More

    ಗ್ರಾಮಾಡಳಿತಾಧಿಕಾರಿ,ಸರ್ವೆಯರ್ ಹುದ್ದೆಗಳ ಭರ್ತಿಗೆ ಚಾಲನೆ

    ಚಿತ್ರದುರ್ಗ: ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮಾಡಳಿತಾಧಿಕಾರಿಗಳ(ವಿಎ)ಹಾಗೂ ಸರ್ವೆಯರ್ ಹುದ್ದೆಗಳ ಭರ್ತಿ ಪ್ರಕ್ರಿಯೆ ಈಗಾ ಗಲೇ ನಮ್ಮ ಸರ್ಕಾರ ಚಾಲನೆ ನೀಡಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.
    ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾಲ್ಕೈದು ತಿಂಗಳ ಒಳಗೆ 1000-1500 ವಿಎಗಳ ನೇಮಕಕ್ಕೆ ಪ್ರಕ್ರಿಯೆಗೊಳಿಸಲು ಹಾಗೂ ಒಂದು ಸಾವಿರ ಲೈಸೆನ್ಸ್ ಸರ್ವೆಯರ್ ಹುದ್ದೆಗಳ ಭರ್ತಿಗೂ ಕ್ರಮ ವಹಿಸಲಾಗುತ್ತಿದೆ. ಡಿಸೆಂಬರ್-ಜನವರಿ ಯೊಳಗೆ ಲೈಸೆನ್ಸ್ ಸರ್ವೆಯರ್ ನೇಮಕ ಪೂರ್ಣಗೊಳಿಸಲಾಗುವುದು. 357 ಸರ್ಕಾರಿ ಸರ್ವೆಯರ್ ಹುದ್ದೆಗಳ ಭರ್ತಿಗೂ ಉದ್ದೇಶಿಸ ಲಾಗಿದೆ.
    ತಹಸೀಲ್ದಾರ್ ಕಚೇರಿಗಳ ರೆಕಾರ್ಡ್ ರೂಂ.ಗಳು ಶಿಥಿಲಾವಸ್ಥೆಯಿಂದ ಕೂಡಿರುವುದು ಶೋಚನೀಯವಾಗಿದ್ದು,ದುರುಪಯೋಗ ತಡೆಯಲು ಹಳೆಯ ದಾಖಲೆಗಳನ್ನು ಸ್ಕಾೃನಿಂಗ್ ಮೂಲಕ ರಕ್ಷಿಸಲಾಗುವುದು.ಈ ಕೆಲಸ ತ್ವರಿತವಾಗಿ ಆರಂಭವಾಗಲಿದೆ ಎಂದರು.
    ಸಂಚು
    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮತ್ತೆ ಜೈಲಿಗೆ ಹೋಗುತ್ತಾರೆಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿರುವು ದು ಅದನ್ನು ನೋಡಿದರೆ,ನಮ್ಮ ನಾಯಕರನ್ನು ಜೈಲಿಗೆ ಕಳಿಸಲೆಂದೇ ಜೆಡಿಎಸ್ ಬಿಜೆಪಿ ಜತೆ ಕೈ ಜೋಡಿಸಿದಂತೆ ಇದೆ. ಅವರ ಈ ಸಂಚನ್ನು ಅವರೇ ಹೇಳಿಕೊಂಡಿದ್ದಾರೆ. ಆದರೆ ನಾವುಗಳ್ಯಾರು ಇಂಥವುದಕ್ಕೆಲ್ಲ ಹೆದರುವುದಿಲ್ಲ.
    ಬಿಜೆಪಿಯವರಂತೆ ಲಂಚ ಹೊಡೆದು,ಶ್ರೀಮಂತರಿಗೆ ನೆರವಾಗುವಂಥ ಪಕ್ಷ ನಮ್ಮದಲ್ಲ,ಬಡವರ ಪರ ಸರ್ಕಾರ ನಮ್ಮದು. ಗ್ಯಾರಂಟಿ ಗಳನ್ನು ಅನುಷ್ಠಾನಗೊಳಿಸಿದ್ದೇವೆ. ಇದನ್ನು ನೋಡಿ ಜೆಡಿಎಸ್- ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಜೆ ಡಿಎಸ್-ಬಿಜೆಪಿಗೆ ಜನ ಪಾಠ ಕಲಿಸಿದ್ದಾರೆ. ಸೇಡಿನ ರಾಜಕಾರಣ ಮುಂದುವರಿಸಿದರೆ ಮುಂದಿನ ಚುನಾವಣೆಗಳಲ್ಲೂ ಪಾಠ ಕಲಿಸುತ್ತಾರೆ ಎಂದು ಹೇಳಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts