೆಳೆಸಲು ಪ್ರೋತ್ಸಾಹ ಅಗತ್ಯ

    ನಾಗರಮುನ್ನೋಳಿ, ಬೆಳಗಾವಿ: ಅಳಿವಿನಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸಿ ಬೆಳೆಸುವುದು ಅವಶ್ಯವಿದೆ ಎಂದು ಜಿಪಂ ಮಾಜಿ ಸದಸ್ಯ ಪವನ ಕತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಸಿದ್ಧೇಶ್ವರ ಜಾತ್ರೆ ಅಂಗವಾಗಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಅಂತಾರಾಜ್ಯ ಮಟ್ಟದ ಪುರುಷ ಹಾಗೂ ಮಹಿಳಾ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಮೊಬೈಲ್, ಕಂಪ್ಯೂಟರ್‌ಗಳಲ್ಲಿ ಕಾಲ ಕಳೆಯುತ್ತಿದ್ದು, ಆಟಗಳಲ್ಲಿ ಪಾಲ್ಗೊಳ್ಳುವುದು ಕಡಿಮೆಯಾಗಿದೆ. ಕ್ರೀಡೆಗಳಿಂದ ದೇಹ ಆರೋಗ್ಯದಿಂದಿರುತ್ತದೆ ಎಂದರು.

    ಬಸವಜ್ಯೋತಿ ೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಯುವ ಸಮುದಾಯ ಆರೋಗ್ಯವಾಗಿರಲು ಮನೆಗೊಬ್ಬ ಕುಸ್ತಿ, ಕಬಡ್ಡಿ ಪಟುಗಳನ್ನು ಬೆಳೆಸಲು ಮುಂದಾಗಬೇಕು ಎಂದರು. ಮಾಹಾಲಿಂಗೇಶ್ವರ ಸಂಸ್ಥೆಯ ಅಧ್ಯಕ್ಷ ಅರುಣ ಐಹೊಳೆ ಮಾತನಾಡಿದರು. ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕರ್ನಾಟಕ ಡಬಲ್ ಕೇಸರಿ ಕಾರ್ತಿಕ ಕಾಟೆಗೆ ಒಂದು ಕೆಜಿ ಬೆಳ್ಳಿಗದೆ ಹಾಗೂ ಬಹುಮಾನ ನೀಡಲಾಯಿತು. ಮಹಿಳಾ ವಿಭಾಗದಲ್ಲಿ ನ್ಯಾಷನಲ್ ಚಾಂಪಿಯನ್ ರಾಧಿಕಾ ಗದಗ ಪ್ರಥಮ ಸ್ಥಾನ ಪಡೆದರು. ಯುವ ಧುರೀಣ ಶಿವರಾಜ ಪಾಟೀಲ, ಸಮಾಜ ಸೇವಕ ಪ್ರದೀಪ ಮಾಳಗಿ, ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ, ವೈದ್ಯ ಡಾ. ಎಂ.ಬಿ.ಕುಂಬಾರ, ಮಲ್ಲಪ್ಪ ಟೋನಪೆ, ಸಿದ್ದಪ್ಪ ಮರ‌್ಯಾಯಿ, ವಿ.ಬಿ.ಈಟಿ, ಎಂ.ಎಸ್.ಈಟಿ, ಶಿವಾನಂದ ಮರ‌್ಯಾಯಿ, ರಮೇಶ ಕಾಲನ್ನವರ, ಲಕ್ಷ್ಮೀಸಾಗರ ಈಟಿ, ಬಸವರಾಜ ಮನಗೂಳಿ, ವಿನಾಯಕ ಕುಂಬಾರ, ಲಕ್ಷಣ್ಮ ಪೂಜೇರಿ, ಅರುಣ ಮರ‌್ಯಾಯಿ, ಸಿದ್ದು ಈಟಿ, ಎಂ.ಬಿ.ಆಲೂರೆ, ಮಹಾದೇವ ಚೌಗಲಾ, ಶಿವಪುತ್ರ ಮನಗೂಳಿ, ಬಸವಣ್ಣಿ ಕುಂಬಾರ, ನಿಜಾಮ್ ಫೆಂಡಾರಿ, ಮಾರುತಿ ಮರ‌್ಯಾಯಿ, ಅನಿಲ ಈಟಿ, ರಾಜು ಯಾದಗೂಡೆ, ಚನ್ನಬಸು ಮನಗೂಳಿ, ಬಸವರಾಜು ಕುಂಬಾರ, ರಮೇಶ ಕುಂಬಾರ, ಬಸವರಾಜ ಘೋಡಗೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts